ರಾಜ್ಯ ಬಿಜೆಪಿಯಲ್ಲಿ (BJP) ಭುಗಿಲೆದ್ದಿರುವ ಭಿನ್ನಮತಕ್ಕೆ ಬ್ರೇಕ್ ಹಾಕಲು ಬಿಜೆಪಿ ಹೈ ಕಮಾಂಡ್ (BJP Highcommand) ಕೊನೆಗೂ ಮನಸ್ಸು ಮಾಡಿದಂತೆ ಕಾಣುತ್ತಿದೆ. ಹೀಗಾಗಿ ಬಹಿರಂಗವಾಗಿಯೇ ಬಂಡಾಯವೆದ್ದು ಪಕ್ಷಕ್ಕೆ ಡ್ಯಾಮೇಜ್ ಮಾಡಿದ್ದ ನಾಯಕನಿಗೆ ಈಗ ಬಿಜೆಪಿ ಹೈಕಮಾಂಡ್ ಶಾಕ್ ಕೊಟ್ಟಿದೆ.

ಹೌದು, ಬಸನಗೌಡ ಪಾಟೀಲ್ ಯತ್ನಾಳ್ಗೆ (Basanagwda patil yatnal) ಬಿಜೆಪಿ ಹೈಕಮಾಂಡ್ ಶೋಕಾಸ್ ನೋಟಿಸ್ ಜಾರಿಯಾಗಿರುವ ಹಿನ್ನಲೆ, ಇಂದು ಯತ್ನಾಳ್ ಅಂಡ್ ಟೀಂನ ಮಹತ್ವದ ಸಭೆ ನಡೆಯಲಿದೆ. ಇಂದು ಮಧ್ಯಾಹ್ನ 12:30 ಕ್ಕೆ ಕುಮಾರ್ ಬಂಗಾರಪ್ಪ (Kumar bangarappa) ನಿವಾಸದಲ್ಲಿ ಸಭೆ ಸೇರಲಿರುವ ನಾಯಕರುಗಳು ತಮ್ಮ ಮುಂದಿನ ನಡೆಯ ಬಗ್ಗೆ ಚರ್ಚೆ ಮಾಡಲಿದ್ದಾರೆ.

ಈಗಾಗಲೇ ಕುಮಾರ್ ಬಂಗಾರಪ್ಪರ ನಿವಾಸ ಸದಾಶಿವನಗರದಲ್ಲಿ ಸಭೆ ಸೇರಲು ನಿರ್ಧಾರ ಮಾಡಿರುವ ನಾಯಕರು ತಮ್ಮ ನಡೆಯನ್ನು ಇಂದು ನಿರ್ಧರಿಸಬೇಕಿದೆ. ಬಸನಗೌಡ ಪಾಟೀಲ್ ಯತ್ನಾಳ್, ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಜಿ.ಎಂ.ಸಿದ್ದೇಶ್ವರ್, ಹೊಳಲ್ಕೆರೆ ಚಂದ್ರಪ್ಪ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.