ಮೈಸೂರಿನ ಉದಯಗಿರಿ (Mysuru udayagiri Riot) ಪೊಲೀಸ್ ಠಾಣೆ ಎದುರು ಕೆಲ ಮುಸ್ಲಿಂ ಕಿಡಿಗೇಡಿಗಳ (Muslim youths) ಗುಂಪು ಗಲಭೆ ನಡೆಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಪೊಲೀಸ್ ಠಾಣೆಯ ಮೇಲೆ ಕಲ್ಲು ಎಸೆದಿರುವವರ ಹೆಡೆಮುರಿ ಕಟ್ಟಲು ಪೊಲೀಸರು ಮುಂದಾಗಿದ್ದು ಈ ವೇಳೆ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಈ ರೀತಿ ಗಲಭೆಯಲ್ಲಿ ಭಾಗಿಯಾದವರೆಲ್ಲರೂ 14 ರಿಂದ 15ನೇ ವಯಸ್ಸಿನ ಮುಸ್ಲಿಂ ಯುವಕರು ಎಂಬ ಮಾಹಿತಿ ಲಭ್ಯವಾಗಿದೆ.

ಈ ಯುವಕರು ಅವರದ್ದೇ ಸಮುದಾಯದ ಧಾರ್ಮಿಕ ಮುಖಂಡರ ಮಾತನ್ನೂ ಕೇಳಲಿಲ್ಲ.ಇನ್ನೇನು ಗಲಭೆ ತೀವ್ರಗೊಳ್ಳುತ್ತಿದೆ ಎನ್ನುವ ವೇಳೆ ಸಮುದಾಯದ ಹಿರಿಯರು, ಮುಖಂಡರೂ ಸೇರಿ ಗಲಭೆ ಕಂಟ್ರೋಲ್ ಮಾಡಿದ್ದಾರೆ.
ಇದ್ದಕ್ಕಿದ್ದಂತೆ ಗಲಭೆ ಸೃಷ್ಟಿಯಾದ ವೇಳೆ ಪೊಲೀಸರಿಗಾದರೆ ಪ್ರೊಟೆಕ್ಷನ್ ಇತ್ತು.ಆದ್ರೆ ಪಾಪ ಅಲ್ಲಿದ್ದ ಸಾರ್ವಜನಿಕರಿಗೆ ಅದೂ ಕೂಡ ಇರಲಿಲ್ಲ.ಈಗ ಗಲಭೆ ಮಾಡಿದವರ ಪತ್ತೆ ಮಾಡುವ ಕೆಲಸವನ್ನ ಪೊಲೀಸರು ಮಾಡುತ್ತಿದ್ದಾರೆ ಎಂದು ಮೈಸೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.