ಬಂಗಾಳಕೊಲ್ಲಿಯಲ್ಲಿ (Bay of bengal) ಎದ್ದಿರುವ ರೆಮಲ್ (Remal) ಚಂಡಮಾರುತ ಭಾರಿ ಅವಾಂತರಗಳನ್ನು ಸೃಷ್ಟಿಸಿದೆ. ಬಾಂಗ್ಲಾದೇಶ (bangladesh), ಪಶ್ಚಿಮ ಬಂಗಾಳ (West bengal) ಸೇರಿ ಈಶಾನ್ಯ ರಾಜ್ಯಗಳಲ್ಲಿ ರಣಚಂಡಿ ಮಾರುತ ಹಲವರನ್ನು ಬಲಿ ಪಡೆದಿದೆ. ಮಿಜೋರಾಮ್‌ನಲ್ಲಿ (Mizoram) ಭೂಕುಸಿತದಿಂದಾಗಿ 31 ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ.

ಇನ್ನು, ಪಶ್ಚಿಮ ಬಂಗಾಳದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬರಿಯುತ್ತಿದ್ದಾನೆ. ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು ವೆಸ್ಟ್ ಬೆಂಗಾಲ್ ಮಂದಿ ನಲುಗಿ ಹೋಗಿದ್ದಾರೆ. ಪಶ್ಚಿಮ ಬಂಗಾಳದ ಕರಾವಳಿಗೆ ಅಪ್ಪಳಿಸಿರೋ ರೆಮಲ್ ಚಂಡಮಾರುತ ಅಪಾರ ಹಾನಿ ಉಂಟು ಮಾಡ್ತಿದೆ.
ಸಾವು- ನೋವಿಗೂ ಕಾರಣವಾಗ್ತಿದ್ದು, ಜನರು ಮಳೆಯಿಂದ ಮುತ್ತಿಕೊಡಪ್ಪ ಎಂದು ದೇವರಲ್ಲಿ ಪ್ರಾರ್ಥಿಸುವಂತಾಗಿದೆ. ಇನ್ನು ವಿಪತ್ತು ನಿರ್ವಹಣಾ ಅಧಿಕಾರಿಗಳು (NDRF) ಹೆಚ್ಚು ಹಾನಿ ತಪ್ಪಿಸಲು ಮುಂಜಾಗ್ರತಾ ಕ್ರಮಕೈಗೊಂಡಿದ್ದರೂ ಚಂಡಮಾರುತ ಅಪಾರ ಪ್ರಮಾಣದಲ್ಲಿ ಹಾನಿ ಸೃಷ್ಟಿಸಿ ಜನ ಬೆಚ್ಚಿ ಬೀಳುವಂತೆ ಮಾಡಿದೆ.











