ಸಂಸದ ಪ್ರಜ್ವಲ್ ರೇವಣ್ಣರ(Prajwal revanna) ಕೈ ಹಿಡಿದು ಮೈಸೂರಿನಲ್ಲಿ(mysuru) ಪ್ರಚಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ (Narendra modi) ಅವರು ದೇಶದ ಜನರ ಮುಂದೆ ಕ್ಷಮೆ ಕೇಳಬೇಕು ಎಂದು ಡಿಸಿಎಂ (Dcm) ಡಿಕೆಶಿ ಒತ್ತಾಯಿಸಿದ್ದಾರೆ.
ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಪ್ರಧಾನಿಗಳು ಈ ಬಾರಿ ಚುನಾವಣೆಯಲ್ಲಿ ಮತ ಕೇಳುವಾಗ ಅವರ ಪಕ್ಕದಲ್ಲಿಯೇ ಪ್ರಜ್ವಲ್ ರೇವಣ್ಣರನ್ನು ನಿಲ್ಲಿಸಿಕೊಂಡು ಕೈ ಎತ್ತಿ ಮತ ಕೇಳಿದ್ದಾರೆ. ಇದು ಅಕ್ಷಮ್ಯ ಅಪರಾಧ. ಹೀಗಾಗಿ, ಅವರು ಮೊದಲು ದೇಶದ ಜನರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ.
ಇನ್ನು ಕಳೆದ ಬಾರಿ ನಾವೇ ಆತನನ್ನು ಸಂಸತ್ಗೆ ಕಳುಹಿಸಿ ಕೊಟ್ಟಿದ್ದೇವೆ ಎಂದು ಬೊಬ್ಬೆ ಹೊಡೆಯುವ ಬಿಜೆಪಿಗರಿಗೆ(Bjp) ಈ ಬಾರಿ ಆತನ ಪರ ನಿಂತಿರುವುದು ಯಾರು? ಎಂಬುದು ಗೊತ್ತಿಲ್ವಾ? ದೇಶದ ಪ್ರಧಾನಿಗಳೇ ಆತನ ಪಕ್ಕ ನಿಂತು ಮತ ಕೇಳಿದ್ದು ಅಪರಾಧ ಅಲ್ವಾ? ಮೊದಲು ಪ್ರಧಾನಿ ನರೇಂದ್ರ ಮೋದಿ ಕ್ಷಮೆಯಾಚನೆ ಮಾಡಬೇಕೆಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK shivakumar) ಒತ್ತಾಯಿಸಿದ್ದಾರೆ.