
ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಡಿಕೆ ಶಿವಕುಮಾರ್, ‘ಎಲ್ಲಿದೆ ಹೇಳಿ ಆತ್ಮಹತ್ಯೆ? ಸ್ವಂತಕ್ಕೆ ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲ ರೈತರು ಎನ್ನಲಾಗುತ್ತದೆಯೇ? ಎಲ್ಲ ಸುಳ್ಳು’ ಎಂದು ಹೇಳಿದ್ದಾರೆ. ಡಿಕೆ ಶಿವಕುಮಾರ್ ಹೇಳಿಕೆಯ ಈ ವೀಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ಬೆಂಕಿ ಹುಟ್ಟುಹಾಕಿದೆ.
ಈ ಸುದ್ದಿಯನ್ನು ಸಹ ಓದಿ: ʼಜಿ 20 ಇಂಡಿಯಾ’ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲು ಪ್ರಧಾನಿ ಮೋದಿ ಮನವಿ‘
ಮದ್ಯಪಾನ ಮಾಡಿ ಮೃತಪಟ್ಟಿದ್ದರೂ ಪರಿಹಾರದ ಆಸೆಗೆ ರೈತರ ಆತ್ಮಹತ್ಯೆ ಎಂದು ಬಿಂಬಿಸುತ್ತಾರೆ ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆಯ ವಿವಾದದ ಕಿಡಿ ಆರುವ ಮುನ್ನವೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸಹ ಅದೇ ರೀತಿಯ ಹೇಳಿಕೆ ನೀಡಿ ಪ್ರತಿಪಕ್ಷಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಸ್ವಂತಕ್ಕೆ ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲ ರೈತರು ಎನ್ನಲಾಗುತ್ತದೆಯೇ ಎಂದು ಡಿಕೆ ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ. ಇದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಕರ್ನಾಟಕದ ಸಚಿವರೊಬ್ಬರ ಹೇಳಿಕೆಯ ನಂತರ ಇದೀಗ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರೈತರ ಆತ್ಮಹತ್ಯೆಯನ್ನು ‘ನಕಲಿ’ ಎಂದು ಆರೋಪಿಸಿದ್ದಾರೆ! ನಕಲಿ ಆತ್ಮಹತ್ಯೆಯ ನಂತರ ಪರಿಹಾರ ಪಡೆಯಲು ಬದುಕುವುದು ಹೇಗೆ? ಇದು ಕೇವಲ ವಿಲಕ್ಷಣವಾದ ಕಾಮೆಂಟ್ ಅಲ್ಲ, ರೈತರ ಬಗ್ಗೆ ಭಾರೀ ಅವಹೇಳನಕಾರಿ ಕಾಮೆಂಟ್ ಆಗಿದೆ.