ಮಹಾರಾಷ್ಟ್ರದಲ್ಲಿರುವ ಮೈತ್ರಿ ಸರ್ಕಾರವನ್ನು ಕೆಡವಿ ಅಧಿಕಾರ ಸ್ಥಾಪಿಡಲು ಮುಂದಾಗುತ್ತಿರುವ ಬಿಜೆಪಿಗೆ ಈಗ ಅವಕಾಶವೊಂದು ಒದಗಿ ಬಂದಿದೆ. ಶಿವಸೇನೆಯ ಬದ್ದ ವೈರಿ ಎಂದೇ ಕರೆಯಲ್ಪಡುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ಪಕ್ಕಾ ಆಗಿದೆ. ಈ ಮಹತ್ವದ ಬೆಳವಣಿಗೆ ಬೆನ್ನಲ್ಲೇ ರಾಜ್ ಔರಂಗಬಾದ್ಗೆ ತೆರಳಿದ್ದಾರೆ.
ಮಹಾರಾಷ್ಟ್ರ ರಾಜಕಾರಣದಲ್ಲಿ ಹಿಂದೂ ಫೈರ್ ಬ್ರಾಂಡ್ ಎಂದೇ ಕರೆಯಲ್ಪಡುವ ರಾಜ್ ಠಾಕ್ರೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಹೆಚ್ಚು ಉತ್ಸುಕವಾಗಿದೆ ಏಕೆಂದರೆ ಮುಂದಿನ ವರ್ಷ ಮುನ್ಸಿಪಾಲ್ ಚುನಾವಣೆ, ಆ ನಂತರ 2024ರ ಲೋಕಸಭೆ ಹಾಗೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯುವ ಕಾರಣ ಬಿಜೆಪಿಗೆ ಈ ಚುನಾವಣೆಗಳು ತೀವ್ರ ಮಹತ್ವ ಪಡೆದುಕೊಂಡಿದೆ.
ಮೇ 1 ಭಾನುವಾರದಂದು ಮಹಾರಾಷ್ಟ್ರ ದಿವಸ್ ಹಾಗೂ ಕಾರ್ಮಿಕರ ದಿನಾಚರಣೆಯಂದು ಸಮಾವೇಶವನ್ನುದ್ದೇಶಿಸಿ ರಾಜ್ ಠಾಕ್ರೆ ಮತನಾಡಲಿದ್ದಾರೆ ಈ ವೇಳೆ ಮೈತ್ರಿ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ.
ಇದೇ ವೇಳೆ ಸಮಾವೇಶದಲ್ಲಿ ರಾಜ್ ತಮ್ಮ ಪಕ್ಷದ ಕಾರ್ಯಕರ್ತರನ್ನು ಸರ್ಕಾರದ ವಿರುದ್ದ ಹುರಿದುಂಬಿಸಬಹುದು ಎಂದು ಹೇಳಲಾಗುತ್ತಿದೆ.