ರಾಹುಲ್ ಗಾಂಧಿ (Rahul Gandhi) ಗೊತ್ತಿದ್ದೋ- ಗೊತ್ತಿಲ್ಲದೆಯೋ ಒಂದಲ್ಲ ಒಂದು ಎಡವಟ್ಟು ಮಾಡಿಕೊಳ್ತಾನೇ ಇರ್ತಾರೆ. ಮಾತಿನ ಭರದಲ್ಲಿ ಹಲವಾರು ಬಾರಿ ಏನೇನೋ ಮಾತನಾಡಿ ಸಾಕಷ್ಟು ಟ್ರೋಲ್ ಗೆ (Troll) ಕೂಡ ರಾಗಾ ಒಳಗಾಗಿದ್ದಾರೆ. ಇದೀಗ ರಾಹುಲ್ ಗಾಂದಿ ಅಂಥದ್ದೇ ಮತ್ತೊಂದು ಯಡವಟ್ಟು ಮಾಡಿದ್ದಾರೆ. ಅದೂ ಯಾವುದೋ ಸಂದರ್ಶದಲ್ಲಿ ಅಲ್ಲ ಸಾವಿರಾರು ಜನ ಸೇರಿರುವ ಸಮಾವೇಶದ ವೇದಿಕೆಯಲ್ಲಿ ಮಾತನಾಡುವಾಗ!
ಕೋಲಾರದಲ್ಲಿ (kolar) ಕಾಂಗ್ರೆಸ್ ಸಮಾವೇಶವನ್ನ (congress) ಆಯೋಜಿಸಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಗೌತಮ್ (gowtham) ಪರವಾಗಿ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಹಾಗೂ ಡಿಸಿಎಂ ಸಮಾವೇಶದಲ್ಲಿ ಭಾಗಿಯಾಗಿದ್ರು, ಸಮಾವೇಶವನ್ನ ಉದ್ದೇಶಿಸಿ ಮಾತನಾಡುವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಡವಟ್ಟು ಮಾಡಿಕೊಂಡಿದ್ದಾರೆ. ಮಾತನಾಡೋ ಭರದಲ್ಲಿ ಕರ್ನಾಟಕದ (Karnataka) ಮುಖ್ಯಮಂತ್ರಿಗಳನ್ನೇ ಮರೆತುಬಿಟ್ಟಿದ್ದಾರೆ.
ಕನ್ನಡದಲ್ಲೇ ಭಾಷಣ ಆರಂಭಿಸಿದ ರಾಹುಲ್ ಗಾಂಧಿ, ಎಲ್ಲರಿಗೂ ಸಮಸ್ಕಾರ ತಿಳಿಸಿದ್ರು. ನಂತರ ವೇದಿಕೆಯಲ್ಲಿ ಕುಳಿತಿದ್ದವರ ಹೇಸರು ಹೇಳ್ತಿರೋವಾಗ, ಮೊದಲಿಗೆ ಎಐಸಿಸಿ ಅಧ್ಯಕ್ಷ (AICC) ಮಲ್ಲಿಕಾರ್ಜುನ ಖರ್ಗೆಯವರನ್ನ ಸ್ವಾಗತಿಸಿದ್ರು. ಆಮೇಲೆ ಸಿದ್ದರಾಮಯ್ಯನವರ ಹೆಸರನ್ನ ಉಲ್ಲೇಖಿಸಿದ್ರು. ಕಡೆಯದಾಗಿ ಡಿಕೆ ಶಿವಕುಮಾರ್‌ರನ್ನ ಉಲ್ಲೇಖಿಸಿಉವಾಗ, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎಂದು ಹೇಳಿದ್ದಾರೆ. ಇದು ವೇದಿಕೆಯಲ್ಲಿದ್ದ ಕಾಂಗ್ರೇಸ್ ನಾಯಕರಿಗೆ ಕೊಂಚ ಮುಜುಗರ ಉಂಟುಮಾಡಿದೆ. ಏನೂ ಆಗಿಲ್ಲವೆಂಬಂತೆ ರಾಗಾ ಭಾಷಣ ಮುಂದುವರೆಸಿದ್ರು.