ದೇಶದಾದ್ಯಂತ ಲೋಕ ಸಮರದ ಕಾವು ಹೆಚ್ಚುತೀರವಾಗ್ಲೇ ರಾಜಕೀಯ ಪಕ್ಷಗಳ ಚಟುವಟಿಕೆಗಳೂ ಗರಿಗೆದರಿವೆ . ಒಂದ್ಕಡೆ INDIA ಮೈತ್ರಿ ಕೂಟ ರಚನೆಯಾಗಿದ್ದು , NDA ಮೈತ್ರಿಗೆ ಸೆಡ್ಡು ಹೊಡೆಯಲು ಶತಾಯ-ಗತಾಯ ಪ್ರಯತ್ನಕ್ಕೆ ಮುಂದಾಗಿದೆ. ಇದರ ಮುಂದುವರೆದ ಭಾಗವಾಗಿ ಇದೀಗ ಕಾಂಗ್ರೆಸ್ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡಿದೆ.

ತಮಿಳುನಾಡಿನಲ್ಲಿ ಈಗಾಗಲೆ ಬಿಜೆಪಿ ಮುನ್ನಡೆಸುವ ಜವಾಬ್ದಾರಿ ಹೊತ್ತಿರುವ ಅಣ್ಣಾ ಮಲೈ ಈ ಬಾರಿ ಸಂಚಲನ ಸೃಷ್ಟಿಸಿರೋದು ಸುಳ್ಳಲ್ಲ. ಇದರ ಮಧ್ಯೆ ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿ ರೋಚಕತೆಯನ್ನು ಹೆಚ್ಚುಮಾಡಿದೆ. ಆದ್ರೆ ಈ ಮೈತ್ರಿ ಇದೇ ಮೊದಲೇನಲ್ಲ. 2019ರಲ್ಲೂ ಈ ಮೈತ್ರಿ ತಮಿಳುನಾಡಲ್ಲಿ ಮೇನಿಯಾ ಸೃಷ್ಟಿ ಮಾಡಿತ್ತು.

ಹೌದು 2019 ರ ಲೋಕ ಸಭಾ ಚುನಾವಣೆಯಲ್ಲಿ ಇದೇ ಮೈತ್ರಿ ಅಧ್ಬುತ ಫಲಿತಾಂಶವನ್ನು ಕಂಡಿತ್ತು. ಆಗ ಪುದುಚೇರಿಯ ೧ ಕ್ಷೇತ್ರ ಸೇರಿ ಒಟ್ಟು 10 ಸ್ಥಾನಗಳನ್ನು ಡಿಎಂಕೆ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟಿತ್ತು. ಆ ಪೈಕಿ ಕಾಂಗ್ರೆಸ್ 9 ಸ್ಥಾನಗಳಲ್ಲಿ ಗೆದ್ದು ಬೀಗಿತ್ತು. ಅಷ್ಟೇ ಅಲ್ಲ ಡಿಎಂಕೆ ಕೂಡ ಭರ್ಜರಿ ದಿಗ್ವಿಜಯ ಸಾಧಿಸಿತ್ತು. ಒಟ್ಟು 39 ಕ್ಷೇತ್ರಗಳ ಪೈಕಿ 38 ಕ್ಷೇತ್ರಗಳಲ್ಲಿ ಈ ಒಕ್ಕೂಟ ಅದ್ಧೂರಿ ಜಯಭೇರಿ ಬಾರಿಸಿತ್ತು. ಆದ್ರೆ ಕಮಲ ಶೂನ್ಯ ಸಂಪಾದಿಸಿತ್ತು.

ಇದೆಲ್ಲ ಲೆಕ್ಕಾಚಾರದ ಹಿನ್ನಲೆ ಈ ಬಾರಿಯೂ ಕೂಡ 2019 ರ ಸೂತ್ರಕ್ಕೆ ಸಿಎಂ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಮಣೆ ಹಾಕಿದ್ದು ಇತಿಹಾಸ ಮರುಕಳಿಸಲಿದ್ಯಾ ಎಂಬ ಕೊತೂಹಲ ಗರಿಗೆದರಿದೆ. ಈ ಸವಾಲನ್ನ ಈ ಬಾರಿ ಅಣ್ಣಾ ಮಲೈ ಹೇಗೆ ಎದುರಿಸಲಿದ್ದಾರೆ, ಈ ಬಾರಿಯಾದ್ರೂ ದ್ರಾವಿಡ ನೆಲದಲ್ಲಿ ಕಮಲ ಖಾತೆ ತೆರೆಯಲಿದ್ಯಾ ಎಂದು ಕಾದು ನೋಡಬೇಕಿದೆ.