ಸಿದ್ದರಾಮಯ್ಯ ಸಿಎಂ ಆಗಿದ್ದ ಅವದಿಯಲ್ಲೇ ಕಾನೂನು ಆಯೋಗ ಮತಾಂತರ ನಿಷೇಧ ಕುರಿತ ಪ್ರಸ್ತಾಪವನ್ನು ಸರ್ಕಾರದ ಮುಂದೆ ಇಟ್ಟಿತ್ತು ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಕ್ಕೆ ಪ್ರತಿಯಾಗಿ ಮಾಜಿ ಸಚಿವ ರಮೇಶ್ ಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ʼಆಗಿನ ಕಾನೂನು ಸಚಿವ ಜಯಚಂದ್ರರ ಜೊತೆ ಈ ವಿಷಯ ಮಾತನಾಡಿದ್ದೇನೆ. ಕಾನೂನು ಆಯೋಗದ ಪ್ರಸ್ತಾಪಕ್ಕೆ ನಾನು ಸಹಿ ಮಾಡಿದ್ದೇನೋ ಇಲ್ಲವೋ ಎಂಬುದು ಸರಿಯಾಗಿ ನೆನಪಿಲ್ಲ. ಆದರೆ ಕ್ಯಾಬಿನೆಟ್ ಮುಂದೆ ಈ ವಿಷಯ ಪ್ರಸ್ತಾಪಕ್ಕೆ ಬಂದೇ ಇಲ್ಲʼ ಎಂದು ಹೇಳಿದ ಸಿದ್ದರಾಮಯ್ಯ. ನಾನು ಆ ಕಡತವನ್ನು ನೋಡುತ್ತೇನೆ. ಮತ್ತೆ ವಿವರಣೆ ನೀಡುವೆʼ ಎಂದರು.

ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ. ʼಸಿದ್ದರಾಮಯ್ಯನವರೇ, ನಾನು, ನೀವು ಮತ್ತು ಮಾದುಸ್ವಾಮಿಯವರು ಕುಳಿತು ಮಾತನಾಡೋಣʼ ಎಂದು ಹೇಳಿ ಕಲಾಪವನ್ನು 10 ನಿಮಿಷ ಮುಂದೂಡಿದರು.











