
ಬೆಂಗಳೂರು : ಕರ್ನಾಟಕದಲ್ಲಿ ರಾಜ್ಯ ಸರ್ಕಾರ ದಲಿತರಿಗೆ ಸರಿಯಾದ ಸ್ಥಾನಮಾನ, ಉದ್ಯೋಗ ಸರಿಯಾಗಿ ನೀಡುತ್ತಿಲ್ಲ ಎಂದು ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದ ವತಿಯಿಂದ ಆಗಸ್ಟ್ 28 ರಂದು ಕಾಂಗ್ರೆಸ್ ಹಠಾವೋ ದಲಿತ್ ಬಚಾವೋ’ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ನಟ ಚೇತನ್ ಹಾಗೂ ಪ್ರೊ ಹರಿರಾಮ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ಕಾಂಗ್ರೆಸ್ ಸರಕಾರ ದಲಿತ ಪರವಾಗಿಲ್ಲ. ದಲಿತರಿಗೆ ಇರುವ ಉದ್ಯೋಗ ಸ್ವಾವಲಂಬನೆ ರದ್ದು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಆಗಸ್ಟ್ 28ರಂದು ಬೆಳಗ್ಗೆ 11ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದರು. ಮೀಸಲಾತಿ ಬಗ್ಗೆ ಹೆಚ್ ಸಿ ಮಹದೇವಪ್ಪ ಅವರಿಗೆ ಕೇಳಿದರೆ ನನಗೆ ಗೊತ್ತೇ ಇಲ್ಲ ಅಂತಾರೆ.
ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ತರಬೇಕು ಎಂದು ಹೋರಾಡುತ್ತಾರೆ. ಆದರೆ, ಇವರು ಅಧಿಕಾರಕ್ಕೆ ಬಂದಾಗ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಏಕೆ ತಂದಿಲ್ಲ. ಒಳ ಮೀಸಲಾತಿಯನ್ನು ಯಾಕೆ ಜಾರಿಗೆ ತಂದಿಲ್ಲ? ಎಂದು ಪ್ರಶ್ನಿಸಿದರು.ಸಿದ್ದರಾಮಯ್ಯ ಕಾಂಗ್ರೆಸ್ ಸರಕಾರ 5 ಯೋಜನೆಗಳಿಗೆ ದಲಿತರ ಹಣ ದುರ್ಬಳಕೆ ಮಾಡಿದ್ದಾರೆ.
ಖಾಸಗಿ ವಲಯ ಮೀಸಲಾತಿ ಕೂಡ ಜಾತ್ಯಾತೀತ ಇದೆ ಅಂತ ನಾವು ಹೋರಾಟ ಮಾಡುವಾಗ ಸಿದ್ದರಾಮಯ್ಯರವರು ಲಾಟಿ ಚಾರ್ಜ್ ಮಾಡಿಸಿದ್ದರು.ನಂತರ ಅವರು ಅಧಿಕಾರದಿಂದ ಇಳಿದ ಮೇಲೆ ಖಾಸಗಿ ಮೀಸಲಾತಿ ಬೇಕು ಅಂತಾರೆ. ಇದು ಹೇಡಿ ಸರ್ಕಾರ ಶ್ರೀಮಂತರ ಪರವಾಗಿ ಇರುವ ಸರಕಾರ. ದೊಡ್ಡದ್ದಾಗಿ ಅಂಬೇಡ್ಕರ್ ಫಲಪುಷ್ಪ ಪ್ರದರ್ಶನ ಮಾಡುತ್ತೀರಾ. ಒಳಮೀಸಲಾತಿ ಉದ್ದೇಶ ಪೂರ್ವಕ ತಂದಿಲ್ಲ ಎಂದು ಕಿಡಿ ಕಾರಿದ್ದಾರೆ.