ಮಾಜಿ ಕ್ರಿಕೆಟರ್, ಕನ್ನಡಿಗ ರಾಬಿನ್ ಉತ್ತಪ್ಪ (Robin uttappa) ವಿರುದ್ಧ ಅರೆಸ್ಟ್ ವಾರೆಂಟ್ (Arrest warrant) ಹೊರಡಿಸಲಾಗಿದೆ. ಸರ್ಕಾರಕ್ಕೆ ವಂಚಿಸಿದ ಆರೋಪ ಅವರ ವಿರುದ್ಧ ಕೇಳಿ ಬಂದಿದ್ದು, ಜೊತೆಗೆ ಭವಿಷ್ಯ ನಿಧಿ (PF) ವಂಚನೆ ಆರೋಪ ಕೂಡ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಭಾರತ ತಂಡದ (Team india) ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರ ಬಂಧನಕ್ಕೆ ಅರೆಸ್ಟ್ ವಾರಂಟ್ ಜಾರಿಯಾಗಿದೆ.ರಾಬಿನ್ ಉತ್ತಪ್ಪ ಒಡೆತನದ ಸೆಂಚುರೀಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೇಟ್ ಲಿಮಿಟೆಡ್’ (Centuries life style brand private limited) ಎಂಬ ಖಾಸಗಿ ಕಂಪನಿಯಲ್ಲಿ ಇಲ್ಲಿನ ಕಾರ್ಮಿಕರಿಗೆ ಬರೋಬ್ಬರಿ ಲಕ್ಷ PF ಹಣ ಪಾವತಿಸದೆ ವಂಚಿಸಿದ್ದಾರೆ ಎಂದು ಉದ್ಯೋಗಿಗಳು ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸದ್ಯ ಉತ್ತಪ್ಪ ವಿರುದ್ಧ ವಾರೆಂಟ್ ಜಾರಿಯಾಗಿರುವ ಹಿನ್ನಲೆ, ಯಾವುದೇ ಕ್ಷಣದಲ್ಲಿ ಉತ್ತಪ್ಪ ಬಂಧನವಾಗುವ ಸಾಧ್ಯತೆಯಿದೆ. ಇನ್ನು ಈವರೆಗೆ ರಾಬಿನ್ ಉತ್ತಪ್ಪ ಈ ಆರೋಪಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.