
ಕೇಜ್ರಿವಾಲ್ ಪ್ರಶ್ನೆಗೆ ಬಿಜೆಪಿ ಥಂಡಾ.. ನಿಯಮ ಎಲ್ಲರಿಗೂ ಅಲ್ವಾ..?
ಲೋಕಸಭಾ ಚುನಾಚಣೆಯಲ್ಲಿ ಬಿಜೆಪಿ ನಾಯಕರು ಕೇಳಿದ ಬಹುಮುಖ್ಯ ಪ್ರಶ್ನೆ ಅಂದ್ರೆ ನಿಮ್ಮ INDI ಒಕ್ಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಯಾರು..? ಎಂದಿದ್ದರು. ಪ್ರಮುಖವಾಗಿ ಪ್ರಧಾನಿ ಮೋದಿ, ಅಮಿತ್ ಷಾ, ಯೋಗಿ ಸೇರಿದಂತೆ ಕರ್ನಾಟಕದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕೂಡ ಇದೇ ಪ್ರಶ್ನೆಯನ್ನು ಕಾಂಗ್ರೆಸ್ ನಾಯಕರ ಕಡೆಗೆ ಎಸೆದಿದ್ದರು. ಕಾಂಗ್ರೆಸ್ ನಾಯಕರು ಉತ್ತರ ಕೊಡುವಲ್ಲಿ ವೈಫಲ್ಯ ಅನುಭವಿಸಿದ್ದರು. ಆದರೆ ಇದೀಗ ಜೈಲಿನಿಂದ ಹೊರಬಂದ ದೆಹಲಿ ಸಿಎಂ Dehli CM ಅರವಿಂದ್ ಕೇಜ್ರಿವಾಲ್ ಕೇಳಿರುವ ಪ್ರಶ್ನೆಗೆ ಕೇಸರಿ ಕೋಟೆ ನಡುಗುತ್ತಿದೆ.

ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಚುನಾವಣಾ ಪ್ರಚಾರದಲ್ಲಿ ಅಬ್ಬರಿಸಿದ್ದಾರೆ. INDI ಒಕ್ಕೂಟವನ್ನು ಬಿಜೆಪಿ ನಾಯಕರು ಪದೇ ಪದೇ ಪ್ರಶ್ನೆ ಮಾಡ್ತಿದ್ದಾರೆ. ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು..? ಎಂದು ಕೇಳ್ತಿದ್ದಾರೆ. ಆದರೆ ನಾನು ಹೇಳ್ತೀನಿ, ಬಿಜೆಪಿ ನಾಯಕರೇ ಹೇಳಿ ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು..? ಎಂದು ಮರು ಪ್ರಶ್ನೆ ಮಾಡಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಒಂದು ನಿಯಮ ಮಾಡಿದ್ದಾರೆ. ಅದೇನಂದ್ರೆ 75 ವರ್ಷದ ಬಳಿಕ ಪಕ್ಷದ ನಾಯಕರು ನಿವೃತ್ತಿ ಆಗಬೇಕು. ತಮ್ಮ ನಿಯಮವನ್ನು ಸ್ವತಃ ಪ್ರಧಾನಿ ಮಾಡಿದ್ದು, ಅವರೂ ಪಾಲಿಸ್ತಾರೆ. ಅಂದರೆ ಪ್ರಧಾನಿ ಆಗುವುದಿಲ್ಲ ಎನ್ನುವ ಮುನ್ಸೂಚನೆ ನೀಡಿದ್ದಾರೆ.
ಸೆಪ್ಟೆಂಬರ್ 17, 2025ಕ್ಕೆ ಪ್ರಧಾನಿ ನರೇಂದ್ರ ಮೋದಿ 75 ವರ್ಷ ಪೂರೈಸುತ್ತಿದ್ದಾರೆ. ಆ ಬಳಿಕ ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ಎಂದು ಪ್ರಶ್ನಿಸಿದ್ದಾರೆ. ಈಗಾಗಲೇ ಲಾಲ್ ಕೃಷ್ಣ ಅಡ್ವಾಣಿ, ಮರಳಿ ಮನೋಹರ ಜೋಷಿ, ಸುಮಿತ್ರಾ ಮಹಾಜನ್ ರಾಜಕೀಯ ನಿವೃತ್ತಿ ಪಡೆದುಕೊಂಡಿದ್ದಾರೆ. ಮುಂದಿನ ವರ್ಷದ ಬಳಿಕ ಅಮಿತ್ ಷಾ ಅವರನ್ನು ಪ್ರಧಾನಿ ಮಾಡ್ತೀರಾ..? ನರೇಂದ್ರ ಮೋದಿ ಮತ ಕೇಳ್ತಿರೋದು ಅಮಿತ್ ಷಾ ಅವರನ್ನು ಪ್ರಧಾನಿ ಮಾಡುವುದಕ್ಕಾ..? ಅಮಿತ್ ಷಾ ಮೋದಿ ಜೀ ಅವರ ಗ್ಯಾರಂಟಿ ಪೂರೈಸ್ತಾರಾ..? ಎಂದು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ್ದು ಕೇಸರಿ ಪಾಳಯಕ್ಕೆ ನುಂಗಲಾರದ ಬಿಸಿತುಪ್ಪ ಎನ್ನುವಂತಾಗಿದೆ
ಅರವಿಂದ್ ಕೇಜ್ರಿವಾಲ್ ಪ್ರಶ್ನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಎಕ್ಸ್ ಪೋಸ್ಟ್‌ನಲ್ಲಿ ಉತ್ತರ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಮುಂದೆಯೂ ದೇಶವನ್ನು ಮುನ್ನಡೆಸಲಿದ್ದಾರೆ. ಮೋದಿ ಈಗಲೂ ನಾಯಕ, ಮುಂದೆಯೂ ನಾಯಕ. ಮೋದಿ ಬಿಜೆಪಿ ನಾಯಕ ಎಂದಿದ್ದಾರೆ. ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾತನಾಡಿ, ಬಿಜೆಪಿಯಲ್ಲಿ ಆ ರೀತಿಯ ಯಾವುದೇ ನಿಯಮ ಇಲ್ಲ. ಮೋದಿ ಈ ಅವಧಿಯನ್ನೂ ಪೂರೈಸಿ, ಮುಂದೆಯೂ ದೇಶವನ್ನು ಮುನ್ನಡೆಸಲಿದ್ದಾರೆ ಎಂದಿದ್ದಾರೆ. ಒಟ್ಟಾರೆ ಅರವಿಂದ್ ಕೇಜ್ರಿವಾಲ್ ಉರುಳಿಸಿದ ದಾಳಕ್ಕೆ ಬಿಜೆಪಿ ಥಂಡಾ ಹೊಡೆದಿರುವುದು ಮಾತ್ರ ಸತ್ಯ.