ಮ್ಯೂಸಿಕ್ ಡೈರೆಕ್ಟರ್ ಹಾಗೂ ಪ್ಲೇ ಬ್ಯಾಕ್ ಸಿಂಗರ್ ಅನೂಪ್ ಸೀಳಿನ್ ಈಗಾಗಲೇ ತಮ್ಮ ಸಂಗೀತ ಮತ್ತು ಗಾಯನದ ಮೂಲಕ ಸಾಕಷ್ಟು ಮನೆಮಾತಾಗಿದ್ದಾರೆ. ಸಿನಿಮಾದಿಂದ ಸಿನಿಮಾಗೆ, ಒಂದು ಹಾಡಿನಿಂದ ಮತ್ತೊಂದು ಹಾಡಿಗೆ ತುಂಬಾ ವಿಭಿನ್ನತೆ ಕಾಯ್ದುಕೊಳ್ತಾರೆ. ತಮ್ಮ ಪ್ರತಿ ಸಂಗೀತದ ಮೂಲಕ ಹೊಸತು ಅನ್ನೋದನ್ನು ಪ್ರಯೋಗ ಮಾಡ್ತಾರೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮದೇ ಸಂಗೀತ ಸಂಯೋಜನೆಯಡಿ, ತಾವೇ ಹಾಡಿಗೆ ಧನಿಯಾಗೋ ಮೂಲಕ ಆಲ್ಬಂ ಸಾಂಗ್ ಒಂದನ್ನ ತಯಾರಿಸಿದ್ದಾರೆ.
ಸದ್ಯ ಈ ಕುರಿತು ಪೋಸ್ಟರ್ ಒಂದು ರಿಲೀಸ್ ಆಗಿದ್ದು, ನಾವು ಹಿಂದೆಂದೂ ನೋಡಿರದ ಮ್ಯಾನರಿಸಂನಲ್ಲಿ ಅನೂಪ್ ಕಾಣಿಸಿಕೊಂಡಿರೋದು ವಿಶೇಷ. ಪ್ರೀತಿ ಅನ್ನೋ ದ್ಯಾವ್ರು ಅನ್ನೋ ಪದದ ಮೇಲೆ ಈ ಹಾಡು ನಿಂತಿದೆ. ಇನ್ನೂ ಈ ಸ್ಪೆಷಲ್ ಮತ್ತು ಅನೂಪ್ ರ ಮೊದಲ ಆಲ್ಬಂ ಹಾಡಿಗೆ ತಮ್ಮ ಪತ್ನಿ ಕೃತಿ ಬಿ ಶೆಟ್ಟಿ ಬಂಡವಾಳ ಹೂಡಿದ್ದಾರೆ. ಪ್ರಮೋದ್ ಮರವಂತೆ ಲಿರಿಕ್ಸ್ ಇರೋ ಈ ಹಾಡು ಇದೇ ಆಗಸ್ಟ್ 14ರಂದು ಜೆಪಿ ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗ್ತಿದೆ.