ಲೋಕಾಯುಕ್ತ ಅಧಿಕಾರಿಗಳು ಮುಡಾ ಕೇಸ್ ತನಿಖೆ ಚುರುಕುಗೊಳಿಸಿದ್ದಾರೆ.. A4 ದೇವರಾಜ್ ಲೋಕಾಯುಕ್ತ ಕಚೇರಿಗೆ ಆಗಮಿಸಿ ವಿಚಾರಣೆಗೆ ಒಳಗಾಗಿದ್ದಾರೆ.. ಪ್ರಕರಣ ಬೆಳಕಿಗೆ ಬಂದಾಗಿನಿಂದ ದೇವರಾಜ್ ಎಲ್ಲೂ ಕಾಣಿಸಿಕೊಂಡಿರಲಿಲ್ಲ.. ಕೆಸರೆ ಗ್ರಾಮದ ಸರ್ವೆ ನಂಬರ್ 464ರ 3.16 ಜಮೀನು ಮಾರಾಟ ಮಾಡಲಾಗಿತ್ತು.. ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿಗೆ ಮಾರಾಟ ಮಾಡಿದ್ದರು.. ಈ ಸಂಬಂಧ ಇಂದು ವಿಚಾರಣೆಗೆ ದೇವರಾಜ್ ಹಾಜರಾಗಿದ್ದಾರೆ. ಕೆಲ ದಾಖಲೆಗಳ ಜೊತೆಗೆ ಬಂದಿದ್ದಾರೆ. ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಕೂಡ ವಿಚಾರಣೆ ಹಾಜರಾಗಿದ್ದಾರೆ.
ಸಿಎಂ ಬಾಮೈದನನ್ನ ಕೂಡಲೇ ಬಂಧಿಸಬೇಕು ಎಂದು ಮೈಸೂರಿನಲ್ಲಿ ಆರ್ ಟಿಐ ಕಾರ್ಯಕರ್ತ ಗಂಗರಾಜು ಆಗ್ರಹ ಮಾಡಿದ್ದಾರೆ. A3 ಆಗಿರುವ ಮಲ್ಲಿಕಾರ್ಜುನ ಸ್ವಾಮಿ ಹಾಗು A4 ಆಗಿರುವ ದೇವರಾಜು ಅವರನ್ನ ಬಂಧಿಸಬೇಕು. ಪ್ರಕರಣದಲ್ಲಿ ಇಬ್ಬರು ಮೋಸ ಮಾಡಿದ್ದಾರೆ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗು ಪತ್ನಿ ಪಾರ್ವತಿಯನ್ನ ಮೊದಲೇ ವಿಚಾರಣೆ ಮಾಡಬೇಕಿತ್ತು. ಆದರೆ ಲೋಕಾಯುಕ್ತರು ಒತ್ತಡಕ್ಕೆ ಮಣಿದಿದ್ದಾರೆ ಅನಿಸುತ್ತದೆ. ಲೋಕಾಯುಕ್ತ ತನಿಖೆ ಪಾರದರ್ಶನಕವಾಗಿ ನಡೆಯುತ್ತಿಲ್ಲ ಎಂದು ಆರ್‌ಟಿಐ ಕಾರ್ಯಕರ್ತ ಗಂಗರಾಜು ಗಂಭೀರ ಆರೋಪ ಮಾಡಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಮುಡಾ ಸೈಟು ಬಗ್ಗೆ ಮಾತನಾಡಿದ್ದು, ಸೈಟ್ ವಾಪಸ್ ಮಾಡಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ಇಡಿಯವ್ರು ಹಣ ರಿಕವರಿ ಮಾಡಿದ್ದಾರೆ. ಅಲ್ಲಿಗೆ ಎರಡೂ ಕಡೆಯೂ ಅಕ್ರಮವಾಗಿದೆ. ಸಿಎಂ ಹೇಳಿಸಿಕೊಳ್ಳದೇ ರಾಜೀನಾಮೆ ಕೊಡಲಿ. ಈಗ ಸಿಎಂ ಬಾಮೈದನಿಗೆ ವಿಚಾರಣೆ ನಡೀತಿದೆ. ನಂತರ ಸಿಎಂ ಪತ್ನಿಯವರಿಗೆ ವಿಚಾರಣೆಗೆ ಕರೀತಾರೆ. ನಂತರ ಸಿಎಂಗೂ ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಕರೀತಾರೆ. ಸಿಎಂ ಆಗಿದ್ದುಕೊಂಡು ಹೇಗೆ ಅವರು ವಿಚಾರಣೆಗೆ ಹೋಗ್ತಾರೆ ? ಹಾಗಾಗಿ ಸಿದ್ದರಾಮಯ್ಯನವರು ಈಗಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ದಲಿತ ಸಿಎಂ ಕೂಗು ಎದ್ದಿರುವ ವಿಚಾರದ ಬಗ್ಗೆ ಮಾತನಾಡಿರುವ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್‌ನ ಕೆಲವರು ದಲಿತ ಸಿಎಂ ಆಗಲಿ ಅಂತಿದ್ದಾರೆ. ಅಲ್ಲಿಗೆ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಖಚಿತ ಅಂತ ಆಯ್ತು. ಆದರೆ ಕಾಂಗ್ರೆಸ್ ದಲಿತ ಕಾರ್ಡ್ ಪ್ಲೇ ಮಾಡೋದು ಕೇವಲ ರಾಜಕೀಯಕ್ಕಾಗಿ ಮಾತ್ರ. ದಲಿತರಿಗೆ ಅನ್ಯಾಯ ಆದಾಗ ಸುಮ್ಮನಿರುತ್ತೆ, ಇವತ್ತು ದಲಿತರಿಗೆ ಸಿಎಂ ಕೊಡೋದು ಅನಿವಾರ್ಯ ಆಗಿದೆ. ಗೃಹ ಸಚಿವ ಪರಮೇಶ್ವರ್ ಎದುರು ಸತೀಶ್ ಜಾರಕಿಹೊಳಿಯವರನ್ನು ಎತ್ತಿ ಕಟ್ತಿದ್ದಾರೆ. ಯಾರು ಪರಮೇಶ್ವರ್ ವಿರುದ್ಧ ಸತೀಶ್ ಜಾರಕಿಹೊಳಿ ಎತ್ತಿ ಕಟ್ತಿದ್ದಾರೆ..? ಇದುವರೆಗೆ ಪರಮೇಶ್ವರ್ ಹೆಸರಿತ್ತು, ಈಗ ಸತೀಶ್ ಜಾರಕಿಹೊಳಿಯವರ ಹೆಸರು ಮುನ್ನಲೆಗೆ ತಂದಿದ್ದಾರೆ. ದಲಿತರ ನಡುವೆ ಕಚ್ಚಾಟ ತಂದು ತಮಾಷೆ ನೋಡೋ ಕೆಲಸ ಮಾಡ್ತಿರೋರು ಯಾರು? ಎಂದು ಪ್ರಶ್ನಿಸಿದ್ದಾರೆ.