ಸಿ.ಟಿ ರವಿಯನ್ನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರು ಪಡಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಕರೆದೊಯ್ಯಲು ಪೊಲೀಸರು ಸಿದ್ದತೆ ಮಾಡಿಕೊಂಡಿದ್ದು, ಬೆಳಗಾವಿಯ ಖಾನಾಪುರ ಪೊಲೀಸ್ ಠಾಣೆಯಿಂದ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರು ಮಾಡಲು ಬೆಂಗಳೂರಿಗೆ ಶಿಫ್ಟ್ ಮಾಡಿದ್ದಾರೆ. ರಾತ್ರಿ ಪೂರ್ತಿ ಬೆಂಗಳೂರಿಗೆ ಪ್ರಯಾಣ ಮಾಡಲಿರುವ ಪೊಲೀಸರು, ಶುಕ್ರವಾರ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.
ಪೊಲೀಸರು ಸಿಟಿ ರವಿಯನ್ನ ಬೆಂಗಳೂರಿಗೆ ಕರೆದುಕೊಂಡು ಬರ್ತಿದ್ದು, ಬೆಂಗಳೂರಿಗೆ ತೆರಳುವ ಮುನ್ನ ಪೊಲೀಸ್ ಠಾಣೆಯಲ್ಲಿ ಕೌಂಟರ್ ಕೇಸ್ ದಾಖಲಿಸಲು ಸಿಟಿ ರವಿ ಒತ್ತಾಯ ಮಾಡಿದ್ದಾರೆ. ಹಲ್ಲೆ ಮಾಡಿರುವವರ ಮೇಲೆ ದೂರು ಕೊಟ್ಟಿದ್ದಾರೆ ಸಿಟಿ ರವಿ. ಆದರೆ ಪೊಲೀಸರು FIR ದಾಖಲು ಮಾಡಿಕೊಂಡಿಲ್ಲ, ಕೇವಲ NCR ಮಾಡಿಕೊಂಡು ಕಳುಹಿಸಿದ್ದಾರೆ ಎನ್ನಲಾಗಿದೆ.
ಶುಕ್ರವಾರ ಬೆಳಗ್ಗೆ ಸಿ.ಟಿ ರವಿ ಅವರನ್ನು ಬೆಂಗಳೂರಿಗೆ ಕರೆತರಲಿರುವ ಪೊಲೀಸರು, ಜನಪ್ರತಿನಿಧಿ ನ್ಯಾಯಲಯದಲ್ಲಿ ಹಾಜರು ಮಾಡಲಿದ್ದಾರೆ. ಸಂಜೆಯೊಳಗೆ ಈ ಪ್ರಕರಣದ ಬಗ್ಗೆ ಸರ್ಕಾರ ಒಂದು ನಿರ್ಧಾರ ತೆಗೆದುಕೊಳ್ಳಲಿದ್ದು, ಸಿಐಡಿ ತನಿಖೆಗೆ ವಹಿಸುವ ಸಾಧ್ಯತೆಯಿದೆ. ಒಂದು ವೇಳೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದರೆ, ಕೋರ್ಟ್ ನಿರ್ಧಾರದ ಮೇಲೆ ಮುಂದಿನ ತೀರ್ಮಾನ ತೆಗೆದುಕೊಳ್ಳಲು ಬೆಳಗಾವಿ ಪೊಲೀಸರು ನಿರ್ಧಾರ ಮಾಡಿದ್ದಾರೆ.
ಬೆಂಗಳೂರಿನ ಜನಪ್ರತಿನಿಧಿ ಕೋರ್ಟ್‌ಗೆ ಸಿಟಿ ರವಿಯನ್ನ ಹಾಜರುಪಡಿಸಲಿರುವ ಪೊಲೀಸರು, ಒಂದು ವೇಳೆ ಕೋರ್ಟ್ ಜಾಮೀನು ನೀಡಿದರೆ ಬಿಟ್ಟು ಕಳುಹಿಸಲಿದ್ದಾರೆ. ಒಂದು ನ್ಯಾಯಾಂಗ ಬಂಧನಕ್ಕೆಕಳುಹಿಸಿದರೆ ಜೈಲಿಗೆ ಬಿಟ್ಟು ಸರ್ಕಾರದ ನಿರ್ಧಾರಕ್ಕೆ ಕಾಯಲಿದ್ದಾರೆ ಎನ್ನಲಾಗಿದೆ. ವಿಧಾನಸೌಧ ಠಾಣೆಗೆ ಕೇಸ್ ವರ್ಗಾವಣೆ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ..