ಅಚ್ಚರಿಯ ಬೆಳವಣಿಗೆಯಲ್ಲಿ ತಮಿಳುನಾಡು (Tamil nadu) ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ತಾವು ಸ್ವಯಂ ಕೆಳಗಿಳಿಯುವುದಾಗಿ ಅಣ್ಣಾಮಲೈ (Annamalai) ಘೋಷಣೆ ಮಾಡಿದ್ದಾರೆ.ಆ ಮೂಲಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

2026 ರಲ್ಲಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ನಡೆಯಲಿದ್ದು,ಈ ಚುನಾವಣೆಗೆ BJP ಮತ್ತು AIADMK ಮೈತ್ರಿ ಮಾಡಿಕೊಳ್ಳುವ ಚಿಂತನೆಯಲ್ಲಿದ್ದು ಇದ್ರಿಂದ ಅಣ್ಣಾಮಲೈ ಬೇಸರಗೊಂಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ಹೈಕಮ್ಯಾಂಡ್ ನ ಈ ನಿರ್ಧಾರದ ಕಾರಣಕ್ಕೆ ತಾವು ತಮ್ಮ ಸ್ಥಾನದಿಂದ ಹಿಂದೆ ಸರಿಯಲು ಅಣ್ಣಾಮಲೈ ನಿರ್ಧರಿಸಿದ್ದು ಮುಂದಿನ ನಾಯಕನನ್ನು ಪಕ್ಷದ ಎಲ್ಲಾ ಸದಸ್ಯರು ನಿರ್ಧರಿಸಲಿದ್ದಾರೆ ಎಂದು BJP ನಾಯಕರು ಹೇಳಿದ್ದಾರೆ. ಹೀಗಾಗಿ ಏ.7ರಂದು ತಮಿಳುನಾಡಿನ ಬಿಜೆಪಿ ನೂತನ ಅಧ್ಯಕ್ಷರ ಘೋಷಣೆಯಾಗಲಿದೆ.