ಬೆಂಗಳೂರ-ಮೈಸೂರು ಎಕ್ಸ್‌ಪ್ರೆಸ್ ವೇ ( Bengaluru – Mysore Express way ) ಹಲವು ಕಾರಣಗಳಿಂದ ಸುದ್ದಿ ( News ) ಮಾಡುತ್ತಿದೆ. ಈ ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ ಕ್ರೆಡಿಟ್ ( credit ) ತೆಗೆದುಕೊಂಡಿದ್ದ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ( Pratap Simha ) ಇದೀಗ ಇಲ್ಲಿ ಹೆಚ್ಚಾಗುತ್ತಿರುವ ಅಪಘಾತಗಳಿಗೆ ( Accident ) ಮಾತ್ರ ವಾಹನ ( vehicle ) ಸವಾರರೇ ಕಾರಣ ಅಂತ ಹೇಳುತ್ತಿದ್ದಾರೆ. ಇದರ ನಡುವೆಯೇ ಇದೀಗ ಅಪಘಾತ ಪ್ರಕರಣವನ್ನ ತಗ್ಗಿಸೋದಕ್ಕಾಗಿ ರಾಜ್ಯ ಸರ್ಕಾರ ( State Government ) ಹಲವು ಕ್ರಮಗಳನ್ನ ( Action ) ಕೈಗೊಂಡಿದ್ದು ಈಗ ಹೊಸದೊಂದು ಟಫ್ ರೂಲ್ಸ್ ಜಾರಿಗೆ ತರೋದಕ್ಕೆ ಮುಂದಾಗಿದೆ.
ಬೈಕ್, ಆಟೋ, ಟ್ರ್ಯಾಕ್ಟರ್ ಹಾಗೂ ಸಣ್ಣಪುಟ್ಟ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲು ಮುಂದಾಗಿರುವ ಹೆದ್ದಾರಿ ಪ್ರಾಧಿಕಾರ, ವೇಗ ಮಿತಿ 100 ಕಿ.ಮೀ ದಾಟಿದರೆ ದಂಡ ವಿಧಿಸೋದಕ್ಕೆ ಕೂಡ ಮುಂದಾಗಿದೆ. ಹೊಸ ಅಧಿಸೂಚನೆ ಹೊರಡಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದೀಗ ನೂತನ ಆದೇಶವನ್ನ ಹೊರಡಿಸಿದ್ದು, ಜುಲೈ 12ರಂದೇ ಟಫ್ ರೂಲ್ಸ್ ನ ಅಧಿಸೂಚನೆ ಹೊರಡಿಸಿದ್ದ ಅಧಿಸೂಚನೆಯನ್ನ ಇದೀಗ ಪರಿಣಾಮಕಾರಿಯಾಗಿ ಜಾರಿಗೆ ತರೋದಕ್ಕೆ ಕೂಡ ಅಧಿಕಾರಿಗಳು ಮುಂದಾಗಿದ್ದಾರೆ.
ಆಗಸ್ಟ್ 1ರಿಂದಲೇ ಹೊಸ ರೂಲ್ಸ್ ಜಾರಿಗೆ ಬರಲಿದ್ದು, ವೇಗ ಮಿತಿಗೆ ಅಪಘಾತ ಹೆಚ್ಚಳ ಹಾಗೂ ಮದ್ರಾಸ್ ಹೈಕೋರ್ಟ್ ಆದೇಶದ ನೆಪವಾಗಿಸಿಕೊಂಡು, 100 ಕಿ.ಮೀಗಿಂತ ವೇಗವಾಗಿ ಸಂಚರಿಸುವ ವಾಹನಗಳಿಗೆ ಟೋಲ್ ಗಳಲ್ಲೇ ದಂಡದ ಬಿಸಿಯನ್ನ ಇನ್ನು ಮುಂದಿನ ದಿನಗಳಲ್ಲಿ ಮುಟ್ಟಿಸಲಾಗುತ್ತೆ. ಪ್ರಾಧಿಕಾರದ ನಡೆಗೆ ಸ್ಥಳೀಯರು, ಬೈಕ್ ಸವಾರರ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಹೆದ್ದಾರಿ ಕಾಮಗಾರಿಗಾಗಿ ನಮ್ಮ ಭೂಮಿ ಕೊಟ್ಟಿದ್ದೇವೆ, ನಮಗೆ ಈ ರಸ್ತೆಯಲ್ಲಿ ನಿರ್ಬಂಧ ಹೇರಿದರೆ ಏನರ್ಥ? ಸಾರ್ವಜನಿಕರ ದುಡ್ಡಲ್ಲಿ ರಸ್ತೆ ಮಾಡಿ, ಕೇವಲ ಉಳ್ಳವರಿಗೆ ಬಳಸೋದು ಎಷ್ಟು ಸರಿ?, ನಾವೇನು ಮನುಷ್ಯರಲ್ಲವಾ?, ನಾವು ತೆರಿಗೆ ಕಟ್ಟಲ್ವಾ ನಮಗೆ ತುರ್ತು ಅವಶ್ಯಕತೆ ಇಲ್ವಾ?, ಸರ್ವೀಸ್ ರಸ್ತೆ ಇನ್ನೂ ಪೂರ್ಣಗೊಂಡಿಲ್ಲ, ಸರ್ವೀಸ್ ರಸ್ತೆಯಲ್ಲಿ ನೂರೆಂಟು ಸಮಸ್ಯೆಗಳಿವೆ, ಮೊದಲು ಸರ್ವೀಸ್ ರಸ್ತೆಯನ್ನ ಸಮಸ್ಯೆ ಮುಕ್ತಗೊಳಿಸಿ, ಎಕ್ಸ್ ಪ್ರೆಸ್ ವೇನಲ್ಲಿ ಸಂಚರಿಸಲು ಎಲ್ಲರಿಗೂ ಅವಕಾಶ ಕಲ್ಪಿಸಿ ಎಂದು ಸಾಕಷ್ಟು ಆಕ್ರೋಶಗಳು ಕೂಡ ವ್ಯಕ್ತವಾಗುತ್ತಿದೆ.