ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಳ್ತಿದೆ. ಕೆಲವೇ ದಿನಗಳಲ್ಲಿ ಚುನಾವಣೆ ಎದುರಾಗುತ್ತಿದ್ದು, ಅಹಿಂದ ಸಮುದಾಯ ತಿರುಗಿ ಬೀಳುವ ಆತಂಕದಲ್ಲಿ ಕೇಸರಿ ಪಾಳಯ ಅಂತರ ಕಾಯ್ದುಕೊಳ್ಳಲು ಮುಂದಾಗಿದೆ. ಲೋಕಸಭೆ ಚುನಾವಣೆ ವೇಳೆ ವಿವಾದ ಸೃಷ್ಟಿಸುತ್ತಿರುವುದು ರಾಮನ ಅಲೆಯಲ್ಲಿ ತೇಲುತ್ತಿರುವ ಬಿಜೆಪಿಗೆ ಹಿನ್ನಡೆ ಆಗುವ ಆತಂಕ ಎದುರಾಗಿದೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ವಿರುದ್ಧದ ಟೀಕೆ ಸರಿಯಲ್ಲ ಎಂದಿದೆ ಬಿಜೆಪಿ.

ಭಟ್ಕಳದ ಮಸೀದಿ ಬಗ್ಗೆ ಅನಂತ್ ಕುಮಾರ್ ಹೆಗಡೆ ಹೇಳಿಕೆ ಹಿನ್ನೆಲೆ ಬಿಜೆಪಿಯಲ್ಲೇ ಪರ ವಿರೋಧದ ಮಾತುಗಳು ಕೇಳಿಬಂದಿವೆ. ಅನಂತ ಕುಮಾರ್ ಹೆಗಡೆ ಹೇಳಿಕೆ ವೈಯಕ್ತಿಕ ಎಂದಿದ್ದಾರೆ ಬಿಜೆಪಿ ನಾಯಕರು. ಆದರೆ ಮಾಜಿ ಡಿಸಿಎಂ ಈಶ್ವರಪ್ಪ ಮಾತ್ರ ಸಂಸದ ಹೆಗಡೆ ಮಾತನ್ನ ಸಮರ್ಥಿಸಿಕೊಂಡಿದ್ದಾರೆ. ಅನಂತ್ ಕುಮಾರ್ ಹೆಗಡೆ ಮಾತಿಗೆ ಕಾಂಗ್ರೆಸ್ ಕಿಡಿಕಾರಿದ್ದು, ಹಿಂದೂ ಧರ್ಮ ನಿಮ್ಮ ಅಪ್ಪನ ಮನೆಯ ಸ್ವತ್ತಾ..? ಎಂದು ಶಾಸಕ ಪ್ರದೀಪ್ ಈಶ್ವರ್ ಪ್ರಶ್ನಿಸಿದ್ದಾರೆ. ಇನ್ನು ನಾಲಿಗೆ ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳಿ ಹೆಗಡೆಯವರೇ ಎಂದಿರುವ ಪ್ರದೀಪ್ ಈಶ್ವರ್, ಬಿಜೆಪಿಯಲ್ಲಿ ಟಿಕಿಟ್ ಸಿಗಲ್ಲ ಅನ್ನೋದು ಗೊತ್ತಾಗಿದೆ. ಹೀಗಾಗಿ ಟೀಕೆ ಮಾಡ್ತಿದ್ದಾರೆ. ನಾವೂ ಶ್ರೀರಾಮ ಭಕ್ತರೇ ಎಂದು ತಿರುಗೇಟು ನೀಡಿದ್ದಾರೆ

‘ಭಟ್ಕಳದ ಚಿನ್ನದ ಪಳ್ಳಿ ನಿರ್ನಾಮ’ ಎಂಬ ಹೇಳಿಕೆ ಬೆನ್ನಲ್ಲೇ ಸಂಸದ ಅನಂತ ಕುಮಾರ ಹೆಗಡೆ ಮೇಲೆ ಸುಮೋಟೋ ಕೇಸ್ ದಾಖಲು ಆಗಿದೆ. ಉತ್ತರ ಕನ್ನಡದ ಕುಮಟಾ ಠಾಣೆಯಲ್ಲಿ ಸೆಕ್ಷನ್ 153A, 505 ಅಡಿ ಪ್ರಕರಣ ದಾಖಲಾಗಿದೆ. ಇತ್ತ ಬೆಂಗಳೂರಲ್ಲಿ ಅನಂತ್ ಕುಮಾರ್ ಹೆಗಡೆ ವಿರುದ್ಧ ಪ್ರತಿಭಟನೆ ನಡೆದಿದೆ. ರೇಸ್‌ಕೋರ್ಸ್ ರಸ್ತೆಯ ಕಾಂಗ್ರೆಸ್ ಕಛೇರಿ ಬಳಿ ಪ್ರತಿಭಟನೆ ಮಾಡಿ ಅನಂತಕುಮಾರ್ ಹೆಗಡೆ ಗಡಿಪಾರು ಮಾಡುವಂತೆ ಒತ್ತಾಯ ಮಾಡಲಾಗಿದೆ.
ಸಿಎಂ ಬಗ್ಗೆ ಸಂಸದ ಅನಂತಕುಮಾರ ಹೆಗಡೆ ಏಕವಚನ ಪ್ರಯೋಗ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ ಆಕ್ರೋಶ ಹೊರ ಹಾಕಿದ್ದಾರೆ. ಅನಂತಕುಮಾರ ಹೆಗಡೆ ಅವರು ಸಿಎಂ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಸಿಎಂ ತಂದೆ ಬಗ್ಗೆ ಭಾಷೆ ಬಳಸಿದ್ದಾರೆ. ಮುಖ್ಯಮಂತ್ರಿ ಬಗ್ಗೆ ಯಾವ ರೀತಿ ಮಾತನಾಡಬೇಕು ಎಂದು ಸಂಸದ ಪಟುಗೆ ಗೊತ್ತಿಲ್ಲಾ. ಅನಂತಕುಮಾರ ಅವರು ನಾಲ್ಕು ವರ್ಷ ಮಲಗಿದ್ರು. ಈಗ ಮುಖ್ಯಮಂತ್ರಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ದೊಡ್ಡವರಾಗುತ್ತೆವೆ ಎಂದು ತಿಳ್ಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಿಎಂ ವಿರುದ್ಧ ಅನಂತಕುಮಾರ್ ಹೆಗಡೆ ಏಕವಚನ ಪದ ಬಳಕೆ ವಿಚಾರದ ಬಗ್ಗೆ ಯತ್ನಾಳ್ ಮಾತನಾಡಿ, ನಾನು ಅವರ ರೀತಿ ಮಾತನಾಡಲು ಹೋಗುವುದಿಲ್ಲ. ನಾನು ಗೌರವಾನ್ವಿತ ಸಿಎಂ ಸಿದ್ದರಾಮಯ್ಯ ಎಂದೆ ಕರೆಯುತ್ತೇನೆ. ಅನಂತಕುಮಾರ್ ಅವರಿಗೆ ಕಿವಿ ಮಾತು ಹೇಳುವಷ್ಟು ನಾನು ದೊಡ್ಡವನಲ್ಲ. ಅವರ ಸ್ಟೈಲ್ ಬೇರೆ ನಮ್ಮ ಸ್ಟೈಲೇ ಬೇರೆ.. ಅನಂತಕುಮಾರ್ ಹೇಳಿಕೆ ಬಿಜೆಪಿ ಸಂಸ್ಕೃತಿ ತೋರಿಸುತ್ತೆ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರ, ಆ ರೀತಿ ಮಾತನಾಡೋದು ತಮ್ಮ ಪಕ್ಷದ ಸಂಸ್ಕೃತಿ ಅಲ್ಲ. ನಮ್ಮ ಪ್ರಧಾನಿಗಳು ಆ ರೀತಿ ಮಾತನಾಡಲ್ಲ. ನಮ್ಮ ಗೃಹ ಸಚಿವರು ಸಹ ಮಾತನಾಡಲ್ಲ.. ನಮ್ಮಲ್ಲಿ ಸಂಸ್ಕೃತಿ ಇದೆ, ಸಂಸ್ಕೃತಿಗಾಗಿಯೇ ಬಿಜೆಪಿ ಹೋರಾಟ ಮಾಡುತ್ತದೆ ಎಂದಿದ್ದಾರೆ.