
ವಿಧಾನ ಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ನಾವು ಎಲ್ಲಿಂದಲೋ ಬಂದವರಲ್ಲ. ನಮ್ಮನ್ನೂ ಕೂಡ ನಿಮ್ಮ ಸಹೋದರರು ಅಂತ ತಿಳಿದುಕೊಳ್ಳಿ. ನಾವು ಈ ದೇಶದ ಜನ, ಇದೇ ಮಣ್ಣಿನ ಮಕ್ಕಳು. ಇದೇ ಹಿಂದುಳಿದ ವರ್ಗದಿಂದ, ಇದೇ ದಲಿತರಿಂದ ಯಾವಾಗಲೋ ಕನ್ವರ್ಟ್ ಆಗಿರಬಹುದು. ನೀವು ಹಿಂದೂಗಳೇ ಎಂದ ಬಿಜೆಪಿ ಸದಸ್ಯರು. ಅದಕ್ಕೆ ಹೌದು ಎಂದು ಶಾಸಕ ರಿಜ್ವಾನ್ ಅರ್ಷದ್. ಅದನ್ನು ತಿಳಿದುಕೊಂಡು ನಮ್ಮ ಜೊತೆಗೂ ಸಹಾನುಭೂತಿ ಇಲ್ಲವಲ್ಲ ಎಂದು ಚೇಡಿಸಿದ ಶಾಸಕ ರಿಜ್ವಾನ್ ಅರ್ಷದ್.
ಬಜೆಟ್ ಭಾಷಣದಲ್ಲಿ ಪಾಲ್ಗೊಂಡು ಮಾತಾಡಿದ ಶಾಸಕ ರಿಜ್ವಾನ್ ಅರ್ಷದ್, ಬಜೆಟ್ಗೆ ಬಿಜೆಪಿ ಟೀಕೆಗಳಿಗೆ ರಿಜ್ವಾನ್ ಅರ್ಷದ್ ಬೇಸರ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಬಜೆಟ್, ಹಲಾಲ್ ಬಜೆಟ್, ಮುಸ್ಲಿಂ ಲೀಗ್ ಬಜೆಟ್ ಅಂದ್ರು. ರಾಜ್ಯದ ಅಲ್ಪಸಂಖ್ಯಾತರ ಜನಸಂಖ್ಯೆ ಶೇಕಡ 16ರಷ್ಟು ಅಲ್ಪಸಂಖ್ಯಾತರಲ್ಲಿ ಮುಸಲ್ಮಾನರು ಹೆಚ್ಚಾಗಿದ್ದಾರೆ. ನಾವು ಈ ದೇಶದ ನಾಗರೀಕರು ಅಲ್ವಾ ನಾವು..? ಸಮಾಜದ ಭಾಗ ಅಲ್ವಾ..? ನಾವು ನ್ಯಾಯಯುತ ತೆರಿಗೆ ಕಟ್ತಿಲ್ವಾ..? ಬೊಕ್ಕಸಕ್ಕೆ ನಮ್ಮ ತೆರಿಗೆ ಹೋಗ್ತಿಲ್ವಾ..? ನಮಗೆ ಅಧಿಕಾರ ಇಲ್ವಾ..? ಎಂದು ಪ್ರಶ್ನೆ ಮಾಡಿದ್ದಾರೆ.

ಒಂದು ವೇಳೆ ನಮಗೆ ಹಕ್ಕು ಇಲ್ಲ ಎಂದರೆ ನಾವು ಮನುಷ್ಯರು ಅಲ್ಲ ಅಂತ ಘೋಷಣೆ ಮಾಡಿ, ಮುಸಲ್ಮಾನರು ಪ್ರಾಣಿಗಳು, ಸಮಾಜದಲ್ಲಿ ಬದುಕಲು ಯೋಗ್ಯರಲ್ಲ, ನಮ್ಮ ಅಸ್ತಿತ್ವ ಇಲ್ಲ ಅಂತ ಘೋಷಣೆ ಮಾಡಲಿ. ಇದು ನಮಗೆ ನೋವಾಗುತ್ತದೆ. 4.10 ಲಕ್ಷ ಕೋಟಿ ಬಜೆಟ್ನಲ್ಲಿ 4,100 ಕೋಟಿ ರೂಪಾಯಿ ಎಲ್ಲ ಅಲ್ಪಸಂಖ್ಯಾತರಿಗೆ ಕೊಟ್ಟಿದ್ದಾರೆ, ಬರೀ ಮುಸಲ್ಮಾನರಿಗೇ ಕೊಟ್ಟಿಲ್ಲ ಎಂದಿದ್ದಾರೆ.