ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಸರ್ಕಾರ ರನೆಯ ಕಸರತ್ತು ಜೋರಾಗಿರುವಾಗ್ಲೆ ಸಾಕಷ್ಟು ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಬಿಜೆಪಿ (Bjp) ಅಗತ್ಯ ಬಹುಮತ ಪಡೆಯಲು ಸಾಧ್ಯವಾಗದ ಕಾರಣ ಇದೀಗ ಜೆಡಿಯು(Jdu) ಮತ್ತು ಟಿಡಿಪಿ (TDP) ಪಕ್ಷದ ಬೆಂಬಲ ಅನಿವಾರ್ಯವಾಗಿದ್ದು, ನಿತೀಶ್ ಕುಮಾರ್ (Nitish kumar) ಹಾಗೂ ಚಂದ್ರಬಾಬು ನಾಯ್ಡು (handra babu naidu) ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಈ ನಡುವೆ ಅಚ್ಚರಿ ಎಂಬಂತೆ ಬಿಹಾರದ ಸಿಎಂ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ (RUD) ನಾಯಕ ತೇಜಸ್ವಿ ಯಾದವ್ (Tejaswi yadav) ಒಂದೇ ವಿಮಾನದಲ್ಲಿ ಒಮ್ಮೊಟ್ಟಿಗೆ ಪಾಟ್ನಾದಿಂದ (Patna) ದೆಹಲಿಗೆ (Delhi) ಪ್ರಯಾಣ ಬೆಳೆಸಿರೊದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇಂಡಿಯಾ (INDIA) ಮೈತ್ರಿಕೂಟಕ್ಕೆ ಬೆಂಬಲ ನೀಡುವಂತೆ ನೀತೀಶ್ ಮನವೊಲಿಸಲು ಇಂಡಿಯಾ ಮೈತ್ರಿ ಕೂಟ ತೇಜಸ್ವಿ ಯಾದವ್ ಮೂಲಕ ಕೊನೆ ಹಂತದ ಕಸರತ್ತು ನಡೆಸಿದ್ಯಾ ಎಂಬ ಕುತೂಹಲಕ್ಕೆ ಕಾರಣವಾಗಿದೆ.

ನಿತೀಶ್ ಕುಮಾರ್ ತಮ್ಮ ಬೆಂಬಲ ಎನ್‌ಡಿಎ (NDA) ಮೈತ್ರಿ ಕೂಟಕ್ಕೆ ಎಂದು ಸ್ಪಷ್ಟಪಡಿಸಿದ್ರೂ, ಕೊನೆ ಹಂತದ ರಾಜಕೀಯ ಬೆಳವಣಿಗೆಯಲ್ಲಿ ಏನು ಬೇಕಾದ್ರೂ ಆಗಬಹುದು. ಹೀಗಾಗಿ ಎನ್‌ಡಿಎ ಕೂಟದ ನಿತೀಶ್ ಕುಮಾರ್ ಮತ್ತು ಇಂಡಿಯಾ ಕೂಟದ ತೇಜಸ್ವಿ ಯಾದವ್ ಒಟ್ಟಿಗೆ ಪ್ರಯಾಣ ಬೆಳೆಸಿರೋದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.











