ಅಂಬೇಡ್ಕರ್ (Ambedkar) ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ಬಾಗಲಕೋಟೆಯಲ್ಲಿ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ (KS Eshwarappa) ಹೇಳಿಕೆ ನೀಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಜೀವಂತವಾಗಿದ್ದಾಗ ಕಾಂಗ್ರೆಸ್ (Congress) ಅವರನ್ನು ಪೂರ್ಣ ಪ್ರಮಾಣದಲ್ಲಿ ಅಪಮಾನ ಮಾಡಿತ್ತು ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಇದೇ ಅಂಬೇಡ್ಕರ್ ಅವರು ಚುನಾವಣೆಗೆ ನಿಂತಾಗ ಕಾಂಗ್ರೆಸ್ ನವರೇ ಅವರನ್ನು ಸೋಲಿಸಿದ್ರು.ಅಂಬೇಡ್ಕರ್ ಸಾವನ್ನಪ್ಪಿದಾಗ ದೆಹಲಿಯಲ್ಲಿ (Delhi) ಜಾಗವನ್ನು ಕಾಂಗ್ರೆಸ್ ನವರು ಕೊಡಲಿಲ್ಲ.ಕೇಂದ್ರ ಮಂತ್ರಿಮಂಡಲದಲ್ಲಿದ್ದಾಗ ಅಂಬೇಡ್ಕರ್ ರಾಜೀನಾಮೆ ಕೊಟ್ರೆ ನೆಹರೂ ಅವರು ಕೊಟ್ರೆ ಕೊಡಲಿ ಅಂತ ಹೇಳಿ ಸುಮ್ಮನಾದ್ರು. ಈ ರೀತಿ ಕಾಂಗ್ರೆಸ್ ನವರು ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ ಅಷ್ಟಿಷ್ಟಲ್ಲ ಎಂದು ಹೇಳಿದ್ದಾರೆ.

ಆದ್ರೆ ಬಿಜೆಪಿ (Bjp) ಅವ್ರು ಅಂಬೇಡ್ಕರ್ ಅವರಿಗೆ ಮುಂಚೆಯಿಂದಲೂ ಪೂರ್ಣ ಪ್ರಮಾಣದ ಗೌರವವನ್ನು ನೀಡುತ್ತಾ ಬಂದಿದ್ದಾರೆ.ಅಮಿತ್ ಶಾ ಮಾತಿನ ಅರ್ಥ ಏನಂದ್ರೆ ಬಾಯಿಂದ ಮಾತ್ರ ಅಂಬೇಡ್ಕರ್..ಅಂಬೇಡ್ಕರ್ ಅಂತಿದ್ದೀರಿ ಹೃದಯದಿಂದ ಅಂಬೇಡ್ಕರ್ ಅಂತಿಲ್ಲ ಅನ್ನೋ ಅರ್ಥದಲ್ಲಿ ಹೇಳಿದ್ದಾರೆ.ಈ ರೀತಿ ಅಂಬೇಡ್ಕರ್ ಅಂಬೇಡ್ಕರ್ ಅಂತ ಹೇಳುವ ಬದಲಿ ದೇವರು ನಾಮ ಮಾಡಿದರೆ ನಿಮಗೆ ಸ್ವರ್ಗದಲ್ಲಿ ಜಾಗ ಸಿಕ್ಕಿತ್ತು ಎಂಬರ್ಥದಲ್ಲಿ ಹೇಳಿದ್ದಾರೆ. ಇದ್ರಲ್ಲಿ ವಿವಾದ ಏನಿದೆ ಏನಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

