ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆಯು ಕಳೆದ ಡಿ.4ರಂದು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ವೀರಾವೇಶದಿಂದ ಹೋರಾಡಿ ಹುತಾತ್ಮನಾಗಿ ವೀರ ಮರಣ ಹೊಂದಿದ ಹಾಸನ ಜಿಲ್ಲೆಯ ಯಳಸೂರು ಬಳಿ ಇಂದು “ಅರ್ಜುನ ಆನೆಯ ಸ್ಮಾರಕದ” ಶಂಕು ಸ್ಥಾಪನೆಯನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಏನ್ ರಾಜಣ್ಣ, ಸಂಸದರಾದ ಶ್ರೇಯಸ್ ಎಂ. ಪಟೇಲ್ ರವರು, ಗೃಹ ಮಂಡಳಿ ಅಧ್ಯಕ್ಷರು ಶಾಸಕರಾದ ಶಿವಲಿಂಗೆಗೌಡರವರು, ಸ್ಥಳೀಯ ಶಾಸಕರಾದ ಮಂಜುನಾಥ್ ರವರು, ಮುಖಂಡರಾದ ಮುರಳಿ ಮೋಹನ್ ರವರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು, ಜಿಲ್ಲೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.