ಗದಗದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ದಾರುಣವಾಗಿ ಸಾವನಪ್ಪಿರುವ ಘಟನೆ ನಡೆದಿದೆ. ಮುಂಡರಗಿ ತಾಲೂಕಿನ ಹೈತಾಪುರ ಗ್ರಾಮದಲ್ಲಿ ಅವಘಡ ಸಂಭವಿಸಿದ್ದು, 5 ವರ್ಷದ ಬಾಲಕ ಮನೋಜ್ ಹಾಗು 34 ವರ್ಷದ ಗೀತಾ ಹೆಸರೂರು ಸಾವನ್ನಪ್ಪಿದ್ದಾರೆ.

ಗೀತಾ ಹೆಸರೂರು ಮತ್ತು ಮನೋಜ ಕವಲೂರು ಮೃತ ದುರ್ದೈವಿಗಳಾಗಿದ್ದು. ಕೃಷಿ ಹೊಂಡದಿಂದ ನೀರು ತರಲು ಹೋದಾಗ ಕಾಲು ಜಾರಿ ಮನೋಜ್ ಮೊದಲು ಕೃಷಿ ಹೊಂಡಕ್ಕೆ ಬಿದ್ದಿದ್ದಾನೆ. ಬಾಲಕ ಮನೋಜ್ ರಕ್ಷಣೆಗೆ ಹೋದಾಗ ಗೀತಾ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಶಾಲೆಗೆ ರಜೆ ಇದೆ ಎನ್ನುವ ಕಾರಣಕ್ಕೆ ದೊಡ್ಡಮ್ಮನ ಮನೆಗೆ ಬಂದಿದ್ದ 5 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ತಂಗಿಯ ಮಗನೊಂದಿಗೆ ಕೃಷಿ ಹೊಂಡದಲ್ಲಿ ಜಲಸಮಾಧಿ ಆಗಿದ್ದಾರೆ ಮಹಿಳೆ. ಆದರೆ ನೀರಿನ ಅಭಾವದಿಂದ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.