ನ್ಯಾಯಾಂಗ, ಚುನಾವಣಾ ಆಯೋಗ, ಪೆಗಾಸಸ್ ಇವೆಲ್ಲವೂ ರಾಜ್ಯಗಳ ಒಕ್ಕೂಟದ ಧ್ವನಿಯನ್ನು ನಾಶಪಡಿಸುವ ಸಾಧನಗಳಾಗಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಬುಧವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗದುಕೊಂಡಿದ್ದಾರೆ.
ಅಧ್ಯಕ್ಷೀಯ ಭಾಷಣದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಸಂಸತ್ತಿನಲ್ಲಿ ಮಾತನಾಡಿದ ರಾಹುಲ್ ಗಾಂಧಿ, ‘ನ್ಯಾಯಾಂಗ, ಚುನಾವಣಾ ಆಯೋಗ, ಪೆಗಾಸಸ್, ಇವೆಲ್ಲವೂ ರಾಜ್ಯಗಳ ಒಕ್ಕೂಟದ ಧ್ವನಿಯನ್ನು ನಾಶಪಡಿಸುವ ಸಾಧನಗಳಾಗಿವೆ’ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಲೋಕಸಭೆಯಲ್ಲಿ 2022 ರ ಬಜೆಟ್ (Budget 2022) ಅಧಿವೇಶನದ ಸಂದರ್ಭದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡುತ್ತಾ ಹೇಳಿದ್ದಾರೆ.
ಮುಂದುವರೆದು ಮಾತಾಡಿದ ಅವರು, ಚೀನ ಏನು ಮಾಡಬೇಕೆಂಬುದರ ಬಗ್ಗೆ ಸ್ಪಷ್ಟ ದೃಷ್ಟಿ ಹೊಂದಿದ್ದಾರೆ. ಭಾರತದ ವಿದೇಶಾಂಗ ನೀತಿಯ ಏಕೈಕ ದೊಡ್ಡ ಕಾರ್ಯತಂತ್ರದ ಗುರಿ ಪಾಕಿಸ್ತಾನ ( Pakistan ) ಮತ್ತು ಚೀನಾವನ್ನು (China) ಪ್ರತ್ಯೇಕವಾಗಿ ಇಡುವುದು ಆದರೆ ನೀವು ಏನು ಮಾಡಿದ್ದೀರಿ, ಅವರನ್ನು ಒಟ್ಟಿಗೆ ಸೇರಿಸಿದ್ದೀರಿ ಎಂದು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
‘ಯಾವುದೇ ಭ್ರಮೆಗೆ ಒಳಗಾಗಬೇಡಿ, ನಿಮ್ಮ ಮುಂದೆ ನಿಂತಿರುವ ಶಕ್ತಿಯನ್ನು ಕಡಿಮೆ ಅಂದಾಜು ಮಾಡಬೇಡಿ. ನೀವು ಪಾಕಿಸ್ತಾನ ಮತ್ತು ಚೀನಾವನ್ನು ಒಟ್ಟಿಗೆ ತಂದಿದ್ದೀರಿ. ಇದು ಭಾರತದ ಜನರ ವಿರುದ್ಧ ನೀವು ಮಾಡಬಹುದಾದ ಏಕೈಕ ದೊಡ್ಡ ಅಪರಾಧ’ ಎಂದು ರಾಹುಲ್ ಗಾಂಧಿ ಭವಿಷ್ಯ ನಿಡಿದಿದ್ದಾರೆ.
‘ಗಣರಾಜ್ಯೋತ್ಸವದಂದು ನಿಮಗೆ ಅತಿಥಿಯನ್ನು ಏಕೆ ಕರೆತರಲು ಸಾಧ್ಯವಾಗುತ್ತಿಲ್ಲ ಎಂದು ನೀವೇ ಹೇಳಿ. ಇಂದು ಭಾರತವು ಸಂಪೂರ್ಣವಾಗಿ ಪ್ರತ್ಯೇಕವಾಗಿದೆ. ಅನೇಕ ಶತ್ರು ದೇಶಗಳಿಂದ ಸುತ್ತುವರೆದಿದ್ದೇವೆ. ಎಲ್ಲೆಡೆ ಸುತ್ತುವರೆದ ನಮ್ಮ ವಿರೋಧಿಗಳು ನಮ್ಮ ಸ್ಥಾನ ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಈಗ ಇಲ್ಲಿ ಎರಡು ವಿಭಿನ್ನ ಭಾರತಗಳಿವೆ –
‘ಈಗ ಎರಡು ವಿಭಿನ್ನ ಭಾರತಗಳಿವೆ. ಒಂದು ಶ್ರೀಮಂತರಿಗೆ ಮತ್ತು ಇನ್ನೊಂದು ಬಡವರಿಗೆ. ಇಬ್ಬರ ನಡುವಿನ ಅಂತರ ಹೆಚ್ಚುತ್ತಿದೆ’ ಎಂದರು.
‘ನೀವು ಮೇಡ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಬಗ್ಗೆ ಮಾತನಾಡುತ್ತಲೇ ಇದ್ದೀರಿ. ಮೇಡ್ ಇನ್ ಇಂಡಿಯಾ ಇನ್ನು ಮುಂದೆ ಸಾಧ್ಯವಿಲ್ಲ. ನೀವು ‘ಮೇಡ್ ಇನ್ ಇಂಡಿಯಾ’ ಅನ್ನು ನಾಶಪಡಿಸಿದ್ದೀರಿ. ನೀವು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಬೆಂಬಲಿಸಬೇಕು, ಇಲ್ಲದಿದ್ದರೆ ‘ಮೇಡ್ ಇನ್ ಇಂಡಿಯಾ’ ಸಾಧ್ಯವಿಲ್ಲ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮಾತ್ರ ಉದ್ಯೋಗ ಸೃಷ್ಟಿಮಾಡಬಲ್ಲವು’ ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಹೇಳಿದರು.
‘ನೀವು ಮೇಡ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಇತ್ಯಾದಿಗಳ ಬಗ್ಗೆ ಮಾತನಾಡುತ್ತಲೇ ಇದ್ದೀರಿ. ಮತ್ತು ಉದ್ಯೋಗರಹಿತತೆ ಹೆಚ್ಚುತ್ತಿದೆ’ ಎಂದರು.
ಕಳೆದ ಕೆಲ ದಿನಗಳ ಹಿಂದೆ ಬಿಹಾರದಲ್ಲಿ ಏನಾಯಿತು ಎಂಬುದರ ಬಗ್ಗೆ ರಾಷ್ಟ್ರಪತಿಗಳು ಮಾತನಾಡಿಲ್ಲ. ಅಧ್ಯಕ್ಷರ ಭಾಷಣದಲ್ಲಿ ನಿರುದ್ಯೋಗದ ಬಗ್ಗೆ ಒಂದೇ ಒಂದು ವಾಕ್ಯ ಸಹ ಇರಲಿಲ್ಲ. ದಿನದಿಂದ ದಿನಕ್ಕೆ ಉದ್ಯೋಗದ ಸಮಸ್ಯೆ ಹೆಚ್ಚಾಗುತ್ತಿದ್ದು, 2021ರಲ್ಲೇ ಮೂರು ಕೋಟಿ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಕಳೆದ 50 ವರ್ಷಗಳಲ್ಲೇ ಉಂಟಾಗಿರುವ ಹೆಚ್ಚಿನ ನಿರುದ್ಯೋಗ ಇದು ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.