ರಾಷ್ಟ್ರ ರಾಜಕಾರಣದಲ್ಲಿ ಸದಾ ಸುದ್ದಿಯಲ್ಲಿರುವ ರಾಜ್ಯ ಎಂದರೆ ಅದು ಉತ್ತರ ಪ್ರದೇಶ. ಇತ್ತೀಚಿನ ದಿನಗಳಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಉತ್ತರ ಪ್ರದೇಶ ವಿರೋಧ ಪಕ್ಷದ ನಾಯಕ ಅಖಿಲೇಶ್ ಯಾದವ್ಗೆ ಹೊಸ ತಲೆನೋವೊಂದು ಎದುರಾಗಿದೆ.
ಅದೇನೆಂದರೆ, ಪಕ್ಷದ ಹಿರಿಯ ಹಾಗೂ ಮುಸ್ಲಿಂ ಮುಖಂಡರು ಪಕ್ಷದ ವಿರುದ್ದ ಬಂಡಾಯದ ಬಾವುಟವನ್ನು ಹಾರಿಸಿದ್ದಾರೆ. ಪಕ್ಷದಲ್ಲಿ ಹಿತಾಸಕ್ತಿ ಮೂಲೆಗುಂಪು ಮಾಡಿರುವುದನ್ನು ಖಂಡಿಸಿ ಅಲ್ಪಸಂಖ್ಯಾತ ಘಟಕದ ನಾಯಕರು ಪಕ್ಷದ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಸಂತೈಸಲು ತೆರಳಿದ ಅಖಿಲೇಶ್ಗೆ ಬಂಡಾಯದ ಬಿಸಿ ತಟ್ಟಿದೆ.
ಇತ್ತೀಚಿಗೆ ನಡೆದ ಉತ್ತರ ಪ್ರದೇಶ ಚುನಾವಣೆ ಸಂಬಂಧ ರಾಂಪುರ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಜಂ ಖಾನ್ಗೆ ತೀವ್ರ ಅವಮಾನ ಮಾಡಲಾಗಿದೆ ಎಂದು ಅಜಂ ಆಪ್ತರೊಬ್ಬರು ಆರೋಪಿಸಿದ್ದು, ಇದು ಮುಂದಿನ ದಿನಗಳಲ್ಲಿ ಪಕ್ಷದಿಂದ ದೂರ ಸರಿಯಲು ಕಾರಣವಾಗಬಹುದು ಎಂದು ಹೇಳಿದ್ದರು.
ಭೂ ಕಬಳಿಕೆ, ಅಕ್ರಮ ಆಸ್ತಿಗಳಿಕೆ, ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಹಾಗೂ ಬೆದರಿಕೆ ಪ್ರಕರಣಗಳಲ್ಲಿ ಜೈಲು ವಾಸ ಅನುಭವಿಸುತ್ತಿರುವ ಅಜಂ ಖಾನ್ ಕಳೆದ ಕೆಲ ವರ್ಷಗಳಿಂದ ಸೆರೆವಾಸ ಅನುಭವಿಸುತ್ತಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಅಜಂ ಖಾನ್ರನ್ನು ಬೇಟಿ ಮಾಡಲು ಅಖಿಲೇಶ್ ಒಂದೇ ಒಂದು ಭಾರೀ ಬೇಟಿ ನೀಡಿದ್ದಾರೆ. ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಲಿಲ್ಲ, ಪಕ್ಷ ಮುಂಚೂಣಿ ಘಟಕಗಳಿಗೆ ಮುಸ್ಲಿಂ ನಾಯಕರನ್ನು ನೇಮಕ ಮಾಡದೆ ಅವಮಾನಿಸಲಾಗುತ್ತಿದೆ ಎಂದು ಅಜಂ ಖಾನ್ ಆಪ್ತ ಫಸಾಹತ್ ಅಲಿ ಆರೋಪಿಸಿದ್ದಾರೆ.

ಇತ್ತೀಚಿಗೆ ಮುಗಿದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ಮುಸ್ಲಿಮರ ಸಹಾಯ ಹಾಗೂ ಬೆಂಬಲದಿಂದ ನೂರಕ್ಕೂ ಹೆಚ್ಚು ಸ್ಥಾನಗಳಲಿ ಗೆದ್ದು ಬೀಗುವಂತಾಯಿತ್ತುಅವರುಗಳ ಯಶಸ್ಸಿನ ಹಿಂದೆ ನಾವಿದ್ದೇವೆ. ಆದರೆ, ಇದೀಗ ಅಖೀಲೇಶ್ರವರು ನಮ್ಮ ಬಟ್ಟೆಗಳು ಗಬ್ಬು ನಾರುತ್ತಿವೆ ಎಂದು ಅವರ ಹತ್ತಿರ ಬಿಡುತ್ತಿಲ್ಲ ಎಂದು ಅಲಿ ಆರೋಪಿಸಿದ್ದಾರೆ.
ಎಸ್ಪಿಗೆ ರಾಜೀನಾಮೆ ನೀಡಿದ ನಂತರ ಅಜಂ ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಬಹುದು ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆಯನ್ನು ಪಕ್ಷದ ಅಧ್ಯಕ್ಷರ ಗಮನಕ್ಕೆ ತರಲಾಗುವುದು ಎಂದು ರಾಂಪುರ ಜಿಲ್ಲಾ ಅಧ್ಯಕ್ಷ ವೀರೇಂದ್ರ ಗೋಯೆಲ್ ತಿಳಿಸಿದ್ದಾರೆ.
ಅಖಿಲೇಶ್ಗೆ ಮುಸ್ಲಿಂ ಮುಖಂಡರ ಬಂಡಾಯದ ಬಿಸಿ ತಟ್ಟಿತ್ತಿರುವುದು ಇದೇ ಮೊದಲಲ್ಲ ಮುಸ್ಲಿಂ ನಾಯಕರನ್ನು ಅಖಿಲೇಶ್ ಕಡೆಗಣಿಸುತ್ತಿದ್ದಾರೆ ಎಂದು ಎಸ್ಪಿ ನಾಯಕ ಸಂಭಾಲ್ ಸಂಸದ ಶಫೀಕರ್ ರೆಹವಾನ್ ಬುರ್ಕ್ ಈ ಹೆಂದಿ ಕಿಡಿಕಾರಿದ್ದರು. ಇತ್ತ ಅಖಿಲೇಶ್ ಚಿಕ್ಕಪ್ಪ್ ಶಿವಪಾಲ್ ಸಿಂಗ್ ಯಾದವ್ ಕೂಡ ಪಕ್ಷದಲ್ಲಿ ಏಕ ಪಕ್ಷೀಯ ನಿರ್ಧಾರಗಳು ಹೆಚ್ಚಾಗಿ ಮುನ್ನೆಲೆಗೆ ಬರುತ್ತಿದ್ದು ತಾವು ಎಸ್ಪಿ ತೊರೆದು ಬಿಜೆಪಿ ಸೇರುವ ಸುಳಿವು ನೀಡಿದ್ದಾರೆ.