• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಏಐ ಮೂಲಕ ಧ್ವನಿ ಬದಲಾಯಿಸಿ ನೆರೆಮನೆಯಾತನಿಗೆ 7 ಲಕ್ಷ ರೂ ವಂಚಿಸಿದ ಮಹಿಳೆ ಬಂಧನ..

ಪ್ರತಿಧ್ವನಿ by ಪ್ರತಿಧ್ವನಿ
July 2, 2024
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ವಿಶೇಷ, ಶೋಧ
0
Share on WhatsAppShare on FacebookShare on Telegram

ಕೃತಕ ಬುದ್ಧಿಮತ್ತೆ (AI) ಮೂಲಕ ಪುರುಷ ಧ್ವನಿಯನ್ನು ಬಳಸಿಕೊಂಡು ತನ್ನ ನೆರೆಹೊರೆಯವರಿಗೆ ಸುಮಾರು 7 ಲಕ್ಷ ರೂಪಾಯಿಗಳನ್ನು ವಂಚಿಸಿದ 37 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ರಶ್ಮಿ ಕರ್ ಎಂಬ ಆರೋಪಿಯು ನವಿ ಮುಂಬೈ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಆಕೆ ತನ್ನ ಪತಿಯೊಂದಿಗೆ ಸೇರಿಕೊಂಡು ಈ ವಂಚನೆ ಎಸಗಿದ್ದು ಪತಿ ಅವರು ಈಗ ಓಡಿಹೋಗಿದ್ದಾನೆ.

ADVERTISEMENT

ಆರೋಪಿಯು ತನ್ನ ಗುರುತನ್ನು ಮುಚ್ಚಿಟ್ಟು ತಾನು 34 ವರ್ಷದ ವಿಧವೆ ಆಗಿದ್ದು ತಾನು ಉತ್ತಮ ಉದ್ಯೋಗಾವಕಾಶಕ್ಕಾಗಿ ಎದುರು ನೋಡುತ್ತಿರುವುದಾಗಿ ಏಳು ತಿಂಗಳ ಹಿಂದೆ ನೆರೆಯನೆಯ ಅಭಿಮನ್ಯು ಮೆಹ್ರಾ ಅವರನ್ನು ಆನ್‌ಲೈನ್‌ ಮೂಲಕವೇ ಸಂಪರ್ಕಿಸಿ ಕೇಳಿಕೊಂಡಳು. ಇದಕ್ಕೆ ಸ್ಪಂದಿಸಿದ ಅಭಿಮನ್ಯು ಮೆಹ್ರಾ ಅವರು ಉತ್ತಮ ಉದ್ಯೋಗವನ್ನು ಹುಡುಕಲು ತಾವು ಸಹಾಯ ಮಾಡುವುದಾಗಿ ಹೇಳಿಕೊಂಡರು.
ಸಂತ್ರಸ್ತೆ ಮತ್ತು ಮೆಹ್ರಾ ಫೋನ್‌ನಲ್ಲಿ ಚಾಟ್ ಮಾಡಲು ಪ್ರಾರಂಭಿಸಿದರು. ಶೀಘ್ರದಲ್ಲೇ, ಅವರು ಅನ್‌ ಲೈನ್‌ ನಲ್ಲೇ ಪ್ರಣಯ ಸಂಬಂಧವನ್ನು ಬೆಳೆಸಿಕೊಂಡರು. ಮೆಹ್ರಾ ಅವರನ್ನು ವೈಯಕ್ತಿಕವಾಗಿ ಭೇಟಿಯಾಗದಿದ್ದರೂ, ಮಹಿಳೆ ತನಗೆ ಕ್ಷವಿದೆ ಎಂದು ಹಂತ ಹಂತವಾಗಿ 6.6 ಲಕ್ಷ ರೂಪಾಯಿ ಪಡೆದುಕೊಂಡಿದ್ದಳು.
ಮೆಹ್ರಾ ಅವರನ್ನು ವೈಯಕ್ತಿಕವಾಗಿ ಭೇಟಿಯಾಗುವಂತೆ ಮನವೊಲಿಸಲು ಪ್ರಯತ್ನಿಸಿದಾಗಲೆಲ್ಲಾ ಆಕೆ ವಿಷಯವನ್ನು ಬದಲಾಯಿಸುತ್ತಿದ್ದರು ಎಂದು ಸಂತ್ರಸ್ತ ಪೊಲೀಸರಿಗೆ ತಿಳಿಸಿದ್ದಾರೆ. ಮೆಹ್ರಾ, ಆಕೆಗೆ ರಗ್‌ ಒಂದನ್ನು ಉಡುಗೊರೆಯಾಗಿ ನೀಡಿದ್ದು, ಇದು ಅಮೂಲ್ಯ ಉಡುಗೊರೆ ಆಗಿದ್ದು ತಾನು ‘ನಿದ್ರಿಸುವಾಗ ಅವನಿಗೆ ಹತ್ತಿರವಾಗಲು ಇದನ್ನು ಸದಾ ಬಳಸುತ್ತೇನೆ ವಂಚಕಿ ಹೇಳುತಿದ್ದಳು ಎಂದು ಕಾಶಿಗಾಂವ್ ಪೊಲೀಸ್ ಹಿರಿಯ ಇನ್ಸ್‌ಪೆಕ್ಟರ್ ರಾಹುಲ್ ಪಾಟೀಲ್ ಹೇಳಿದ್ದಾರೆ.
ಆದರೆ ಏನು ಮಾಡಿದರೂ ಈಕೆ ಭೆಟಿಗೆ ಒಪ್ಪದಿದ್ದಾಗ ಅನುಮಾನಗೊಂಡು ಮೆಹ್ರಾ ಪೊಲೀಸರಿಗೆ ದೂರು ನೀಡಿದ್ದರು. ತನಿಖೆಯ ಸಮಯದಲ್ಲಿ, ಮೆಹ್ರಾ ಗೆ ಕರೆ ಮಾಡಲು ತಾನು ಅಪ್ಲಿಕೇಶನ್-ರಚಿತ ಧ್ವನಿಯನ್ನು ಬಳಸಿದ್ದೇನೆ ಎಂದು ಕರ್ ಒಪ್ಪಿಕೊಂಡಿದ್ದಾಳೆ. ಅವಳು ಧ್ವನಿ ಬದಲಾಯಿಸುವ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ್ದಾಳೆ ಮತ್ತು ಕರೆ ಮಾಡುವ ಉದ್ದೇಶಕ್ಕಾಗಿ ವಿಶೇಷವಾಗಿ ಪಡೆದ ಸಂಖ್ಯೆಯನ್ನು ಬಳಸಿಕೊಂಡು ಆತನೊಂದಿಗೆ ಸಂವಹನ ನಡೆಸುತ್ತಿದ್ದಳು ಎಂದು ಅವಳು ಬಹಿರಂಗಪಡಿಸಿದಳು. ಕರ್ ಪತಿ ದೀಪಾಂಜಲ್ ಬಿಸ್ವಾಸ್ ಗೆ ಪತ್ನಿ ಧ್ವನಿ ಸೋಗು ಹಾಕುವ ಬಗ್ಗೆ ತಿಳಿದಿತ್ತು ಮತ್ತು ಆಕೆಯ ಕೃತ್ಯಕ್ಕೆ ಬೆಂಬಲಾವಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಾನವ-ತರಹದ ಧ್ವನಿಗಳನ್ನು ಪುನರಾವರ್ತಿಸಲು AI ಅನ್ನು ಬಳಸಿಕೊಳ್ಳುವ ತಂತ್ರ ವಂಚಕರ ಹೊಸ ತಂತ್ರವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಸ್ಕ್ಯಾಮರ್‌ಗಳು ಕುಟುಂಬದ ಸದಸ್ಯ, ಸ್ನೇಹಿತ ಅಥವಾ ಗ್ರಾಹಕ ಸೇವಾ ಪ್ರತಿನಿಧಿಯಂತೆ ನಟಿಸಿ ವಂಚಿಸುತ್ತಾರೆ , ಇದನ್ನು ಬಳಸಿಕೊಂಡು ಸ್ವತಃ ನಿಮ್ಮ ಪತ್ನಿಯ ಅಥವಾ ಸಹೋದರನ ದ್ವನಿಯಂತೆಯೇ ಮಾತಾಡಬಹುದಾಗಿದೆ.

Tags: AI Technologycyber attackscyber crimePratidhvani
Previous Post

51 ವರ್ಷದ ಭಾರತೀಯ ಮೂಲದ ಅಮೆರಿನ್‌ ತಜ್ಞ ವೈದ್ಯೆ ನಕಲಿ ಬಿಲ್‌ ಸೃಷ್ಟಿಸಿ ತಪ್ಪೊಪ್ಪಿಗೆ..

Next Post

ಮತ್ತೊಮ್ಮೆ ಕಲ್ಪನಾ ಚಾವ್ಲಾರನ್ನ ನೆನೆದ ಭಾರತೀಯರು ! ಮರುಕಳಿಸದಿರಲಿ ಮತ್ತೊಂದು ದುರಂತ !

Related Posts

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?
ಅಂಕಣ

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

by ಪ್ರತಿಧ್ವನಿ
April 13, 2026
0

ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು.. ಡಾ. ಬಿ.ಆರ್. ಅಂಬೇಡ್ಕರ್ ಮತ್ತೊಮ್ಮೆ ವಾರ್ಷಿಕ ಆಚರಣೆಗಳ ಕೇಂದ್ರ ಬಿಂದುವಾಗಿ ಸಾರ್ವಜನಿಕರ ನಡುವೆ ಕಾಣಿಸಿಕೊಳ್ಳಲಿದ್ದಾರೆ. ತಾನು ದೇಶದ...

Read moreDetails
ಬೇಸಿಗೆಯಲ್ಲಿ ಸಂಚಾರ ಪೊಲೀಸರಿಗೆ ಸೌಲಭ್ಯ ಒದಗಿಸಲು ಡಿಜಿಪಿಗೆ ಮನವಿ

ಬೇಸಿಗೆಯಲ್ಲಿ ಸಂಚಾರ ಪೊಲೀಸರಿಗೆ ಸೌಲಭ್ಯ ಒದಗಿಸಲು ಡಿಜಿಪಿಗೆ ಮನವಿ

April 13, 2026
ನಿಯಮಬಾಹಿರ ವಾಹನ ತಪಾಸಣೆ ನಿಲ್ಲಿಸಲು ಡಿಜಿಪಿಗೆ ಮನವಿ

ನಿಯಮಬಾಹಿರ ವಾಹನ ತಪಾಸಣೆ ನಿಲ್ಲಿಸಲು ಡಿಜಿಪಿಗೆ ಮನವಿ

April 13, 2026
ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ

ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ

April 12, 2026
“ಪೈಪೋಟಿಗಿಂತ ಮೀರಿದ ಸಹೋದರಿಯರ ಬಂಧ: ಆಶಾ–ಲತಾ ಸಂಬಂಧದ ಅಪರೂಪದ ಕಥೆ”

“ಪೈಪೋಟಿಗಿಂತ ಮೀರಿದ ಸಹೋದರಿಯರ ಬಂಧ: ಆಶಾ–ಲತಾ ಸಂಬಂಧದ ಅಪರೂಪದ ಕಥೆ”

April 12, 2026
Next Post
ಮತ್ತೊಮ್ಮೆ ಕಲ್ಪನಾ ಚಾವ್ಲಾರನ್ನ ನೆನೆದ ಭಾರತೀಯರು ! ಮರುಕಳಿಸದಿರಲಿ ಮತ್ತೊಂದು ದುರಂತ !

ಮತ್ತೊಮ್ಮೆ ಕಲ್ಪನಾ ಚಾವ್ಲಾರನ್ನ ನೆನೆದ ಭಾರತೀಯರು ! ಮರುಕಳಿಸದಿರಲಿ ಮತ್ತೊಂದು ದುರಂತ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada