ಬೆಳಗಾವಿ ಅಧಿವೇಶನದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಮಸೂದೆ ಚರ್ಚೆಯಲ್ಲಿ ಲವ್ ಮತ್ತು ಮ್ಯಾರೇಜ್ ವಿಷಯ ಸದಸನವನ್ನು ನಗೆಗಡಲಲ್ಲಿ ತೇಲಿಸಿತು.
ಮಸೂದೆಯ ಸೆಕ್ಷನ್ 3ರಲ್ಲಿನ ವಿವಾಹ ನಿಬಂಧನೆ ಕುರಿತು ಆಕ್ಷೇಪ ಎತ್ತಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಒಬ್ಬ ಯುವಕ/ಯುವತಿ ತಮಗೆ ಇಷ್ಟವಾದವರನ್ನು ಪ್ರೀತಿಸಿ ಮದುವೆ ಆಗಬಹುದು ಎಂದು ಸಂವಿಧಾನವೇ ಅವಕಾಶ ನೀಡಿದೆ, ನನಗೆ ಈಗ ಆ ವಯಸ್ಸಿಲ್ಲʼ ಎಂದರು. ಆಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ʼಸರ್ ನಿಮಗೆ ವಯಸ್ಸಾಗಿಲ್ಲ, ನೀವೂ ಮದುವೆ ಆಗಬಹುದುʼʼ ಎಂದರು. ಕೆಲವು ಸದಸ್ಯರು ʼಲವ್ ಕೂಡ ಮಾಡಬಹುದು ಎಂದರು.
ಅದಕ್ಕೆ ಸಿದ್ದರಾಮಯ್ಯ, ಲವ್ ಮತ್ತು ಮದುವೆ ಬೇರೆ ಬೇರೆ. ಈಗಲೂ ಲವ್ ಮಾಡಬಹುದು. ಆದರೆ ಮದುವೆ ಆಗಲಾಗದು ಎಂದರು.
ನಿಮಗೆ ವಯಸ್ಸಾಯ್ತು ಅಂತಾ ನಿಮ್ಮ ಪತ್ನಿ ಹೇಳಿದರೆ? ಎಂದು ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ, ʼನಮಗೆ ವಯಸ್ಸಾಗಿದ್ದು ನಮಗೇ ಗೊತ್ತಾಗಬೇಕು ಕಣಯ್ಯಾʼ ಎಂದು ತಮಾಷೆ ಮಾಡಿದರು.