ಅನ್ನಭಾಗ್ಯ ಯೋಜನೆಯ ವಿಚಾರಕ್ಕೆ ಸಂಬಂಧ ಪಟ್ಟಂತೆ ರಾಜ್ಯದಲ್ಲಿ ಸಾಕಷ್ಟು ವಿವಾದಗಳು ಭುಗಿಲೆದ್ದಿದೆ, ಅದರಲ್ಲೂ ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆಗೆ ಕಲ್ಲು ಹಾಕಿದ್ದು, ಬಡ ಜನರು ಒಂದು ಹೊತ್ತು ನೆಮ್ಮದಿಯಿಂದ ಊಟ ಮಾಡೋದಕ್ಕೆ ಕೂಡ ತಡೆಯೊಡ್ಡುತ್ತಿದೆ ಎಂಬ ಆರೋಪವನ್ನ ಆಡಳಿತ ಪಕ್ಷ ಕಾಂಗ್ರೆಸ್ ಮಾಡುತ್ತಿದೆ.
ಇನ್ನು ಕೇಂದ್ರ ಸರ್ಕಾರದ ಈ ನಡೆಗೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಆಕ್ರೋಶವನ್ನ ವ್ಯಕ್ತ ಪಡಿಸಿದ್ದು, ಮೋದಿ ಅವರ ದುರಾಡಳಿತ, ಮತ್ತು ಅಧಿಕಾರಶಾಹಿ ದಬ್ಬಾಳಿಕೆಗಳು ಎಂತಹದ್ದು ಎಂಬುವುದನ್ನ ಮತ್ತೆ ಮತ್ತೆ ಸಾಬೀತು ಮಾಡುತ್ತಿವೆ ಎಂದು ಬಿಜೆಪಿ ಹೊರತು ಪಡಿಸಿ ಆಡಳಿತದಲ್ಲಿರುವ ವಿವಿಧ ಪಕ್ಷಗಳ ನಾಯಕರು ಹೇಳಿಕೆಯನ್ನ ನೀಡುತ್ತಿದ್ದಾರೆ. ಇದು ಕೇಂದ್ರ ಸರ್ಕಾರದ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇನ್ನು ಕೇಂದ್ರ ಸರ್ಕಾರ ಅಕ್ಕಿ ಕೊಡೋದಿಲ್ಲ ಎಂಬ ವಿಚಾರಕ್ಕೆ ತಿರುಗಿ ಬಿದ್ದಿರುವ ರಾಜ್ಯ ಸರ್ಕಾರ, ಈ ಬಾರಿ ಎಷ್ಟೇ ಕಷ್ಟ ಆದರೂ ತೊಂದರೆಯಿಲ್ಲ. ನಾವು ಅನ್ನಭಾಗ್ಯ ಯೋಜನೆಯನ್ನ ಜಾರಿಗೆ ತಂದೆ ತರುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನ ನೀಡಿದ್ದು, ಈಗಾಗ್ಲೆ ತೆಲಂಗಾಣ, ಹೈದರಬಾದ್ ಹಾಗೂ ಪಂಜಾಬ್ ಛತ್ತಿಸ್ಗಡ ಮುಖ್ಯಮಂತ್ರಿಗಳೊಂದಿಗೆ ಅಕ್ಕಿ ಖರೀದಿಗಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಆದ್ರೆ ಈ ಬಗ್ಗೆ ಕೆಲ ರೈತ ಮುಖಂಡರು ಅಸಮಧಾನವನ್ನ ವ್ಯಕ್ತ ಪಡಿಸಿದ್ದು, ಬೇರೆ ರಾಜ್ಯಗಳ ಬಳಿ ಅಕ್ಕಿಗಾಗಿ ಬೇಡಿಕೆ ಇಡುವ ಬದಲು, ರಾಜ್ಯ ಸರ್ಕಾರ 5 ಕೆ.ಜಿ ಅಕ್ಕಿ, ಜೊತೆ ಗೋಧಿ ರಾಗಿ, ಸಕ್ಕರೆ, ಜೋಳ ಇವುಗಳಲ್ಲಿ ಯಾವುದಾದರು ಒಂದು ಪಡಿತರವನ್ನ ಸೇರಿಸಿ 10 ಕೆಜಿ ಪಡಿತರ ನೀಡಿದಲ್ಲಿ ಜನತೆಗೆ ಅನುಕೂಲವಾಗುತ್ತದೆ ಎಂದು ಹೇಳುತ್ತಿದ್ದಾರೆ.
ಇನ್ನು ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಮತ್ತು ಕೃಷಿ ಆರ್ಥಿಕ ತಜ್ಞ ಡಾ. ಪ್ರಕಾಶ್ ಕಮ್ಮರಡಿ ಅವರು ಕೂಡ ಸಿಎಂಗೆ ಪತ್ರ ಬರೆದಿದ್ದು, ಅನ್ನಭಾಗ್ಯ ಯೋಜನೆಗೆ ಅಗತ್ಯವಿರುವ ಹೆಚ್ಚುವರಿ ಧಾನ್ಯಕ್ಕೆ ಹುಡುಕಾಟ ನಡೆಸುವ ಬದಲು, ರಾಗಿ ಇಲ್ಲವೇ ಜೋಳ ನೀಡಬಹುದು. ಸ್ವಾಮಿನಾಥನ್ ವರದಿ ಶಿಫಾರಸಿನ ಬೆಂಬಲ ಬೆಲೆ ನೀಡಿ ನಮ್ಮ ರೈತರಿಂದಲೇ ನೇರವಾಗಿ ಖರೀದಿಸಬಹುದು ಎಂದು ಸಲಹೆ ನೀಡಿದ್ದಾರೆ.
ಪ್ರಕಾಶ್ ಕಮ್ಮರಡಿ ಅವರ ಈ ಸಲಹೆಗೆ ರೈತ ಮುಖಂಡರಿಂದ ವ್ಯಾಪಕವಾದ ಬೆಂಬಲ ಸಿಗುತ್ತಿದ್ದು,ಅವರ ಈ ಸಲಹೆ ಉತ್ತಮವಾಗಿದೆ. ಮತ್ತು ರಾಜ್ಯದ ರೈತರ ಸಬಲೀಕರಣಕ್ಕೆ ಕೂಡ ಇದು ಸೂಕ್ತವಾದ ಉಪಾಯ ಎನ್ನವ ಅಭಿಪ್ರಾಯ ವ್ಯಕ್ತವಾಗ್ತಾ ಇದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಸರ್ಕಾರ ಯಾವ ರೀತಿಯಾದ ನಿರ್ಧಾರವನ್ನ ಪ್ರಕಟಿಸಲಿದೆ ಅಂಬುವುದನ್ನು ಕಾದು ನೋಡಬೇಕಾಗಿದೆ.