ಕೆಲ ಜಿಲ್ಲೆಗಳಲ್ಲೊ ಪಾಸಿಟಿವಿಟಿ ರೇಟ್ ಮತ್ತು ಸಾವಿರ ಸಂಖ್ಯೆ ಕಡಿಮೆಯಾಗಿರುವುದನ್ನು ಕಮನಿಸಿದ ರಾಜ್ಯ ಸರ್ಕಾರ ಬೆಂಗಳೂರು ಗ್ರಾಮಾಂತರ, ಉಡುಪಿ ಸೇರಿದಂತೆ ಆರು ಜಿಲ್ಲೆಗಳನ್ನು ಅನ್ ಲಾಕ್ ಮಾಡಲು ಆದೇಶಿಸಿದೆ.
ಇವತ್ತಿನಿಂದ ಅಂದರೆ ಸೋಮವಾರದಿಂದ ಅನ್ ಲಾಕ್ ಒಳಪಡುವ 16 ಜಿಲ್ಲೆಗಳ ಜೊತೆ ಬೆಂಗಳೂರು ಗ್ರಾಮಾಂತರ, ಉಡುಪಿ, ಶಿವಮೊಗ್ಗ, ಬಳ್ಳಾರಿ ವಿಜಯಪುರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ 19/06/2021ರಲ್ಲಿ ಆದೇಶಿಸಿರುವ ಆನ್ ಲಾಕ್ ಅನ್ವಯವಾಗುವಂತೆ ಸಡಿಲಿಕೆ ಮಾಡಲಾಗಿದೆ ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ.
16 ಜಿಲ್ಲೆಗಳಿಗೆ ಅನ್ವಯವಾಗುವ ನಿಯಮಗಳು ಈಗ ಹೊಸದಾಗಿ ಅನ್ ಲಾಕ್ ಆಗಿರುವ ಆರು ಜಿಲ್ಲೆಗಳಿಗೂ ಅನ್ವಯವಾಗಲಿದ್ದು, ಸಂಜೆ 5 ಗಂಟೆಯವರೆಗೂ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಿದೆ.
16+6 ಒಟ್ಟು 22 ಜಿಲ್ಲೆಗಳು ಅನ್ ಲಾಕ್ ಆಗಿದ್ದು ಇಲ್ಲಿ 50% ಸಾಮರ್ಥ್ಯದಲ್ಲಿ ಎಸಿ ರಹಿತ ಹೋಟೆಲ್, ಬಸ್, ಎಸಿ ರಹಿತ ರೆಸ್ಟೋರೆಂಟ್, ಜಿಮ್, ಹೊರಾಂಗಣ ಚಿತ್ರಿಕರಣ, ಕ್ಲಬ್ಗಳು, ಮೊಟ್ರೊ ರೈಲು ಅವಕಾಶ ಕಲ್ಪಿಸಿದ್ದು, ಹೊರಾಂಗಣ ಕ್ರೀಡೆಗಳಿಗೆ ವೀಕ್ಷಿಸಲು ಅವಕಾಶ ಇರುವುದಿಲ್ಲ ಎಂದು ಆದೇಶಿಸಿದೆ.
ಆದೇಶದ ಸುತ್ತೋಲೆ ಈ ಕೆಳಕಂಡಂತಿದೆ.