
ಮಾಜಿ ಸಂಸದ ಹಾಲಿ ಕಾಂಗ್ರೆಸ್ ನಾಯಕ ಎಲ್. ಆರ್. ಶಿವರಾಮೇ ಗೌಡ ಹಾಗೂ ಕುಣಿಗಲ್ ಶಾಸಕರ ಹೆಚ್.ಡಿ ರಂಗನಾಥ್ ಅವರು ಡಿ.ಕೆ.ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿದ್ದಾರೆ.

ಈ ಇಬ್ಬರು ನಾಯಕರು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್ ರವರು ಮುಖ್ಯಮಂತ್ರಿ ಯಾಗಬೇಕೆಂದು ಬಯಸಿದ್ದು, ಮಾಧ್ಯಮದ ಎದುರು ಹೇಳಿಕೆ ನೀಡಿದ್ದಾರೆ.
ಇದರ ಬೆನ್ನಲ್ಲೇ ಎಐಸಿಸಿ (AICC) ರಾಜ್ಯ ಉಸ್ತುವಾರಿಯಾಗಿರುವ ರಣದೀಪ್ ಸಿಂಗ್ ಸುರ್ಜೇವಾಲ ಅವರಿಂದ ರಾಜ್ಯಕ್ಕೆ ಆಗಮಿಸಿದ್ದು, ರಾಜ್ಯರಾಜಧಾನಿಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದು ಪಕ್ಷ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ. ಇನ್ನು ಈ ಇಬ್ಬರು ಕೈ ನಾಯಕರು ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಕೆಪಿಸಿಸಿ ಶಿಸ್ತುಪಾಲನ ಸಮಿತಿಯು ಎಲ್. ಆರ್ ಶಿವರಾಮೇಗೌಡರಿಗೆ ಮತ್ತು ಡಾ.ಹೆಚ್.ಡಿ ರಂಗನಾಥ್ ರಿಗೆ ನೋಟಿಸ್ ನೀಡಿದೆ.

ಇತ್ತ ಸುರ್ಜೇವಾಲ ಅವರ ಭೇಟಿ ಕೈ ಪಾಳಯದಲ್ಲಿ ಭಾರೀ ಸಂಚಲನವನ್ನು ಸೃಷ್ಠಿಸಿದ್ದು, ಕೈ ನಾಯಕರಿಲ್ಲಿ ಆತಂಕ ಮನೆ ಮಾಡಿದೆ.
ಕಳೆದ ಎರಡು ತಿಂಗಳ ಹಿಂದಷ್ಟೇ ಸುರ್ಜೇವಾಲ ರಾಜ್ಯಕ್ಕೆ ಅಗಮಿಸಿ, ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಕುರಿತು ಕೈ ಕಚೇರಿಯಲ್ಲಿ ಪಕ್ಷದ ಶಾಸಕರು, ಸಂಸದರು ಮತ್ತು ಪರಾಭವ ಅಭ್ಯರ್ಥಿಗಳ ಜೊತೆಗೂ ಚರ್ಚೆ ನಡೆಸಿ, ಸಿಎಂ ಸ್ಥಾನ ಬದಲಾವಣೆ ಬಗ್ಗೆ ಯಾವುದೇ ಹೇಳಿಕೆಗನ್ನು ನೀಡಬೇಡಿ, ಸಾರ್ವಜನಕವಾಗಿ ಈ ವಿಚಾರ ಸಂಬಂಧ ಚರ್ಚೆ ನಡೆಸದಂತೆ ಎಚ್ಚರಿಕೆಯನ್ನು ನೀಡಿದ್ದರು.

ಇನ್ನು ಸಿಎಂ ಸ್ಥಾನದ ಬದಲವಾಣೆ ಬಗ್ಗೆ ರಾಮನಗರದ ಶಾಸಕರಾದ ಇಕ್ಬಾಲ್ ಹುಸೇನ್ ಅವರಿಗೂ ಕೂಡ ನೋಟಿಸ್ ನೀಡಲಾಗಿತ್ತು. ಇನ್ನೂ ಕೆ.ರಾಜಣ್ಣ ಅವರು ಚುನಾವಣಾ ಅಕ್ರಮ ಕುರಿತು ನೀಡಿದ ಹೇಳಿಕೆಯಿಂದ ಪಕ್ಷವು ನಡೆಸುತ್ತಿರುವ ʼವೋಟ್ ಚೋರಿʼ ಅಭಿಯಾನಕ್ಕೆ ಮತ್ತು ಇದರ ನೇತೃತ್ವವಹಿಸಿದ್ದ ರಾಹುಲ್ ಗಾಂಧಿ ಅವರಿಗೆ ಮುಜುಗರಕ್ಕೆ ಎಡೆ ಮಾಡಿಕೊಟ್ಟಿತ್ತು. ಅವರ ಈ ಹೇಳಿಕೆ ರಾಜಕೀಯದ ಸಂಚಲನವನ್ನು ಸೃಷ್ಟಿಸಿತ್ತು ಪಕ್ಷಕ್ಕೆ damage ಮಾಡಿತ್ತು.

ಕಾಂಗ್ರೆಸ್ High Command ಸಿದ್ದರಾಮಯ್ಯ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಮತ್ತು ಆಪ್ತರಾದ ಕೆ.ಎನ್. ರಾಜಣ್ಣ ಅವರನ್ನು ಸಹಕಾರ ಸಂಘಗಳ ಸಚಿವಸ್ಥಾನದಿಂದ ಉಚ್ಛಾಟಿಸಿಲಾಯಿತು. ಅವರನ್ನು ಸಚಿವಸ್ಥಾನದಿಂದ ಕೆಳಗಿಳಿಸಿತು. ಈ ಎಲ್ಲಾ ಬೆಳವಣಿಗಗಳನ್ನು ನೋಡಿದರೆ ಕಾಂಗ್ರೆಸ್ ಪಕ್ಷವು ಅಶಿಸ್ತನ್ನು ಸಹಿಸುವುದಿಲ್ಲವೆಂದು ಈ ನೋಟಿಸ್ ನೀಡುವ ಮೂಲಕ ಸಾಬೀತು ಪಡೆಸುತ್ತಲ್ಲಿದೆ.
ಇಷ್ಟಾದರು ಸಹ ಕಾಂಗ್ರೆಸ್ ನಾಯಕರು ಮತ್ತು ಸಿಎಂ ಸ್ಥಾನದ ಬಗ್ಗೆ ಹೇಳಿಕೆಗಳನ್ನು ಮುಂದುವರೆಸುವುದರಿಂದ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.