
ನಟಿ ರನ್ಯಾ ರಾವ್ (Actress RANYA rao) ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ (Gold smuggling case)ಡಿಆರ್‌ಐ (DRI) ತನಿಖೆ ತೀವ್ರಗೊಳಿಸಿದ್ದು, ಈ ವೇಳೆ ಏರ್ ಪೋರ್ಟ್ ಸಿಬ್ಬಂದಿಯ (Airport staff) ಕಳ್ಳಾಟ ಕೂಡ ಬಯಲಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.ಈ ರೀತಿ ಪ್ರೋಟಾಕಾಲ್ ಉಲ್ಲಂಘಿಸಿದ ಪೊಲೀಸರಿಗೆ ಈಗ ಸಂಕಷ್ಟ ಎದುರಾಗಿದೆ.

ಹೌದು, ರನ್ಯಾ ರಾವ್ ಚಿನ್ನ ತರಲು ಸಹಾಯ ಮಾಡುತ್ತಿದ್ದ ಏರ್ ಫೋರ್ಟ್‌ನ ಸಿಬ್ಬಂದಿಯ ಕಳ್ಳಾಟ ಇದೀಗ ಬಯಲಾಗಿದೆ.ಇಲ್ಲಿ ನಿಯಮದ ಪ್ರಕಾರ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರಿಗೆ ಮಾತ್ರ ಶಿಷ್ಟಾಚಾರ ಪಾಲಿಸಬೇಕು. ಆದರೆ ರನ್ಯಾ ಆಗಮನದ ವೇಳೆ ಏರ್ಪೋರ್ಟ್ ಗೆ ಪೊಲೀಸರು ನಿಯೋಜನೆಗೊಂಡಿದ್ರು ಎನ್ನಲಾಗುತ್ತಿದೆ.

ಏರ್ಪೋರ್ಟ್ ನಲ್ಲಿ ಮಪ್ತಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಈ ರೀತಿಯ ಎಲ್ಲಾ ಅಕ್ರಮಗಳಿಗೂ ಸಾಥ್ ನೀಡುತ್ತಿದ್ದು, ಇದೇ ರೀತಿಯಾಗಿಯೇ ರಾಮಚಂದ್ರರಾವ್ ಮಗಳು ರನ್ಯಾಗೂ ಸಾಥ್ ನೀಡಿದ್ರು ಎನ್ನಲಾಗುತ್ತಿದೆ.
ಏರ್ಪೋರ್ಟ್ ನ ಟರ್ಮಿನಲ್ ವಾಕಿ ಟಾಕಿಗೆ ಸರ್ಕಾರದ ಪೋನ್ ನಂಬರ್ ಇದೆ. ಹೀಗಾಗಿ ಇಲ್ಲಿಗೆ ಯಾರ್ಯಾರ ಕರೆ ಬಂದಿದೆ. ಎಷ್ಟೆಷ್ಟು ಬಾರಿ ಕರೆ ಮಾಡಲಾಗಿದೆ ಎಂಬ ಕುರಿತು ಡಿಆರ್ ಐ ಅಧಿಕಾರಿಗಳು ಕಾಲ್ ಡಿಟೈಲ್ಸ್ ಕಲೆಕ್ಟ್ ಮಾಡಿ, ಸಿಡಿಆರ್ ಪಡೆದು ತನಿಖೆಗೆ ಮುಂದಾಗಿದ್ದಾರೆ.
