ಸಾಮಾನ್ಯವಾಗಿ ಜನರು ತಮ್ಮ ಜನ್ಮ ದಿನಾಚರಣೆಯಂದು ಕೇಕ್ ಕತ್ತಿರಿಸಿ ಆಚರಿಸಿಕೊಳ್ಳುತ್ತಾರೆ ಕೆಲವರು ಬೇರೆಯವರಿಗೆ ಊಟ ಹಾಕುವ ಮೂಲಕ ಆರ್ಥಪೂರ್ಣ ಜನ್ಮ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಪ್ರಾಣಿಪ್ರಿಯರು ತಮ್ಮ ಸಾಕು ಪ್ರಾಣಿಗಳ ಜನ್ಮದಿನಾಚರನೆಯನ್ನು ಆಚರಿಸುವುದನ್ನು ನಾವು ನೋಡಿರುತ್ತೇವೆ.
ಆದರೆ, ತಮಿಳುನಾಡಿನ ತಿರುಚಿರಾಪಳ್ಳಿಯ ತಿರುವಾನೈಕಾವಲ್ನಲ್ಲಿರುವ ದೇವಸ್ಥಾನದ ಆನೆಯ ಹುಟ್ಟುಹಬ್ಬವನ್ನು ದೇವಸ್ಥಾನದ ಆಡಳಿತ ಮಂಡಳಿ ಹಾಗು ಗ್ರಾಮಸ್ಥರು ಸೇರಿ ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ.
![](https://pratidhvani.com/wp-content/uploads/2022/06/ತೆ.jpg)
ಅಖಿಲಾ ಎಂಬ 20 ವರ್ಷದ ಹೆಣ್ಣು ಆನೆಯ ಜನ್ಮದಿನಾಚರಣೆಯಂದು ಆನೆಗೆ ಹೊಸ ಚಾದರ, ಹೂವಿನ ಮಾಲೆ ಹಾಕಿ ಫಲಹಾರ ತಿನ್ನಿಸಿ ಹ್ಯಾಪಿ ಬರ್ತಡೇ ಅಖಿಲಾ ಎಂದು ಹೇಳುವ ಮೂಲಕ ಾಲ್ಲಿನ ಸ್ಥಳೀಯರು ಆನೆಗೆ ಶುಭಕೋರಿದ್ದಾರೆ.
ಹಣ್ಣುಗಳನ್ನು ಸವಿಯುತ್ತಾ ಆನೆ ಎಲ್ಲರಿಗೂ ಶುಭ ಕೋರಿದ ಎಲ್ಲರಿಗು ಸೊಂಡಿಲೆತ್ತಿ ಧನ್ಯವಾದ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲರು ಜನರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.