ಇತ್ತೀಚೆಗೆ ಬೆಂಗಳೂರಿನ ಆಟೋ ಡ್ರೈವರ್ (Bangalore auto driver) ಒಬ್ಬರ ದುರ್ವರ್ತನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social media) ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಮತ್ತೊಂದೆಡೆ ಏರ್ಪೋರ್ಟ್ ನಲ್ಲಿ ಹಿಂದಿ ಸೆಕ್ಯೂರಿಟಿ ಗಾರ್ಡ್ ಒಬ್ಬ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ಎರಡು ಪ್ರಕರಣಗಳು ತೀವ್ರ ಚರ್ಚೆಗೆ ಕಾರಣವಾಗಿದೆ.

ಇದೀಗ ಬೆಂಗಳೂರಿನ ಈ ಆಟೋ ಚಾಲಕನನ್ನು ಬಂಧಿಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಕನ್ನಡಿಗ ಆಟೋ ಚಾಲಕನ ಮೇಲಿನ ಈ ಕ್ರಮ, ಏರ್ಪೋಟ್ ನ ಹಿಂದಿ ಸೆಕ್ಯೂರಿಟಿ ಗಾರ್ಡ್ ಮೇಲೆ ಯಾಕೆ ಕೈಗೊಂಡಿಲ್ಲ ಎಂದು ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಸೇರಿದಂತೆ ಅನೇಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದಿ ಮಾತನಾಡುವ ಮಹಿಳಾ ಪ್ರಯಾಣಿಕರ ಮೇಲೆ ಈ ಆಟೋ ಡ್ರೈವರ್ ಸಣ್ಣ ವಿಚಾರಕ್ಕೆ ದೊಡ್ಡ ಕಿರಿಕ್ ತೆಗೆದು ಗೂಂಡಾ ವರ್ತನೆ ತೋರಿದ್ದ.ಈ ವಿಡಿಯೋ ದೇಶಾದ್ಯಂತ ಚರ್ಚೆಗೆ ಗ್ರಾಸವಾಗುತ್ತೆ. ಅದೇ ಕನ್ನಡಿಗ ಕ್ಯಾಬ್ ಚಾಲಕನ ಮೇಲೆ ಹಿಂದಿವಾಲ ಸೆಕ್ಯೂರಿಟಿ ಗಾರ್ಡ್ ಹಲ್ಲೆ ನಡೆಸಿದ್ರೆ, ಈ ಪ್ರಕರಣ ನಿರ್ಲಕ್ಷಿಸಲ್ಪಡುತ್ತದೆ. ಇದು ಸರಿಯಾದ ಕ್ರಮವಲ್ಲ ಎಂದು ಹಲವು ಕನ್ನಡಿಗರು ಪೊಲೀಸರ ಕ್ರಮವನ್ನು ಟೀಕಿಸಿದ್ದಾರೆ.
ಸದ್ಯ ಈ ಎರಡೂ ವೀಡಿಯೊಗಳು, ಇಂಟರ್ನೆಟ್ ನಲ್ಲಿ ಬೆಂಗಳೂರಿನ ಬಗ್ಗೆ ದೊಡ್ಡ ಚರ್ಚೆ ಹುಟ್ಟುಹಾಕಿದೆ.










