ಆಂದ್ರಪ್ರದೇಶ ಮೂಲದ ಅಗ್ರಿಗೋಲ್ಡ್ ಖಾಸಗಿ ಕಂಪನಿಯು ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸುವುದಾಗಿ ಹೇಳಿತ್ತು. ಜನರಿಂದ ಹಣ ಪಡೆದು ಏಕಾಏಕಿ ಮುಚ್ಚಿಹೋಗಿದೆ. ಈಗ ದುಡ್ಡು ಕಟ್ಟಿದವರು ಏಜೆಂಟರ ಮನೆಗೆ ಅಲೆದಾಡುತ್ತಿದ್ದಾರೆ. ಏಜೆಂಟರ್ ಗಳು ಸಮಸ್ಯೆಗೆ ಸಿಲುಕಿದ್ದು, ಜೀವನ ನಡೆಸುವುದೇ ದುಸ್ತರವಾಗಿದೆ. ಎಂಟು ರಾಜ್ಯದಲ್ಲಿ 32 ಲಕ್ಷ ಖಾತೆಯ 6,385 ಕೋಟಿ ಹಣವನ್ನು ಪಾವತಿಸದೇ ದೀಡಿರನೇ ಬಂದ್ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಸಿಐಡಿ ತನಿಖೆ ಕೂಡ ಮಾಡಿದೆ. ಇದರಲ್ಲಿ ಕೆಲವು ಚರಾಸ್ಥಿಗಳನ್ನು ಜಪ್ತಿ ಮಾಡಲಾಗಿದೆ. ಈಗ ಸರ್ಕಾರ ರಾಜ್ಯದಲ್ಲಿರುವ ಆಸ್ತಿಯನ್ನು ಮಾರಾಟ ಮಾಡಿ ಗ್ರಾಹಕರಿಗೆ ಹಣವನ್ನು ಮರಳಿಸಬೇಕು ಎಂದು ಮನವಿ ಮಾಡಿದ್ದಾರೆ.
ದುಡಿದ ಹಣ ಭವಿಷ್ಯದಲ್ಲಿ ಏನಾದರೂ ಉಪಯೋಗ ಆಗುತ್ತದೇ ಎಂದು ಕಂಪನಿಗೆ ಕಟ್ಟಿದರೆ ಹಣವನ್ನು ಪಾವತಿಸಿದೇ ಕಂಪನಿ ಬಾಗಿಲು ಹಾಕಿದ್ದು ಗ್ರಾಹಕರಿಗೆ ಆಘಾತ ತಂದಿದೆ. ಮನೆಯಲ್ಲಿ ಮಕ್ಕಳ ಮದುವೆ ಇದ್ದರೂ ನಯಾಪೈಸೆ ಹಣ ಕೈ ಸೇರಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೂಕ್ತ ಕ್ರಮಗಳನ್ನು ಜರುಗಿಸಿ ನಮ್ಮ ಹಣವನ್ನು ನಮಗೆ ಮರಳಿಸಿ ನಮ್ಮ ಜೀವ ಕಾಪಾಡಬೇಕು ಎಂದು ಗ್ರಾಹಕರು ಕಣ್ಣೀರು ಹಾಕುತ್ತಿದ್ದಾರೆ.