ರೆಬೆಲ್ ಸ್ಟಾರ್ ಅಂಬರೀಶ್ ರವರಿಗೆ ಇಂದ ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಅಂಬಿ ಅಭಿಮಾನಿಗಳು CDP ರೆಡಿ ಮಾಡಿದ್ದಾರೆ. ಇದನ್ನ ದಾಸ ದರ್ಶನ್ ರಿಲೀಸ್ ಮಾಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಪೇಜ್ ಅಲ್ಲಿಯೇ ಇದನ್ನ ರಿಲೀಸ್ ಮಾಡಿದ್ದಾರೆ. ಇದನ್ನ ರಿಲೀಸ್ ಮಾಡೋದ್ರ ಜೊತೆಗೆ ಹೀಗೆ ಮನದುಂಬಿ ಬರೆದುಕೊಂಡಿದ್ದಾರೆ.

ನಮ್ಮೆಲ್ಲರ ಅಚ್ಚುಮೆಚ್ಚಿನ ಸಹೃದಯಿ, ರೆಬೆಲ್ ಸ್ಟಾರ್ ಅಂಬಿ ಅಪ್ಪಾಜಿ ರವರ ಹುಟ್ಟುಹಬ್ಬದ ಪ್ರಯುಕ್ತ ಮೂಡಿ ಬಂದಿರುವ CDP ಬಿಡುಗಡೆ ಮಾಡಲು ಅವಕಾಶ ಮಾಡಿಕೊಟ್ಟ ಅಭಿಮಾನಿ ಸಮೂಹಕ್ಕೆ ಧನ್ಯವಾದಗಳು. ನಮ್ಮ ನಿಷ್ಠೆಯ ಕೆಲಸ-ಕಾರ್ಯಗಳಲ್ಲಿ ಸದಾ ಬೆನ್ನೆಲುಬಾಗಿ ಅಂಬಿ ಅಪ್ಪಾಜಿ ನಮ್ಮೊಂದಿಗೆ ಜೀವಂತವಾಗಿದ್ದಾರೆ ಅಂತ ನಟ ದರ್ಶನ್ ಬರೆದುಕೊಂಡಿದ್ದಾರೆ.

ಅಂಬರೀಶ್ ಅವರ ಹುಟ್ಟುಹಬ್ಬಕ್ಕೆ ವಿಶೇಷ ಪೋಸ್ಟರ್ ರಿಲೀಸ್ ಮಾಡಿ ಎಕ್ಸ್‌ನಲ್ಲಿ ಸ್ಪೆಷಲ್ ಆಗಿ ದರ್ಶನ್ ವಿಶ್ ಮಾಡಿದ್ದಾರೆ. ಇತ್ತ ಕುಟುಂಬಸ್ಥರು ಮತ್ತು ಅಭಿಮಾನಿಗಳು ಅಂಬಿ ಸಮಾಧಿಗೆ ತೆರಳಿ ಪುಷ್ಪ ನಮನ ಸಲ್ಲಿಸಿದ್ದಾರೆ.