ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟಿನಾ ತಂಡ ಗೆದ್ದು ಬೀಗಿದೆ. ಫ್ರಾನ್ಸ್ ಹಾಗೂ ಅರ್ಜೆಂಟೀನಾ ನಡುವಿನ ಹಣಾಹಣಿಯಲ್ಲಿ ಲಿಯೋನೆಲ್ ಮೆಸ್ಸಿ ನಾಯಕತ್ವದ ತಂಡ ಗೆಲುವು ಸಾಧಿಸಿದೆ.
ತೀವ್ರ ಹಣಾಹಣಿಯ ಪಂದ್ಯಾಟದಲ್ಲಿ ಅರ್ಜೇಂಟೀನಾ ಗೆಲ್ಲುವ ಮೂಲಕ ಬರೋಬ್ಬರಿ 36 ವರ್ಷಗಳ ಬಳಿಕ ಮತ್ತೊಮ್ಮೆ ವಿಶ್ವಕಪ್ ಎತ್ತಿದೆ, ಆ ಮೂಲಕ ಇದುವರೆಗೂ ಮೂರನೇ ಬಾರಿ ವಿಶ್ವಕಪ್ ಗೆದ್ದಂತಾಗಿದೆ. ಫ್ರಾನ್ಸ್ ಎರಡನೇ ಬಾರಿ ವಿಶ್ವಕಪ್ ಎತ್ತುವ ಕನಸನ್ನು ಕೈ ಚೆಲ್ಲಿದೆ.