ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಸಿರುವ ಪಿಂಪ್ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ನಡುವೆ ಮಾತಿನ ಸಮರವೇ ನಡೆಯುತ್ತಿದ್ದು ಈ ಬಗ್ಗೆ ತೀರ್ಥಹಳ್ಳಿಯಲ್ಲಿ ಸಚಿವ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.
ಸ್ಯಾಂಟ್ರೋ ರವಿಯ ಬಗ್ಗೆ ಕುಮಾರಸ್ವಾಮಿ ಅವರು ಅನೇಕ ವಿವಾದಗಳನ್ನು ಎತ್ತಿದ್ದಾರೆ ಇದಕ್ಕೆ ನಮ್ಮದೇನು ತೊಂದರೆಯಿಲ್ಲ ಮೈಸೂರಿನ ಕಮಿಷನರ್ ಹಾಗೂ ಡಿಜಿಯವರಿಗೆ ಹೇಳಿದ್ದೇನೆ ಅವನ್ಯಾರು, ಕರೆದುಕೊಂಡು ಬಂದು ವಿಚಾರಣೆ ನಡೆಸಲು ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಅವನ ಹಿನ್ನಲೆ ಏನು…? ಎಷ್ಟು ಕೇಸ್ ಗಳಿವೆ. ಯಾರಿಗೆಲ್ಲಾ ಬ್ಲಾಕ್ ಮೇಲ್ ಮಾಡಿದ್ದಾನೆ ಈ ಬಗ್ಗೆ ವಿಚಾರಣೆಗೆ ಒಳಪಡಿಸಲು ಸೂಚಿಸಿದ್ದೇನೆ ಸಿಎಂ ಗಮನಕ್ಕೂ ತಂದಿದ್ದೇನೆ ಎಂದು ಹೇಳಿದ್ದಾರೆ.

ನಾನು ಕುಮಾರಸ್ವಾಮಿ ಅವರಿಗೆ ನಾನು ಹೇಳೋದಿಷ್ಟೇ ನನ್ನ ಜೊತೆಗೆ ಬಂದಿರಬಹುದು ಯಾರ್ಯಾರೋ ನನ್ನ ಮನೆಗೆ ಬರ್ತಾರೆ ಸಮಸ್ಯೆ, ಬೇಡಿಕೆಗಳನ್ನು ಇಟ್ಟುಕೊಂಡು ಮನೆಗೆ ಬರ್ತಾರೆ, ಫೋಟೋ ತೆಗೆಸಿಕೊಳ್ತಾರೆ ಕುಮಾರಸ್ವಾಮಿ ಕೂಡ ಸಿಎಂ ಆಗಿದ್ದವರು. ಸಾವಿರಾರು ಜನರು ನಿಂತುಕೊಂಡು ಫೋಟೋ ತಗೋಳ್ತಾರೆ ಕುಮಾರಸ್ವಾಮಿ ಅವರು ಪೊಲೀಸ್ ಸರ್ಟಿಫಿಕೇಟ್ ತಗೋಂಡು ಬಾ ಎಂದು ಕೇಳಿದ್ದು ನಾನು ನೋಡಿಲ್ಲ ಎಂದು ಕೆಣಕಿದ್ದಾರೆ.
ನಾವು ಕೂಡ ಸಾರ್ವಜನಿಕ ಜೀವನದಲ್ಲಿ ಇರೋರು ಅವನ ಜೊತೆ ನನ್ನ ಫೋಟೋ ಇರೋದನ್ನ ತೋರಿಸಿ, ತೇಜೋವಧೆ ಮಾಡ್ತಾ ಇದ್ದಾರೆ ಇದರಿಂದ ಕುಮಾರಸ್ವಾಮಿ ಅವರಿಗೆ ಎನು ಲಾಭ ಆಗುತ್ತೋ ಗೊತ್ತಿಲ್ಲ ನನ್ನ ಮನೆಗೆ ಈವರೆಗೆ ಬಂದವರು ಹಣದ ಗಂಟು ಬಿಚ್ಚಿ, ಆಮಿಷ ತೋರುವ ಧೈರ್ಯ ಮಾಡಿಲ್ಲ ಎಂದು ಮಾತನಾಡುವ ವೇಳೆ ಹೇಳಿದ್ದಾರೆ. ʼ
ಸಾರ್ವಜನಿಕ ಜೀವನದಲ್ಲಿ ಒಂದು ನೈತಿಕತೆ ಇಟ್ಕೊಂಡು ಬದುಕ್ತಿದ್ದೇನೆ ಸ್ಯಾಂಟ್ರೋ ರವಿ ಫೋಟೋ ಇಟ್ಟುಕೊಂಡು, ತೇಜೋವಧೆ ಸಾಧನೆ ಮಾಡಿದ್ರೇ ಕುಮಾರಸ್ವಾಮಿಗೆ ಏನು ಲಾಭ ಇಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.