ಕೇಂದ್ರದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಸಚಿವ ಸ್ಥಾನ ಹಿನ್ನೆಲೆ, ರಾಜ್ಯ ರಾಜಕಾರಣದಲ್ಲಿ ದಳಪತಿಗಳಿಗೆ ಪುನರ್ಜನ್ಮ ಸಿಕ್ಕಂತಾಗಿದೆ. ಕಳೆದ ಐದು ವರ್ಷಗಳಿಂದ ಅಧಿಕಾರ ಇಲ್ಲದೆ ದಳಪತಿಗಳು ಕುಗ್ಗಿ ಹೋಗಿದ್ದರು. ಜೊತೆಗೆ ಜೆಡಿಎಸ್ (JDS) ಕಾರ್ಯಕರ್ತರು, ಮುಖಂಡರು, ಶಾಸಕರನ್ನ ಸೆಳೆಯಲು ಕಾಂಗ್ರೆಸ್ (congress) ಕಸರತ್ತು ನಡೆಸ್ತಿತ್ತು.
ಹೀಗಾಗಿ ಪಕ್ಷ ಉಳಿಸಿಕೊಳ್ಳಲು ಬಿಜೆಪಿ (BIP) ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ಇದೀಗ ಕೇಂದ್ರ ಸಂಪುಟದಲ್ಲಿ ಕುಮಾರಸ್ವಾಮಿ ಸೇರ್ಪಡೆಯಾಗಿದ್ದು, ತಮ್ಮ ಪಕ್ಷದ ನಾಯಕರಿಗೆ ನಾನು ಇದ್ದೇನೆ ಎಂಬ ಸಂದೇಶ ರವಾನಿಸೋ ಮೂಲಕ ಜೆಡಿಎಸ್‌ಗೆ ಪುನರ್ಜನ್ಮ ಸಿಕ್ಕಂತಾಗಿದೆ.
ಒಂದು ವೇಳೆ ಕುಮಾರಸ್ವಾಮಿ ಕೇಂದ್ರ ಕೃಷಿ ಸಚಿವರಾದ್ರೆ, ರಾಜ್ಯದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿಗೆ (Cheluvaraya swamy) ಇಕ್ಕಟ್ಟಿನ ಸ್ಥಿತಿ ಎದುರಾಗುತ್ತೆ. ಇಲಾಖೆ ಕೆಲಸ ಕಾರ್ಯಗಳು, ಅನುದಾನದ ವಿಚಾರವಾಗಿ ಹೆಚ್ಚಿಕೆಯ ಸಹಕಾರ ಕೋರಬೇಕಾದ ಅನಿವಾರ್ಯತೆ ಎದುರಾಗಲಿದೆ. ಹೀಗಾಗಿ ಸಿಎಂ ಬಳಿ ಖಾತೆ ಬದಲಾವಣೆಗೆ ಚಲುವರಾಯಸ್ವಾಮಿ ಪ್ರಯತ್ನಿಸಬಹುದು ಎಂದು ಚರ್ಚೆಯಾಗ್ತಿದೆ.