ವಿಜಯಪುರ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಲು ಅಹಿಂದ ಮುಖಂಡರು ಕೈ ಕಡಿಯುತ್ತೇವೆ ಅಂತ ವಿರೋಧ ಮಾಡಿರುವುದಕ್ಕೆ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದು, ನಾವು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೇಳಿಯೇ ಇಲ್ಲ ಎಂದಿದ್ದಾರೆ.
2ಎ ಪ್ರಸ್ತಾವನೆ ಮಾಡಿದ್ದು ಆಗ ಕಾಂಗ್ರೆಸ್‌ನ ಮಾಜಿ ಶಾಸಕ, ಈಗ ಹಾಲಿ ಶಾಸಕ ಎಂದಿರುವ ಯತ್ನಾಳ್, ನಾವು ಮೊದಲಿನಿಂದಲೂ 2ಎ ಬೇಡಾ ಅದರಲ್ಲಿ 104 ಜಾತಿಗಳಿವೆ.. ಅವರ ಹಕ್ಕನ್ನು ಕಸಿದುಕೊಳ್ಳಲು ನಾವು ತಯಾರಿಲ್ಲ ಎಂದಿದ್ದೇವೆ. ನರೇಂದ್ರ ಮೋದಿ, ಅಮಿತ್ ಷಾ, ನಡ್ಡಾ, ಶೋಭಾ ಕರಂದ್ಲಾಜೆ, ಬೊಮ್ಮಾಯಿ ಸೇರಿ ಒಂದು ಸೂತ್ರ ಕಂಡು ಹಿಡಿದಿದ್ದೀವಿ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಮೀಸಲಾತಿ ಸಂವಿಧಾನ ವಿರೋಧಿ ಅಂತಾರೆ.. ಆ ಪುಣ್ಯಾತ್ಮರು ಮುಸ್ಲಿಮರಿಗೆ ಶೇಕಡಾ 4 ಮೀಸಲಾತಿ ಕೊಟ್ಟರೋದೆ ಸಂವಿಧಾನ ವಿರೋಧಿ ಎಂದಿರುವ ಯತ್ನಾಳ್, ಓರ್ವ ರಾಜ್ಯದ ಸಿಎಂ, ವಕೀಲರಾದ ಅವರಿಗೆ ಸಂವಿಧಾನ ಗೊತ್ತಿಲ್ಲ.. ನೀವು ಮುಸ್ಲಿಮರಿಗೆ ಶೇಕಡಾ 4ರಷ್ಟು ಯಾಕೆ ಕೊಟ್ಟಿರಿ..? ಆಂಧ್ರ , ಪಶ್ಚಿಮ ಬಂಗಾಳ ಹೈಕೋರ್ಟ್‌ನಲ್ಲಿ ಮುಸ್ಲಿಮರಿಗೆ ಮೀಸಲಾತಿ ಅಸಂವಿಧಾನಿಕ ಎಂದಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲೂ ಜಸ್ಟಿಸ್ ಗವಾಯಿ ಪೀಠ ಸ್ಪಷ್ಟಪಡಿಸಿದೆ ಎಂದಿದ್ದಾರೆ.
ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ಕೊಡಲು ಬರಲ್ಲ, ನೀವು ಹೇಗೆ ಕೊಟ್ಟಿರಿ ಎಂದು ತರಾಟೆಗೆ ತೆಗೆದುಕೊಂಡಿರುವ ಯತ್ನಾಳ್, ಮುಸ್ಲಿಮರಿಗೆ ಕೊಟ್ಟ ಶೇಕಡಾ 4 ರಷ್ಟು ಮೀಸಲಾತಿ ರದ್ದು ಮಾಡಲೇಬೇಕು.. ದೇವೇಗೌಡರು ಒಕ್ಕಲಿಗರಿಗೆ ಶೇಕಡಾ 4ರಷ್ಟು ಮೀಸಲಾತಿ ಕೊಟ್ಟಿದ್ದಾರೆ.. ನಮ್ಮ ಲಿಂಗಾಯತರು 3ಬಿ ವರ್ಗದಲ್ಲಿ ಇದ್ದೆವು. ಲಿಂಗಾಯತರು ಕೆಲವೊಂದು 2ಎ ನಲ್ಲಿದ್ದರು. ಇನ್ನು ಕೆಲವರು 3ಬಿ ನಲ್ಲಿದ್ರು. ಸಾಮಾನ್ಯ ಹಾಗೂ ಎರಡು ಕಡೆ ಲಾಭ ತೆಗೆದುಕೊಳ್ತಿದ್ರು..
ಮೋದಿ, ಅಮಿತ್ ಷಾ ನಾವೆಲ್ಲರೂ ಕೂಡಿ ಏನು ಮಾಡಿದ್ವಿ ಅಂದ್ರೆ.. ಮುಸ್ಲಿಮರಿಗೆ ಕೊಟ್ಟ ಮೀಸಲಾತಿ ತೆಗೆದು ಹಾಕಿ. ಒಕ್ಕಲಿಗರ ಇಡೀ ಸಮುದಾಯಕ್ಕೆ ಶೇಕಡಾ 6 ಮೀಸಲಾತಿ ಮಾಡಿದರು.. ಲಿಂಗಾಯತರು, ವೀರಶೈವ ಲಿಂಗಾಯತರು, ಮರಾಠರು, ಜೈನರು, ಕುರುಬ, ವೈಷ್ಣವರು ಕ್ರಿಶ್ಚಿಯನ್ನರು ಸೇರಿ ಶೇಕಡಾ 7ರಷ್ಟು ಮೀಸಲಾತಿ ಕೊಟ್ಟಿದ್ದಾರೆ.. ಕೇವಲ ಪಂಚಮಸಾಲಿಯವರಿಗೆ ಕೊಟ್ಟಿಲ್ಲ.. ಶೇಕಡಾ 7ರಷ್ಟು ಮೀಸಲಾತಿಯಲ್ಲಿ 40 ಜಾತಿಗಳಿವೆ ಎಂದಿದ್ದಾರೆ. ಇದೇ ವೇಳೆ ಕೈ ಕಾಲು ಕಡಿಯುವ ಹೇಳಿಕೆಗೆ ಸಿದ್ದರಾಮಯ್ಯರು ಪ್ರಚೋದಿಸುವುದು ಸರಿಯಲ್ಲ ಎಂದಿದ್ದಾರೆ..