ಉತ್ತರ ಪ್ರದೇಶದ(Uttar Pradesh) ಅಯೋಧ್ಯೆಯಲ್ಲಿ(Ayodhya) ಬಾಬರಿ ಮಸೀದಿ(Babri Masjid) ಇದ್ದ ಸ್ಥಳದಲ್ಲಿ ಶ್ರೀರಾಮ ಮಂದಿರ(Rama Mandira) ಇತ್ತು ಅನ್ನೋ ಬಗ್ಗೆ ದೂರು ದಾಖಲಾಗಿತ್ತು. ಆ ಬಳಿಕ ದಶಕಗಳ ಕಾಲ ನ್ಯಾಯಾಲಯದಲ್ಲಿ ಪರ ವಿರೋಧ ವಾದ ಪ್ರತಿವಾದ ನಡೆದ ಬಳಿಕ ಸುಪ್ರೀಂಕೋರ್ಟ್(Suprem Court) ಸಾಕಷ್ಟು ಸಾಕ್ಷ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ಹೌದು, ಶ್ರೀರಾಮ ನಿರ್ಮಾಣ ಆಗುವುದು ಸೂಕ್ತ ಎಂದು ತೀರ್ಪು ಕೊಟ್ಟಿತ್ತು. 2019ರಲ್ಲಿ ಅಂತಿಮ ಆದೇಶ ಹೊರ ಬಿದ್ದ ಬಳಿಕ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಶುರುವಾಗಿತ್ತು. ಇದೀಗ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಲೋಕಾರ್ಪಣೆಯೂ ಆಗಿದೆ. ಇದೀಗ ಮತ್ತೊಂದು ಮಸೀದಿಯಲ್ಲೂ ದೇವಸ್ಥಾನಗಳ ಕುರುಹುಗಳು ಇವೆ ಅನ್ನೋ ವರದಿ ಕೋರ್ಟ್‌ಗೆ ಸಲ್ಲಿಕೆಯಾಗಿದೆ.
ಕಾಶಿಯಲ್ಲೂ ಹಿಂದೂ ದೇವಸ್ಥಾನವೇ ಮಸೀದಿ..!?
ವಾರಣಾಸಿಯಲ್ಲಿ ಇರುವ ಜ್ಞಾನವಾಪಿ ಮಸೀದಿ, ಈ ಹಿಂದೆ ಮಂದಿರ ಆಗಿತ್ತು ಅನ್ನೋ ವಿವಾದ ಕೋರ್ಟ್ ಮೆಟ್ಟಿಲೇರಿದೆ. ಅದರಂತೆ ಕೋರ್ಟ್ ಭಾರತೀಯ ಪುರಾತತ್ವ ಇಲಾಖೆ ಸರ್ವೇ ಮಾಡಿ ವರದಿ ಸಲ್ಲಿಸಲು ಸೂಚನೆ ಕೊಟ್ಟಿತ್ತು. ಆ ಬಳಿಕ ಮುಚ್ಚಿದ ಲಕೋಟೆಯಲ್ಲಿದ್ದ ವರದಿಯನ್ನು ಎರಡೂ ಕಡೆಯ ವಕೀಲರಿಗೆ ನೀಡುವ ನಿರ್ಧಾರವನ್ನು ಕೋರ್ಟ್ ತೆಗೆದುಕೊಂಡಿತ್ತು. ಇದೀಗ ಪುರಾತತ್ವ ಇಲಾಖೆ ವರದಿಯ ಅಂಶಗಳು ಹೊರಬಿದ್ದಿದ್ದು, ಮಸೀದಿ ಕಟ್ಟಲು ಮಂದಿರಕ್ಕೆ ಹಾನಿ ಮಾಡಿರುವುದು ಖಚಿತವಾಗಿದೆ. ಭಾರತೀಯ ಪುರಾತತ್ವ ಇಲಾಖೆ ಸರ್ವೇ ಪ್ರಕಾರ ವರದಿಯಲ್ಲಿ ಏನೆಲ್ಲಾ ಇದೆ ಅನ್ನೋ ಮಾಹಿತಿಯನ್ನು ಹಿಂದೂ ಸಂಘಟನೆಗಳ ಪರ ವಕೀಲ ವಿಷ್ಣು ಶಂಕರ್ ಜೈನ್ ಮಾಧ್ಯಮಗಳ ಎದುರು ಬಿಚ್ಚಿಟ್ಟಿದ್ದಾರೆ. ಮಸೀದಿಗೂ ಮುನ್ನ ಮಂದಿರ ಇದ್ದಿದ್ದು ಭಾರತೀಯ ಪುರಾತತ್ವ ಇಲಾಖೆ ಸರ್ವೇಯಲ್ಲಿ ಉಲ್ಲೇಖ ಆಗಿದೆ. ಈಗಿರುವ ಮಸೀದಿಯಲ್ಲಿ 34 ಹಳೆ ಶಾಸನಗಳಿರುವುದು ಪತ್ತೆ ಆಗಿದೆ.
ಜ್ಞಾನವಾಪಿ ಮಸೀದಿ ಸರ್ವೇ ಅಂಶಗಳು ಏನೇನು..?
ಮಸೀದಿಗೆ ಹಾನಿ ಆಗದಂತೆ ಭಾರತೀಯ ಪುರಾತತ್ವ ಇಲಾಖೆ ಸರ್ವೇ ಕೆಲಸ ನಡೆಸಿದ್ದು, ಮಸೀದಿ ನಿರ್ಮಾಣಕ್ಕೂ ಮುನ್ನ ಅಲ್ಲೊಂದು ದೊಡ್ಡ ದೇವಸ್ಥಾನ ಇತ್ತು. ಮಸೀದಿ ಕಟ್ಟಲು ಮಂದಿರದ ಕೆಲವು ಭಾಗ ನಾಶಪಡಿಸಲಾಗಿದೆ. ಮಸೀದಿ ಕಟ್ಟಡದಲ್ಲಿ ಹಿಂದೂ ರಚನೆಯ ಕಂಬಗಳ ಕುರುಹುಗಳಿವೆ. ಸ್ತಂಭಗಳನ್ನು ಭಾರತೀಯ ಪುರಾತತ್ವ ಇಲಾಖೆ ಸರ್ವೇಯಲ್ಲಿ ವ್ಯವಸ್ಥಿತವಾಗಿ ಅಧ್ಯಯನ ಮಾಡಲಾಗಿದೆ. ಮಂದಿರ ಇದ್ದಿದ್ದು ನಿಜ, ಮಸೀದಿ ಕಟ್ಟಲು ಹಿಂದೂ ದೇವಸ್ಥಾನದ ಕಂಬಗಳನ್ನೇ ಮರು ಬಳಸಲಾಗಿದೆ. ದೇಗುಲದ ಪೂರ್ವದ ಕೋಣೆ ಈಗ ಮಸೀದಿಯ ಸಭಾಂಗಣ ಆಗಿದೆ. ಮಸೀದಿಯ ಉತ್ತರ, ದಕ್ಷಿಣ ಮತ್ತು ಪಶ್ಚಿಮದಲ್ಲೂ ಕೋಣೆಗಳಿವೆ. ಮಸೀದಿಗಾಗಿ 34 ಹಳೆಯ ಹಿಂದೂ ರಚನೆ ಕುರುಹು ಬಳಸಿದ್ದಾರೆ ಎಂದು ಸರ್ವೇ ವರದಿ ಬಹಿರಂಗ ಮಾಡಿದೆ.
ಸರ್ವೇಯಲ್ಲಿ ಕನ್ನಡ ಭಾಷೆ ಇದೆ..! ಕಟ್ಟಿಸಿದ್ದು ಕನ್ನಡಿಗರಾ..?
ಜ್ಞಾನವಾಪಿ ಮಸೀದಿಯಲ್ಲಿ ದಕ್ಷಿಣ ಭಾರತದ ಭಾಷೆಗಳ ಲಿಪಿ ಪತ್ತೆ ಆಗಿದೆ ಅನ್ನೋದು ಭಾರತೀಯ ಪುರಾತತ್ವ ಇಲಾಖೆ ಸರ್ವೇಯಲ್ಲಿ ಪತ್ತೆಯಾಗಿದೆ. ಸರ್ವೇ ವರದಿ ಪ್ರಕಾರ ಸಿಕ್ಕಿರುವ ಸಾಕ್ಷ್ಯಗಳಲ್ಲಿ ಕನ್ನಡ, ತೆಲುಗು ಹಾಗು ದೇವನಾಗರಿ ಲಿಪಿ ಕುರುಹುಗಳು ಪತ್ತೆಯಾಗಿದೆ ಎಂದು ಕೋರ್ಟ್‌ಗೆ ಸಲ್ಲಿಕೆ ಆಗಿರುವ ಸ್ತಂಭಗಳನ್ನು ಉಲ್ಲೇಖಿಸಲಾಗಿದೆ. ಅಂದರೆ ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥನ ದೇವಸ್ಥಾನವನ್ನು ದಕ್ಷಿಣ ಭಾರತದ ರಾಜರೇ ನಿರ್ಮಾಣ ಮಾಡಿರುವ ಸಾಧ್ಯತೆಗಳಿವೆ ಎನ್ನಬಹುದು. ದಕ್ಷಿಣ ಭಾರತ ರಾಜರು ಸಾಮಾನ್ಯವಾಗಿ ಬಿಜಯ ನಗರ ಸಾಮ್ರಾಜ್ಯದಲ್ಲಿ ಕೃಷ್ಣದೇವರಾಯ ಆಳ್ವಿಕೆ ಮಾಡುವಾಗ ಕನ್ನಡ ಹಾಗು ತೆಲುಗು ಭಾಷೆಗಳ ಭೂ ಪ್ರದೇಶವನ್ನು ಆಳುತ್ತಿದ್ದರು ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಸಂಗತಿ. ಅದೇ ರೀತಿ ಕನ್ನಡದ ರಾಜಮನೆತನಗಳು ತನ್ನ ವ್ಯಾಪ್ತಿಯನ್ನು ಈಗಿನ ಅಪ್ಘಾನಿಸ್ತಾನದ ತನಕ ವಿಸ್ತರಣೆ ಮಾಡಿದ್ದರು ಎನ್ನುವ ಮಾಹಿತಿ ಇದೆ. ಆದರೆ ಕಾಶಿ ದೇಗುಲವನ್ನು ಕಟ್ಟಿಸಿದ್ದು ಯಾರು..? ಅನ್ನೋದ್ರ ಬಗ್ಗೆ ಕನ್ನಡಿಗ ವಿಧ್ವಾಂಸರು ತನಿಖೆ ಮಾಡಬೇಕಿದೆ.
ಕೃಷ್ಣಮಣಿ