ಚೀನಾದಲ್ಲಿ ಕಾಣಿಸಿಕೊಂಡಿರುವ Human Metapneumovirus (HMPV) ಬಗ್ಗೆ ಜಾಗತಿಕ ಮಾಧ್ಯಮಗಳಲ್ಲಿ ಅಷ್ಟೆನೂ ಸುದ್ದಿಯಿಲ್ಲ. ಹೋಗಲಿ ಬಿಡಿ, ಚೀನಾದಲ್ಲಾದರೂ ಅದರ ಬಗ್ಗೆ ಭಯಂಕರ ಭಯವುಂಟಾ? ಇಲ್ಲ. ಅಲ್ಲಿನ ಸರ್ಕಾರ, ಜನರು, ವೈದ್ಯಕೀಯ ಕ್ಷೇತ್ರಕ್ಕೆ ಇದು ಹೊಸತಲ್ಲ. ಪ್ರತೀ ವರುಷ ಚಳಿ ಹೆಚ್ಚಾದಾಗ HMPV ಪ್ರಕರಣಗಳು ವರದಿಯಾಗುತ್ತವೆ. ಚಳಿಗಾಲ ಕೊನೆಗೊಂಡಂತೆ HMPV ಕೂಡಾ ಸುದ್ದಿಯಾಚೆ.

ಇನ್ನು ವಿಶ್ವ ಆರೋಗ್ಯ ಸಂಸ್ಥೆಯಾಗಲಿ, US Centers for Disease Control and Prevention ಮುಂತಾದ ಜಾಗತಿಕ ಮನ್ನಣೆ ಪಡೆದ ಸಂಸ್ಥೆಗಳೂ ಇದರ ಬಗ್ಗೆ ತಲೆಕೆಡಿಸಿಕೊಂಡಲ್ಲ. ಚೀನಾದಲ್ಲಿ ಈ ವರುಷ ಕಂಡುಬಂದಕ್ಕಿಂತಾ ಹೆಚ್ಚು ಪ್ರಕರಣಗಳು ಕಳೆದ ವರುಷ ಇದ್ದಿದ್ದವು. ಆದರೂ ಯಾವುದೇ ಸುದ್ದಿಯಾಗಲಿಲ್ಲ.
ಆದರೆ ಜಾಗತಿಕವಾಗಿ ಬಿಡಿ, ದೇಸೀಯ, ರಾಜ್ಯ, ಜಿಲ್ಲಾ, ಹೋಬಳಿ, ಪಂಚಾಯತ್, ಮನೆ-ಮನೆಗಳಲ್ಲೂ ನಿತ್ಯವೂ ಉಗಿಸಿಕೊಳ್ಳುವ, ಭಯೋತ್ಪಾದಕರೆಂದೇ ಕುಖ್ಯಾತಿ ಪಡೆದಿರುವ ನಮ್ಮ ಭಾರತದ ತೊಡೆಗುನ್ನಿ ಮಾಧ್ಯಮಗಳಿಗೆ ಮಾತ್ರ ಈ HMPV ಸದ್ಯದ ಡಾರ್ಲಿಂಗ್ ಹಾಗೂ ಅವರಿಗೆ TRP ಹಾಗೂ ಹಣ ತಂದುಕೊಡುವ ವೈರಸ್.
ಗಾಬರಿಕೊಂಡಿರುವುದು ಚೀನಾನೂ ಅಲ್ಲ, ವಿಶ್ವ ಆರೋಗ್ಯ ಸಂಸ್ಥೆನೂ ಅಲ್ಲ, ವಿಶ್ವನೂ ಅಲ್ಲ. ಯಾರೂ ಗಾಬರಿಯಾಗುತ್ತಿಲ್ಲ ಬದಲಾಗಿ ನಮ್ಮ ತೊಡೆಗುನ್ನಿಗಳು ಕೃತಕ ಗಾಬರಿ ಹುಟ್ಟಿಸುತ್ತಿವೆ. ವೈದ್ಯಕೀಯ ಕ್ಷೇತ್ರದ ಪರಿಣಿತರ ಪ್ರಕಾರ ಇದೊಂದು ಸಾಮಾನ್ಯ ಫ್ಲೂ, ಅಷ್ಟೆ. ಆದರೆ ನಮ್ಮ ತೊಡೆಗುನ್ನಿಗಳಿಗೆ ಇದು ಎರಡನೆಯ ಕೋವಿಡ್, ಮಾರಣಾಂತಿಕ, ವಿಪರೀತ….

ಈ HMPV ವೈರಸನ್ನು ಮೊಟ್ಟಮೊದಲು ಗುರುತಿಸಿದ್ದು 2001ರಲ್ಲಿ, ಅದೂ ನೆದರ್ಲ್ಯಾಂಡ್ಸ್ ನಲ್ಲಿ. ಇದರಿಂದ ಹೆಚ್ಚಿನ ತೊಂದರೆಯಾಗುವುದು ಮಕ್ಕಳಿಗೆ ಹಾಗೂ ಇಳಿ ವಯಸ್ಸಿನವರಿಗೆ ಹಾಗೂ ದೇಹದಲ್ಲಿ ರೋಗ ಪ್ರತಿರೋಧ ಶಕ್ತಿ ಕಡಿಮೆಯಿರುವವರಿಗೆ. ಆದರೆ ನಾವು ಎಂದಿನಂತೆ ಶೀತ-ಜ್ವರ ಬಂದಾಗ ಜಾಗ್ರತೆ ಮಾಡಿದಾಗೆ, ಜಾಗ್ರತೆ ಮಾಡಿದರೆ ಸಾಕು. ಅದಕ್ಕಿಂತಾ ಹೆಚ್ಚೇನು ಬಹುತೇಕರಿಗೆ ಬೇಕಿಲ್ಲ ಎನ್ನುವುದು ವೈದ್ಯರ ಅಂಬೋಣ.
ನಿನ್ನೆ ನಮ್ಮ Srinivas Kakkilaya ಸರ್ ಹೇಳಿರುವ ಹಾಗೆ ಇದರ ಗುಣಲಕ್ಷಣಗಳೂ ಸಾಮಾನ್ಯ ಶೀತ-ನೆಗಡಿ-ಜ್ವರದ್ದೇ. ಇದು ಕೋವಿಡ್‍ನಂತಲ್ಲ. ಹಾಗಾಗಿ ಕೋವಿಡ್‍ನ ಹಾಗೆ ಇದನ್ನು ನೋಟಿಫೈ ಕೂಡಾ ಮಾಡಬೇಕಾಗಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಇದನ್ನು common cold ಅಥವಾ ಸಾಮಾನ್ಯ ಶೀತ/ನೆಗಡಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಎರಡು ದಶಕಗಳಿಂದ ವಿಶ್ವದೆಲ್ಲೆಡೆ ಕಂಡುಬಂದಿರುವ ಈ HMPV ವೈರಸ್‍ನಿಂದ ಇದುವರೆಗೆ ಆಗಿರುವ ಮಾರಣಾಂತಿಕ ಅಥವಾ ಭಯಂಕರ ಪರಿಣಾಮ ಶೂನ್ಯಕ್ಕೆ ಸಮ.
ಹಾಗಾಗಿ ಯಾರೂ ಗಾಬರಿಪಡಬೇಕಾಗಿಲ್ಲ. ಸಾಮಾನ್ಯ ಶೀತ-ಜ್ವರಕ್ಕೆ ಉಪಚಾರ ಮಾಡುವಂತೆ, ಶೀತ-ಕಫ-ಕೆಮ್ಮು ಇದ್ದರೆ ಜಾಗರೂಕರಾಗಿ ನಡೆದುಕೊಳ್ಳುವಂತೆ ಮಾಡಿದರೆ ಸಾಕು ಎಂದು ವೈದ್ಯರು ಹಾಗೂ ವೈದ್ಯಕೀಯ ಕ್ಷೇತ್ರದವರು ಹೇಳುತ್ತಿದ್ದಾರೆ.

ಇನ್ನು ಭಾರತದಲ್ಲಿ, ಅದೂ ಬೆಂಗಳೂರಿನಲ್ಲಿ ಮೊಟ್ಟಮೊದಲ HMPV ಸೋಂಕು ಪತ್ತೆಯಾಗಿದೆ ಎನ್ನುವುದು ಶುದ್ಧ ಸುಳ್ಳು ಹಾಗೂ ಫೇಕ್ ಸುದ್ದಿ. ಕಳೆದ ಎರಡು ದಶಕಗಳಿಂದ ವಿಶ್ವದೆಲ್ಲೆಡೆ ಇರುವ ಈ ಸೋಂಕು, ನಮ್ಮ ಭಾರತದಲ್ಲೂ ಅಷ್ಟೇ ಸಮಯದಿಂದ ಇದೆಯೇ ಹೊರತು ಹೊಸತಾಗಿ ಇವತ್ತು ಬೆಳಗ್ಗೆ ಕಂಡುಬಂದಿರುವುದಲ್ಲ, ನಮ್ಮ ತೊಡೆಗುನ್ನಿಗಳು ಸುದ್ದಿ ಮಾಡುತ್ತಿರುವಂತೆ. ಹೊಸದಾಗಿ ಕಂಡುಬಂದಿರುವುದು ನಮ್ಮ ಅಂಡೆಪಿರ್ಕಿ ಬರ್ನಲಿಸ್ಟ್ ಗಳ ಬೊಜ್ಜ.
ಇನ್ನು ಈ HMPV ವೈರಸ್‍ನ ಭಯಂಕರ ಪರಿಣಾಮ ನಮ್ಮ ಮೇಲೆ ಆಗಬಾರದೆಂದರೆ, ನಾವು ಮೊದಲು ಜಾಗರೂಕರಾಗಿರಬೇಕಾಗಿರುವುದು ನಮ್ಮ ತೊಡೆಗುನ್ನಿ ಮಾಧ್ಯಮಗಳಿಂದ. ನಮ್ಮ ಟಿವಿ, ವೆಬ್ ಬ್ರೌಸರ್ ಗಳನ್ನು ಸ್ಯಾನಿಟೈಸ್ ಮಾಡಿ, ಈ ತೊಡೆಗುನ್ನಿ ಮಾಧ್ಯಮಗಳನ್ನು ಸ್ವಲ್ಪ ದಿನ ಮಾಸ್ಕ್ ಹಾಕಿ ಹದ್ದುಬಸ್ತಿನಲ್ಲಿಟ್ಟರೆ, ಎಲ್ಲವೂ ಸರಿಯಿರುತ್ತೆ. ನಮ್ಮ ದೇಶದ ಮಾಧ್ಯಮಗಳ, ಇನ್ನು ನಮ್ಮ ಕನ್ನಡ ತೊಡೆಗುನ್ನಿಗಳ ವರದಿಗಾರಿಕೆಯ ಕ್ವಾಲಿಟಿ, ಅವರ ಪತ್ರಿಕಾ ವ್ಯವಸಾಯ, journalistic ಬಗ್ಗೆ ಗೊತ್ತಿರುವ ನಾವು ಅವುಗಳನ್ನು ನಂಬಿದರೆ ಆತ್ಮಹತ್ಯೆ ಮಾಡಿಕೊಂಡಂತೆ.
ನಮ್ಮಲ್ಲಿರುವುದು ಪತ್ರಕರ್ತರಲ್ಲ ಸುದ್ದಿ ಭಯೋತ್ಪಾದಕರು, ಸುದ್ದಿ ಮಾಫೀಯಾದವರು. ಇವುಗಳ ಕೈಯಲ್ಲಿ ಮಾಧ್ಯಮ, ಆ ಮಾಧ್ಯಮಗಳನ್ನು ಉಳಿಸುವ ಸೆನ್ಸೇಶನಲ್ ಸುದ್ದಿಯಿಲ್ಲವೆಂದರೆ ಇವುಗಳು ಎಲ್ಲೋ ತಲೆಹಿಡುಕರಾಗಿರುತ್ತಿದ್ದರು ಇಲ್ಲವೇ ಸಿಗ್ನಲ್‍ಗಳಲ್ಲಿ, ಮೆಜೇಸ್ಟಿಕ್ ಇಲ್ಲ ರೇಲ್ವೇ ನಿಲ್ದಾಣಗಳಲ್ಲಿ ಅದೇ ವೈರಸ್ ಪೀಡಿತ ಚೀನಾದಿಂದ ಕಾಚಾ ತಂದು ನೂರಕ್ಕೆ ಐದರಂತೆ ಮಾರುತ್ತಿದ್ದರು, ಅಷ್ಟೆ. ಬೇಕೂಫ್‍ಗಳು!