
ನಟ, ರಾಜಕಾರಣಿ ಆಗಿ ಜನಮಾನಸದಲ್ಲಿ ಉಳಿದಿರುವ ದಿವಂಗತ ಅಂಬರೀಶ್ ಮೊಮ್ಮಗನ ನಾಮಕರಣ ಶಾಸ್ತ್ರ, JW ಮ್ಯಾರಿಯೆಟ್ ಹೋಟೆಲ್ನಲ್ಲಿ ನಡೆಯುತ್ತಿದೆ. ನಾಮಕರಣ ಶಾಸ್ತ್ರ ಇಡೀ ಕುಟುಂಬದ ಜೊತೆಗೆ ಚಿತ್ರೋದ್ಯಮ ಜೊತೆಗೂಡಿದೆ.

ಅಂಬಿ ಕುಟುಂಬಸ್ಥರು ಹಾಗೂ ಆತ್ಮೀಯರಿಗಷ್ಟೇ ಆಹ್ವಾನ ನೀಡಿರುವ ಅಂಬಿ ಕುಟುಂಬ, ಅಭಿಷೇಕ್ ಅಂಬರೀಶ್ ಮಗನ ನಾಮಕರಣ ಶಾಸ್ತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಗೈರು ಹಾಜರಾಗಿದ್ದಾರೆ.

ನಟ ದರ್ಶನ್ ಅಭಿಷೇಕ್ ಮಗನ ನಾಮಕರಣಕ್ಕೆ ಬರೋ ಸಾಧ್ಯತೆ ಇಲ್ಲ ಎನ್ನಲಾಗಿದೆ. ಇನ್ನು ಬೆಂಗಳೂರಿನಲ್ಲಿ ಟಾಕ್ಸಿಕ್ ಶೂಟಿಂಗ್ ಸೆಟ್ನಲ್ಲಿ ಬ್ಯುಸಿ ಇರುವ ಯಶ್ ಕೂಡ ಅಂಬಿ ಮೊಮ್ಮಗನ ನಾಮಕರಣಕ್ಕೆ ಗೈರಾಗಿದ್ದಾರೆ. ಮದರ್ ಇಂಡಿಯಾ ಮೊಮ್ಮಗನ ನಾಮಕರಣದಲ್ಲಿ ಜೋಡೆತ್ತು ನಾಪತ್ತೆ ಆಗಿವೆ.

ಇತ್ತೀಚೆಗಷ್ಟೆ ಸೋಷಿಯಲ್ ಮೀಡಿಯಾದಲ್ಲಿ ಸುಮಲತಾ, ಅಭಿಷೇಕ್ ಹಾಗೂ ಅವಿವಾ ಎಲ್ಲರನ್ನೂ ಅನ್ ಫಾಲೋ ಮಾಡಿರೊ ದರ್ಶನ್, ಆ ಬಳಿಕ ಸುಮಲತಾ ಹಾಗೂ ದರ್ಶನ್ ನಡುವೆ ಮನಸ್ತಾಪ ಇದೆ ಅನ್ನೋ ಗುಸು ಗುಸು ಕೇಳಿ ಬಂದಿತ್ತು. ಆ ಬಳಿಕ ಅಂಬಿ ಕುಟುಂಬದ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ ದರ್ಶನ್.

ಅಭಿಷೇಕ್ ಅಂಬರೀಶ್ ಮಗನಿಗೆ ಅಪ್ಪನ ಹೆಸರನ್ನೇ ನಾಮಕರಣ ಮಾಡಿದ್ದಾರೆ. ಜೂ.ಅಂಬಿಗೆ ರಾಣಾ ಅಮರ್ ಅಂಬರೀಶ್ ಅಂತ ನಾಮಕರಣ ಮಾಡಲಾಗಿದೆ. ಖಾಸಗಿ ಹೋಟೆಲ್ನಲ್ಲಿ ನಡೆದ ನಾಮಕರಣ ಶಾಸ್ತ್ರದಲ್ಲಿ ಹಿತೈಷಿಗಳು, ಚಿತ್ರೋದ್ಯಮದ ಗಣ್ಯರು ಭಾಗಿಯಾಗಿದ್ದರು.