
ನವದೆಹಲಿ: ಕೇಂದ್ರೀಯ ತನಿಖಾ ದಳ (ಸಿಬಿಐ) CBI)ಬುಧವಾರ ಹರಿದ್ವಾರದ ಬಿಎಚ್‌ಇಎಲ್ (BHEL)ರಾಣಿಪುರದಲ್ಲಿರುವ ಕೇಂದ್ರೀಯ (Central at Ranipur)ವಿದ್ಯಾಲಯದ ಪ್ರಾಂಶುಪಾಲ ಕುಮಾರ್ ನನ್ನು ಲಂಚಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದೆ.ಆರೋಪಿ ಪ್ರಾಂಶುಪಾಲ ರಾಜೇಶ್ ಕುಮಾರ್( Principal Rajesh Kumar)ವಿರುದ್ಧ ಕೇಂದ್ರೀಯ ವಿದ್ಯಾಲಯದಲ್ಲಿ ಕೆಲಸ (Kendriya Vidyalaya)ಮುಂದುವರಿಸಲು ಕಾವಲುಗಾರರು, ಗುಡಿಸುವವರು ಮತ್ತು ತೋಟಗಾರರಂತಹ ಗುತ್ತಿಗೆ ಕಾರ್ಮಿಕರಿಂದ ತಿಂಗಳಿಗೆ 10,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಸಿಬಿಐ ದೂರು ದಾಖಲಿಸಿದೆ ಎಂದು ಸಿಬಿಐ ಅಧಿಕಾರಿ ತಿಳಿಸಿದ್ದಾರೆ.

ಹರಿದ್ವಾರದ ಕೇಂದ್ರೀಯ ವಿದ್ಯಾಲಯದ ಆರೋಪಿ ಪ್ರಾಂಶುಪಾಲರನ್ನು ಸಿಬಿಐ ಬಂಧಿಸಿದ್ದು, ದೂರುದಾರರಿಂದ 30,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಸಿಬಿಐ ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದೆ. ಆರೋಪಿ ಕಳೆದ 10 ತಿಂಗಳಲ್ಲಿ ಎಂಟು ಕಾರ್ಮಿಕರಿಂದ 80,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಸಂಧಾನದ ನಂತರ, ಆರೋಪಿ ಲಂಚದ ಮೊತ್ತವನ್ನು 50,000-60,000 ರೂ.ಗೆ ಇಳಿಸಲು ಒಪ್ಪಿಕೊಂಡರು ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಬಿಐ, 30,000 ರೂಪಾಯಿ ಲಂಚವನ್ನು ಪಾರ್ಟ್ ಪೇಮೆಂಟ್ ಆಗಿ ಸ್ವೀಕರಿಸುತ್ತಿದ್ದಾಗ ಕುಮಾರ್ ನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದೆ. ಆರೋಪಿಯ ನಿವಾಸ ಮತ್ತು ಅಧಿಕೃತ ಆವರಣದಲ್ಲಿ ಶೋಧ ನಡೆಸಲಾಗಿದ್ದು, ಕೆಲವು ದೋಷಾರೋಪಣೆಯ ದಾಖಲೆಗಳನ್ನು ವಶಪಡಿಸಿಕೊಳ್ಳಲು ಕಾರಣವಾಯಿತು. ಸಿಬಿಐ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಆರೋಪಿ ಪ್ರಾಂಶುಪಾಲರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸಿಬಿಐ ಅಧಿಕಾರಿ ತಿಳಿಸಿದ್ದಾರೆ.