ಅಕಸ್ಮಾತ್ ನರೇಂದ್ರ ಮೋದಿಯವರು (Narendra modi) ಮತ್ತೊಮ್ಮೆ ಏನಾದ್ರೂ ಪ್ರಧಾನಿಯಾದರೆ ತಮ್ಮ ದೇವಸ್ಥಾನವನ್ನು ತಾವೇ ಕಟ್ಟಿಕೊಳ್ಳುತ್ತಾರೆ ಎಂದು ಮೋದಿ (Modi) ವಿರುದ್ಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ (Shivara) tangadagi) ಮತ್ತೆ ವ್ಯಂಗ್ಯವಾಡಿದ್ದಾರೆ.
![](https://pratidhvani.com/wp-content/uploads/2024/05/0dundc1o_pm-modi-ani_625x300_15_April_24-1024x630.webp)
ಈಗ ಶ್ರೀರಾಮ ಮಂದಿರವಾಯ್ತು (Ram mandir), ಮತ್ತೊಂದು ಮಂದಿರವಾಯ್ತು.. ಇದೀಗ ಮೋದಿ ಅವರ ದೇವಸ್ಥಾನ ನಿರ್ಮಾಣವಾಗುತ್ತೆ.. ನನ್ನದೇ ಒಂದು ದೇವಸ್ಥಾನ ನಿರ್ಮಾಣವಾಗುತ್ತೆ ಎನ್ನುವ ರೀತಿಯಲ್ಲಿ ಮೋದಿ ಅವರ ಹೇಳಿಕೆಗಳು ಇವೆ ಎಂದು ಜರಿದರು.
ಒಂದಡೆ ದೇವರೇ ನನ್ನು ಕಳುಹಿಸಿದ್ದಾನೆ ಅಂತಾರೆ, ಮತ್ತೊಂದು ಕಡೆ ಸಂಭಿತ್ ಪಾತ್ರ (sambit patra) ಪುರಿ ಜಗನ್ನಾಥರು ಮೋದಿ ಅವರ ಭಕ್ತ ಅಂತ ಹೇಳ್ತಾರೆ ಎಂದು ಸಚಿವ ಶಿವರಾಜ್ ತಂಗಡಗಿ ಮತ್ತೊಮ್ಮೆ ಮೋದಿಯನ್ನ ಟೀತಿಸಿದ್ದಾರೆ.