ಅನಂತ್ ಅಂಬಾನಿ – ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಕಾರ್ಯಕ್ರಮಕ್ಕೆ ಕೌಂಟ್ ಡೌನ್ ಶುರುವಾಗಿದೆ.ಉದ್ಯಮಿ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ 2ನೇ ಪ್ರೀ-ವೆಡ್ಡಿಂಗ್ ತಯಾರಿ ಬರದಿಂದ ನಡೆಯುತ್ತಿದೆ. ಇಟಲಿಯ ಸಮುದ್ರ ತೀರದ ಮೇಲೆ ಅದರಲ್ಲೂ ಐಷಾರಾಮಿ ಹಡಗಿನಲ್ಲಿ ಜೂ.1ರಂದು 2ನೇ ಪ್ರಿ-ವೆಡ್ಡಿಂಗ್ ಜರುಗಲಿದೆ. ಇನ್ನು, ಈ ಸಮಾರಂಭಕ್ಕೆ ಭಾರತ ಹಾಗೂ ನಾನಾ ದೇಶಗಳ ಗಣ್ಯರನ್ನು ಆಹ್ವಾನಿಸಲಾಗಿದ್ದು, ಅದರ ಆಮಂತ್ರಣ ಪತ್ರಿಕೆ ಹಾಗೂ ಸಮಾರಂಭದಲ್ಲಿನ ಕಾರ್ಯಕ್ರಮಗಳ ಪಟ್ಟಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಮಾರ್ಚ್ 1ರಿಂದ 3 ದಿನಗಳ ಕಾಲ ಗುಜರಾತ್ನ ಜಾಮ್ನಗರದಲ್ಲಿ ಅದ್ಧೂರಿಯಾಗಿ ಬಹಳ ಅದ್ಧೂರಿಯಾಗಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮೊದಲನೇ ಪ್ರಿ-ವೆಡ್ಡಿಂಗ್ ಕಾರ್ಯಕ್ರಮ ನಡೆದಿತ್ತು.2ನೇ ಪ್ರಿ-ವೆಡ್ಡಿಂಗ್ ಕಾರ್ಯಕ್ರಮಕ್ಕಾಗಿ ಈಗಾಗಲೇ ಲಕ್ಷುರಿ ಹಡಗೊಂಡನ್ನು ಬುಕ್ ಮಾಡಲಾಗಿದೆ. ಜೂ. 1ರಂದು ಇಟಲಿಯಿಂದ ಹೊರಡಲಿರುವ ಹಡಗು ಫ್ರಾನ್ಸ್ವರೆಗೆ ಪ್ರಯಾಣಿಸಲಿದೆ. ಮತ್ತೆ ಪುನಃ ಅಲ್ಲಿಂದ ಮತ್ತೆ ಇಟಲಿಗೆ ಹಿಂದಿರುಗಲಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ. 2ನೇ ಪ್ರಿ ವೆಡ್ಡಿಂಗ್ ಕಾರ್ಯಕ್ರಮಕ್ಕೆ ನಟ ರಣವೀರ್ ಸಿಂಗ್, ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಮತ್ತು ಅವರ ಪತ್ನಿ, ನಟ ರಣಬೀರ್ ಕಪೂರ್-ಆಲಿಯಾ ಭಟ್ ಗೆ ಆಹ್ವಾನ ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ ಜಗತ್ತಿನಾದ್ಯಂತ ಸುಮಾರು 300 ವಿಐಪಿ ಅತಿಥಿಗಳನ್ನು ಆಹ್ವಾನಿಸಲಾಗಿದೆ.

ಮೇ 29ರಂದು ಹಡಗಿನಲ್ಲಿ ವೆಲ್ ಕಂ ಬ್ಯಾಶ್ ಸಮಾರಂಭ ಆಯೋಜಿಸಲಾಗಿದೆ. ಆ ಪಾರ್ಟಿಯಲ್ಲಿ ಫೇಮಸ್ ಉದ್ಯಮಿಗಳು, ಸಿನಿಮಾ ನಟರು, ಕ್ರಿಕೆಟ್ ದಿಗ್ಗಜರು, ವಿವಿಧ ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ. ಇದಾದ ಬಳಿಕ ಸ್ಟಾರಿ ನೈಟ್ ಎಂಬ ಕಾರ್ಯಕ್ರಮ ನಡೆಸಲಿದ್ದಾರೆ.

ಅದು ರಾತ್ರಿ ಹಡಗಿನ ಮೇಲ್ಫಾವಣಿಯ ಮೇಲೆ ಓಪನ್ ಕನ್ವೆಂನ್ಷನ್ ಹಾಲ್ನಲ್ಲಿ ನಡೆಯಲಿದೆ. ಮೇ 30ರಂದು, ರೋಮನ್ ಹಾಲಿಡೆ ಎಂಬ ಕಾರ್ಯಕ್ರಮ ನಡೆಸಲಿದ್ದಾರೆ. ಜುಲೈ 12ರಂದು ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವೈವಾಹಿಕ ಬದುಕಿಗೆ ಪಾದಾರ್ಪಣೆ ಮಾಡಲಿದ್ದಾರೆ.