• Home
  • About Us
  • ಕರ್ನಾಟಕ
Wednesday, December 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

10 ವರ್ಷದ ನಂತರ ಮತ್ತೆ ಉಗ್ರರ ಟಾರ್ಗೆಟ್‌ ಆಯ್ತಾ ಬೆಂಗಳೂರು ?!

Pratidhvani by Pratidhvani
March 2, 2024
in Top Story, ಕರ್ನಾಟಕ
0
ರಾಮೇಶ್ವರಂ ಕೆಫೆಯಲ್ಲಿ ಆಗಿರುವುದು ಬಾಂಬ್ ಬ್ಲಾಸ್ಟ್‌: ಡಿಜಿಪಿ ಅಲೋಕ್ ಮೋಹನ್
Share on WhatsAppShare on FacebookShare on Telegram

ADVERTISEMENT

ಮಾರ್ಚ್ 1 ರಂದು ಇಡೀ ಬೆಂಗಳೂರು ಒಂದು ಕ್ಷಣ ಬೆಚ್ಚಿಬಿದ್ದಿತ್ತು. ಮಧ್ಯಾಹ್ನ ೧.೦೯ ರ ಸುಮಾರಿಗೆ ಬೆಂಗಳೂರಿನ ಬ್ಯುಸಿಯಸ್ಟ್‌ ಸ್ಥಳಗಳಲ್ಲಿ ಒಂದಾದ ಕುಂದಲಹಳ್ಳಿ ಸಮೀಪದ ಬ್ರೂಕ್‌ಫೀಲ್ಡ್‌ ನ ರಾಮೇಶ್ವರಂ ಕೆಫೆಯಲ್ಲಿ ನೋಡ ನೋಡ್ತಿದ್ದಂತೆ ಬಾಂಬ್ ಬ್ಲಾಸ್ಟ್‌ ಸಂಭವಿಸಿಬಿಟ್ಟಿತ್ತು. ಊಟಕ್ಕೆ ಅಂತ ಬಂದಿದ್ದ ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಫೋಟದ ತೀವ್ರತೆಗೆ ಅಲ್ಲಿದ್ದವರೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದರು. ಹೆಚ್ಚಾಗಿ ಟೆಕ್ಕಿಗಳೇ ಇರುವ ಈ ಸ್ಥಳದಲ್ಲಿ ಮಧ್ಯಾಹ್ನ ಊಟಕ್ಕೆ ರಾಮೇಶ್ವರಂ ಕೆಫೆಗೆ ಸಾವಿರಾರು ಸಂಖ್ಯೆಯಲ್ಲಿ ಜನ ಬರ್ತಾರೆ, ಹಾಗೆ ಬಂದಿದ್ದವರೆಲ್ಲಾ ಒಂದು ಕ್ಷಣ ದಂಗಾಗಿ ಹೋಗಿದ್ರು. ನೋಡ ನೋಡ್ತಿದ್ದಂತೆ ದೊಡ್ಡ ಸ್ಫೋಟ ಸಂಭವಿಸಿ ಇಡೀ ಕೆಫೆ ದಟ್ಟ ಹೊಗೆಯಿಂದ ಆವರಿಸಿಬಿಟ್ಟಿತ್ತು. ಊಟಕ್ಕೆ ಬಂದವರಿಗೆ ಅರೆಕ್ಷಣ ಸಾವಿನ ದರ್ಶನವಾಗಿತ್ತು. ೧೦ ಸೆಕೆಂಡುಗಳಲ್ಲಿ ಎರಡೆರಡು ಬ್ಲಾಸ್ಟ್‌ ಅಲ್ಲಿ ಸಂಭವಿಸಿತ್ತು.

ಮೊದ-ಮೊದಲಿಗೆ ಇದನ್ನ ಸಿಲಿಂಡರ್‌ ಬ್ಲಾಸ್ಟ್‌ ಅಂತಲೇ ಊಹಿಸಲಾಗಿತ್ತು. ರೆಸ್ಟೋರೆಂಟ್‌ ನ ಸಿಲಿಂಡರ್‌ ಬ್ಲಾಸ್ಟ್‌ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಊಹಿಸಲಾಗಿತ್ತು, ಆದ್ರೆ ಅದಾಗಲೇ ಬಾಂಬ್‌ ಬ್ಲಾಸ್ಟ್‌ ಗುಮಾನಿಯೂ ಶುರುವಾಗಿತ್ತು. ಬ್ಲಾಸ್ಟ್‌ ಆದ ಸಂದರ್ಭದಲ್ಲಿ ಅಲ್ಲೇ ಇದ್ದ ಪ್ರತ್ಯಕ್ಷದರ್ಶಿಗಳು ಇದು ಸಿಲಿಂಡರ್‌ ಸ್ಫೋಟ ಅಲ್ಲವೇ ಅಲ್ಲ ಅನ್ನೋದನ್ನ ಖಾತ್ರಿಪಡಿಸಿದ್ದರು. ಸ್ಥಳಕ್ಕೆ ಬಂದು ತನಿಖೆ ಆರಂಭಿಸಿದ ಪೋಲಿಸರು ಮತ್ತು ಎಫ್‌ಎಸ್‌ಎಲ್‌ ತಂಡಕ್ಕೆ ಇದೊಂದು ಬಾಂಬ್‌ ಬ್ಲಾಸ್ಟ್‌ ಅಂತ ಪತ್ತೆ ಹಚ್ಚಲು ಹೆಚ್ಚೇನು ಸಮಯ ಹಿಡಿಯಲಿಲ್ಲ. ಬ್ಯಾಟರಿ ಮತ್ತು ಐಇಡಿ ಬಳಸಿ ನಡೆಸಲಾಗಿರುವ ಬ್ಲಾಸ್ಟ್‌ ಎಂದು ಪೋಲಿಸರು ಖಚಿತಪಡಿಸಿದ್ದರು.

ಗ್ರಾಹಕರ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ತನ್ನ ಬ್ಯಾಗ್‌ ನಲ್ಲಿ ಈ ಸ್ಫೋಟಕವನ್ನ ತಂದಿದ್ದ. ಸಹಜವಾಗೇ ತಿಂಡಿ ತಿಂದು ವಾಷ್‌ ಬೇಸನ್‌ ಬಳಿ ಕೈ ತೊಳೆಯಲು ಹೋದಾಗ ಆ ಬ್ಯಾಗ್‌ ನ ಅಲ್ಲೆ ಪಕ್ಕದಲ್ಲಿದ್ದ ಡಸ್ಟ್‌ಬಿನ್‌ನಲ್ಲಿ ಇಟ್ಟು ಅಲ್ಲಿಂದ ಹೊರನಡೆದಿದ್ದಾನೆ. ನಂತರ ಈ ಬ್ಯಾಗ್‌ ಯಾವುದು – ಇಲ್ಲಿ ಹೇಗೆ ಬಂತು ಅನ್ನೋದನ್ನ ಯಾವೊಬ್ಬ ಗ್ರಾಹಕ ಅಥವಾ ಸಿಬ್ಬಂದಿ ಗಮನಹರಿಸಿಲ್ಲ. ಈ ಸ್ಫೋಟಕದಲ್ಲಿ ಟೈಮರ್‌ ಕೂಡ ಬಳಸಿರೋದು ಬೆಳಕಿಗೆ ಬಂದಿದ್ದು, ಆತ ಹೊರನಡೆದ ಸುಮಾರು ಒಂದೂವರೆ ತಾಸಿನ ನಂತರ ಈ ಬ್ಲಾಸ್ಟ್‌ ಸಂಭವಿಸಿದೆ. ಐಇಡಿ ಮತ್ತು ಟೈಮರ್‌ ಬಳಕೆ ಮಾಡಿರೋದ್ರಿಂದ ಇದು ಆಕಸ್ಮಿಕವಾಗಿ ನಡೆದ ಬ್ಲಾಸ್ಟ್‌ ಅಲ್ಲ – ಉದ್ದೇಶಪೂರ್ವಕವಾಗಿಯೇ ನಡೆದಿರುವ ಉಗ್ರರ ಬಾಂಬ್‌ ಬ್ಲಾಸ್ಟ್‌ ಅನ್ನೋದಂತು ಸ್ಪಷ್ಟ. ಆ ಮೂಲಕ ಇದೇ ಹತ್ತು ವರ್ಷದ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಸರಣಿ ಬಾಂಬ್‌ ಬ್ಲಾಸ್ಟ್‌ಗಳನ್ನ ಇದು ಮತ್ತೊಮ್ಮೆ ನೆನಪಿಸುವಂತೆ ಮಾಡಿದೆ. ಬೆಂಗಳೂರು ಮತ್ತೆ ಉಗ್ರರ ಟಾರ್ಗೆಟ್‌ ಆಗಿದ್ಯಾ ಎಂಬ ಆತಂಕ ರಾಜ್ಯದ ಜನರಲ್ಲಿ ಮೂಡೂವ ಹಾಗೆ ಮಾಡಿದೆ.

ಆದಷ್ಟು ಬೇಗ ತನಿಖೆ ಮಾಡಿ ಇಂಥ ಹೀನ ಕೃತ್ಯವೆಸಗಿದ ಉಗ್ರರ ಹೆಡಿಮುರಿ ಕಟ್ಟಿ ಜನರಿಗೆ ಅಭಯ ನೀಡಬೇಕಾಗಿರೋದು ಪೋಲಿಸರು ಮತ್ತು ಎನ್‌ಐಎ. ರಾಜ್ಯ ಸರ್ಕಾರ ಪೂರ್ಣ ಗಮನಹರಿಸಿ ಬೆಂಗಳೂರಿನ ಭದ್ರತೆಗೆ ಆದ್ಯತೆ ನೀಡಿ ಜನರ ಆತಂಕವನ್ನ ದೂರ ಮಾಡಬೇಕಿದೆ. ಇಲ್ಲವಾದ್ರೆ ಬೆಂಗಳೂರು ಉಗ್ರರ ಅಟ್ಟಹಾಸಕ್ಕೆ ಸಿಲುಕಿ ನಲುಗಿದ್ರೂ ಅಚ್ಚರಿಯಿಲ್ಲ .

Previous Post

ಬೆಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ರಾಜಕೀಯ ಸಲ್ಲ: ಸಿಎಂ ಸಿದ್ದರಾಮಯ್ಯ

Next Post

ಮೊನ್ನೆ ಪಾಕ್‌ ಜಿಂದಾಬಾದ್‌ – ನಿನ್ನೆ ಬಾಂಬ್‌ ಬ್ಲಾಸ್ಟ್‌ – ಮುಂದೇನು ?!

Related Posts

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಶಾಕ್
ಕರ್ನಾಟಕ

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಶಾಕ್

by ಪ್ರತಿಧ್ವನಿ
December 3, 2025
0

ಬೆಂಗಳೂರು: ಅತ್ಯಾಚಾರ ಕೇಸ್ ನಲ್ಲಿ ಜೀವಿತಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ(Prajwal Revanna)ಗೆ ಹೈಕೋರ್ಟ್ ಶಾಕ್ ನೀಡಿದೆ. ಶಿಕ್ಷೆ ಅಮಾನತ್ತಿನಲ್ಲಿಟ್ಟು ಜಾಮೀನು ನೀಡಲು ಹೈಕೋರ್ಟ್...

Read moreDetails
ಬಾಗಲಕೋಟೆಯಲ್ಲಿ ಭೀಕರ ರಸ್ತೆ ಅಪಘಾತ: ನಾಲ್ವರು ಯುವಕರು ಸ್ಥಳದಲ್ಲೇ ಸಾ**

ಬಾಗಲಕೋಟೆಯಲ್ಲಿ ಭೀಕರ ರಸ್ತೆ ಅಪಘಾತ: ನಾಲ್ವರು ಯುವಕರು ಸ್ಥಳದಲ್ಲೇ ಸಾ**

December 3, 2025
ಕುಡುಕರಿಗೊಬ್ಬ, ಬ್ಯಾಚುಲರ್‌ಗೆ ಮತ್ತೊಬ್ಬ: ಹಿಂದೂ ದೇವತೆಗಳ ಬಗ್ಗೆ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ

ಕುಡುಕರಿಗೊಬ್ಬ, ಬ್ಯಾಚುಲರ್‌ಗೆ ಮತ್ತೊಬ್ಬ: ಹಿಂದೂ ದೇವತೆಗಳ ಬಗ್ಗೆ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ

December 3, 2025
ಮಹಿಳಾ ನೌಕರರಿಗೆ ಋತುಚಕ್ರ ರಜೆ ಆದೇಶ ಈ ತಕ್ಷಣದಿಂದಲೇ ಜಾರಿ..!

ಮಹಿಳಾ ನೌಕರರಿಗೆ ಋತುಚಕ್ರ ರಜೆ ಆದೇಶ ಈ ತಕ್ಷಣದಿಂದಲೇ ಜಾರಿ..!

December 3, 2025
ರಜತ್‌, ಚೈತ್ರಾ ಈ ವಾರವೇ ಔಟ್‌: ಹಾಲಿ ಸ್ಪರ್ಧಿಗಳಿಗೆ ಚಮಕ್ ಕೊಟ್ರಾ ಬಿಗ್‌ ಬಾಸ್‌..?

ರಜತ್‌, ಚೈತ್ರಾ ಈ ವಾರವೇ ಔಟ್‌: ಹಾಲಿ ಸ್ಪರ್ಧಿಗಳಿಗೆ ಚಮಕ್ ಕೊಟ್ರಾ ಬಿಗ್‌ ಬಾಸ್‌..?

December 3, 2025
Next Post
ಬೆಂಗಳೂರಿನ ಪ್ರಖ್ಯಾತ ಕೆಫೆಯಲ್ಲಿ ಸ್ಫೋಟ: ಐವರಿಗೆ ಗಾಯ

ಮೊನ್ನೆ ಪಾಕ್‌ ಜಿಂದಾಬಾದ್‌ - ನಿನ್ನೆ ಬಾಂಬ್‌ ಬ್ಲಾಸ್ಟ್‌ - ಮುಂದೇನು ?!

Please login to join discussion

Recent News

ಬಾಗಲಕೋಟೆಯಲ್ಲಿ ಭೀಕರ ರಸ್ತೆ ಅಪಘಾತ: ನಾಲ್ವರು ಯುವಕರು ಸ್ಥಳದಲ್ಲೇ ಸಾ**
Top Story

ಬಾಗಲಕೋಟೆಯಲ್ಲಿ ಭೀಕರ ರಸ್ತೆ ಅಪಘಾತ: ನಾಲ್ವರು ಯುವಕರು ಸ್ಥಳದಲ್ಲೇ ಸಾ**

by ಪ್ರತಿಧ್ವನಿ
December 3, 2025
ಕುಡುಕರಿಗೊಬ್ಬ, ಬ್ಯಾಚುಲರ್‌ಗೆ ಮತ್ತೊಬ್ಬ: ಹಿಂದೂ ದೇವತೆಗಳ ಬಗ್ಗೆ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ
Top Story

ಕುಡುಕರಿಗೊಬ್ಬ, ಬ್ಯಾಚುಲರ್‌ಗೆ ಮತ್ತೊಬ್ಬ: ಹಿಂದೂ ದೇವತೆಗಳ ಬಗ್ಗೆ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ

by ಪ್ರತಿಧ್ವನಿ
December 3, 2025
ಮಹಿಳಾ ನೌಕರರಿಗೆ ಋತುಚಕ್ರ ರಜೆ ಆದೇಶ ಈ ತಕ್ಷಣದಿಂದಲೇ ಜಾರಿ..!
Top Story

ಮಹಿಳಾ ನೌಕರರಿಗೆ ಋತುಚಕ್ರ ರಜೆ ಆದೇಶ ಈ ತಕ್ಷಣದಿಂದಲೇ ಜಾರಿ..!

by ಪ್ರತಿಧ್ವನಿ
December 3, 2025
ರಜತ್‌, ಚೈತ್ರಾ ಈ ವಾರವೇ ಔಟ್‌: ಹಾಲಿ ಸ್ಪರ್ಧಿಗಳಿಗೆ ಚಮಕ್ ಕೊಟ್ರಾ ಬಿಗ್‌ ಬಾಸ್‌..?
Top Story

ರಜತ್‌, ಚೈತ್ರಾ ಈ ವಾರವೇ ಔಟ್‌: ಹಾಲಿ ಸ್ಪರ್ಧಿಗಳಿಗೆ ಚಮಕ್ ಕೊಟ್ರಾ ಬಿಗ್‌ ಬಾಸ್‌..?

by ಪ್ರತಿಧ್ವನಿ
December 3, 2025
Daily Horoscope: ಇಂದು ದಿಢೀರ್‌ ಧನ ಲಾಭವಾಗುವ ರಾಶಿಗಳಿವು..!
Top Story

Daily Horoscope: ಇಂದು ದಿಢೀರ್‌ ಧನ ಲಾಭವಾಗುವ ರಾಶಿಗಳಿವು..!

by ಪ್ರತಿಧ್ವನಿ
December 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಶಾಕ್

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಶಾಕ್

December 3, 2025
ಬಾಗಲಕೋಟೆಯಲ್ಲಿ ಭೀಕರ ರಸ್ತೆ ಅಪಘಾತ: ನಾಲ್ವರು ಯುವಕರು ಸ್ಥಳದಲ್ಲೇ ಸಾ**

ಬಾಗಲಕೋಟೆಯಲ್ಲಿ ಭೀಕರ ರಸ್ತೆ ಅಪಘಾತ: ನಾಲ್ವರು ಯುವಕರು ಸ್ಥಳದಲ್ಲೇ ಸಾ**

December 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!