ಕರೋನದಿಂದ ಚೇತರಿಸಿಕೊಂಡ 96% ಜನರಲ್ಲಿ 1 ವರ್ಷ ಕಾಲ ಪ್ರತಿಕಾಯ: ಸಂಶೋಧನೆಯಿಂದ ಬಹಿರಂಗ

ಕರೋನಾ ವೈರಸ್ ಸೋಂಕಿತ ಜನರಲ್ಲಿ ಪ್ರತಿಕಾಯಗಳ ಬಗ್ಗೆ ಜಪಾನ್‌ನ ವಿಶ್ವವಿದ್ಯಾಲಯವೊಂದರ ಸಂಶೋಧನೆಯು ಹೊರಹೊಮ್ಮಿದೆ. ಇದರ ಪ್ರಕಾರ, ಕೋವಿಡ್ ಸೋಂಕಿಗೆ ಒಳಗಾದವರಲ್ಲಿ ಶೇಕಡಾ 96 ರಷ್ಟು ಜನರು ಆರೋಗ್ಯವಂತರು ಇವರಲ್ಲಿ ಪ್ರತಿಕಾಯಗಳು ಗುಣಗಳು ಒಂದು ವರ್ಷದವರೆಗೆ ಇರುತ್ತವೆ ಎಂದು ತಿಳಿಸಿದೆ.

ಜಪಾನ್‌ನ ಯೊಕೊಹಾಮಾ ವಿಶ್ವವಿದ್ಯಾಲಯ ಅಧ್ಯಯನ

ಎಎನ್‌ಐ ಪ್ರಕಾರ, ಕ್ಯೋಡೋ ಸುದ್ದಿ ಸಂಸ್ಥೆ ಜಪಾನೀಸ್‌ನ ಯೊಕೊಹಾಮಾ ಸಿಟಿ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ವರದಿಯನ್ನು ಪ್ರಕಟಿಸಿದೆ.

ಈ ಅಧ್ಯಯನದ ಪ್ರಕಾರ 21 ರಿಂದ 78 ವರ್ಷದೊಳಗಿನ 250 ಜನರು, ಕಳೆದ ವರ್ಷ ಫೆಬ್ರವರಿ ಮತ್ತು ಏಪ್ರಿಲ್ ನಡುವೆ ಕರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಕೋವಿಡ್ ಸೋಂಕಿನ ಹೆಚ್ಚಿನ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳು ಒಂದು ವರ್ಷಗಳ ಕಾಲ ಪ್ರತಿಕಾಯಗಳನ್ನು ಹೊಂದಿದ್ದರು. ಸೌಮ್ಯ ಲಕ್ಷಣಗಳು ಅಥವಾ ಕರೋನದ ಯಾವುದೇ ಲಕ್ಷಣಗಳಿಲ್ಲದವರಲ್ಲಿ 97 ಪ್ರತಿಶತದಷ್ಟು ಜನರು ಅನಾರೋಗ್ಯಕ್ಕೆ ಒಳಗಾದ 6 ತಿಂಗಳವರೆಗೆ ಪ್ರತಿಕಾಯಗಳನ್ನು ಹೊಂದಿದ್ದರು ಎಂದು ತಿಳಿಸಿದೆ.

ಕಳೆದ ವರ್ಷ ಕರೋನ ಸೋಂಕಿಗೆ ಒಳಗಾದ ಮತ್ತು ಸೌಮ್ಯವಾದ ಲಕ್ಷಣಗಳಿರುವ ಅಥವಾ ಯಾವುದೇ ರೋಗಲಕ್ಷಣಗಳಿಲ್ಲದ 69 ಪ್ರತಿಶತದಷ್ಟು ಜನರು ಅನಾರೋಗ್ಯಕ್ಕೆ ಒಳಗಾದ 6 ತಿಂಗಳ ನಂತರ ದಕ್ಷಿಣ ಆಫ್ರಿಕಾದ ರೂಪಾಂತರದ ವಿರುದ್ಧ ಹೋರಾಡಲು ಪ್ರತಿಕಾಯಗಳನ್ನು ಹೊಂದಿದ್ದಾರೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. 75 ಪ್ರತಿಶತದಷ್ಟು ಜನರು ಭಾರತೀಯ ರೂಪಾಂತರಕ್ಕೆ ಸಂಬಂಧಿಸಿದ ಪ್ರತಿಕಾಯಗಳನ್ನು ಹೊಂದಿದ್ದರೆ ಮತ್ತು 81 ಪ್ರತಿಶತ ಮತ್ತು 85 ಪ್ರತಿಶತ ಜನರು ಬ್ರೆಜಿಲ್ ಮತ್ತು ಯುಕೆ ರೂಪಾಂತರಗಳಿಗೆ ಸಂಬಂಧಿಸಿದ ಪ್ರತಿಕಾಯವನ್ನು ಒಂದಿದ್ದಾರೆ ಎಂದು ವರದಿಯಾಗಿದೆ.

ಜಪಾನಿನ ವಿಶ್ವವಿದ್ಯಾನಿಲಯದ ಅಧ್ಯಯನ ಪ್ರಕಾರ, ಕೋವಿಡ್ -19 ಸೋಂಕಿತ ಜನರು, ವಿಶೇಷವಾಗಿ ಸೌಮ್ಯ ಲಕ್ಷಣಗಳು ಅಥವಾ ಯಾವುದೇ ಲಕ್ಷಣಗಳಿಲ್ಲದವರು, ಕರೋನಾ ವೈರಸ್‌ನ ವಿವಿಧ ರೂಪಾಂತರಗಳಿಂದ ತಪ್ಪಿಸಲು ಲಸಿಕೆ ಹಾಕಬೇಕು ಎಂದು ಒತ್ತಿ ಹೇಳಿದ್ದಾರೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...