ಭಾರತೀಯ ಚಿತ್ರರಂಗದ (Indian film Industry) ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ (Bollywood actress aishwarya rai), ಕರುನಾಡ ಚಕ್ರವರ್ತಿ ಡಾ.ಶಿರಾಜ್ ಕುಮಾರ್‌ರನ್ನ (Dr shivaraj kumar)|ಭೇಟಿ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಮಗಳು ಆರಾಧ್ಯರನ್ನ ನಟ ಶೀವರಾಜ್ ಕುಮಾರ್‌ಗೆ ಗೆ ಪರಿಚಯಿಸಿದ್ದಾರೆ.

ಐಶ್ವರ್ಯಾ ರೈ ಬಚ್ಚನ್ ಪುತ್ರಿ ಆರಾಧ್ಯ ಶಿವಣ್ಣಾರನ್ನ ನೋಡ್ತಿದ್ದಂತೆ ಅವರ ಪಾದಗಳಿಗೆ ನಮಸ್ಕರಿಸಿ ಆಶಿರ್ವಾದ ಪಡೆದಿದ್ದಾರೆ. ಶಿವಣ್ಣ ಕೂಡ ಬಹಳ ಸಂತಸದಿಂದ ಹೃತ್ತೂರ್ವಕ ಆಶೀರ್ವಾದ ಮಾಡಿದ್ದಾರೆ.
ಈ ವೀಡಿಯೋವನ್ನ ಕಂಡು ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದು, ಇದು ನಮ್ಮ ನೆಲದ ಗೌರವ ಮತ್ತು ಸಂಪ್ರದಾಯದ ಸುಂದರ ಪ್ರದರ್ಶನ ನಾನಾರೀತಿಯಲ್ಲಿ ಮೆಚ್ಚುಗೆಯ ಸುರಿಮಳೆ ಸುರಿಸಿದ್ದಾರೆ.