ಬೆಂಗಳೂರು : ಏ.೦5: ಅಕ್ರಮ ಗೋ ಸಾಗಾಟದ ಸಂದರ್ಭದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿಯನ್ನು ಬಂಧಿಸುವಲ್ಲಿ ಖಾಕಿಪಡೆ ಯಶಸ್ವಿಯಾಗಿದೆ. ಕನಕಪುರದ ಸಾತನೂರು ಬಳಿಯಲ್ಲಿ ಶನಿವಾರದಂದು ಇದ್ರಿಷ್ ಪಾಷಾ ಹತ್ಯೆ ನಡೆದಿತ್ತು. ಈ ಪ್ರಕರಣದ ಬಳಿಕ ರಾಷ್ಟ್ರ ರಕ್ಷಣಾ ಪಡೆ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದ್ರಿಷ್ ಪಾಷಾ ಹತ್ಯೆ ಬಳಿಕ ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ತಲೆಮರೆಸಿಕೊಂಡಿದ್ದರು. ಪುನೀತ್ ಸೇರಿದಂತೆ ಐವರನ್ನು ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ. ಬಂಧನಕ್ಕೂ ಮುನ್ನ ಫೇಸ್ಬುಕ್ ಲೈವ್ಗೆ ಬಂದಿದ್ದ ಪುನೀತ್, ನಾನು ಎಲ್ಲಿಯೂ ಹಣಕ್ಕೆ ಬೇಡಿಕೆ ಇಟ್ಟಿಲ್ಲ. ಅಲ್ಲದೇ ನಾನು ಕಾನೂನನ್ನು ಮೀರಿ ಯಾವುದೇ ಕೆಲಸ ಮಾಡಿಲ್ಲ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸೇರಿದಂತೆ ಯಾರೇ ನನ್ನ ವಿರುದ್ಧ ಏನೇ ಮಾಡಿದರೂ ನಾನು ನನ್ನ ಹೋರಾಟ ಬಿಡಲಾರೆ ಎಂದು ಹೇಳಿದ್ದರು.
ಅಲ್ಲದೇ ಅಕ್ರಮ ಗೋ ಸಾಗಣೆ ಕುರಿತು ಆರೋಪಿಸಿದ್ದ ಪುನೀತ್ ಮಂಡ್ಯದ ಹಲಗೂರು, ಸಾತನೂರು ಮಾರ್ಗದಲ್ಲಿ ಈಗಲೂ ಗೋ ಸಾಗಣೆ ನಡೆಯುತ್ತಿದೆ. ಅಲ್ಲದೇ ಇದಕ್ಕೆ ಇಲ್ಲಿನ ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ ಎಂದು ಆರೋಪಿಸಿದ್ದರು.