• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಆದಿತ್ಯ ಎಲ್ 1 ಸೂರ್ಯನನ್ನು ಹ್ಯಾಗೆ ಸಮೀಪಿಸಲಿದೆ? ನಿಮ್ಮ ಎಲ್ಲಾ ಸಂದೇಹಗಳಿಗೆ ಇಲ್ಲಿದೆ ನೋಡಿ ಉತ್ತರ.!

ಪ್ರತಿಧ್ವನಿ by ಪ್ರತಿಧ್ವನಿ
September 2, 2023
in Top Story, ಇದೀಗ, ದೇಶ
0
ಆದಿತ್ಯ ಎಲ್ 1 ಸೂರ್ಯನನ್ನು ಹ್ಯಾಗೆ ಸಮೀಪಿಸಲಿದೆ? ನಿಮ್ಮ ಎಲ್ಲಾ ಸಂದೇಹಗಳಿಗೆ ಇಲ್ಲಿದೆ ನೋಡಿ ಉತ್ತರ.!

ಆದಿತ್ಯ ಎಲ್‌-1

Share on WhatsAppShare on FacebookShare on Telegram

ADVERTISEMENT

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಆದಿತ್ಯಾ ಎಲ್1 ನೌಕೆಯ ಕುರಿತು ಸಾಕಷ್ಟು ಪ್ರಶ್ನೆಗಳು ಎದ್ದಿದ್ದು, ಈ ಎಲ್ಲ ಪ್ರಶ್ನೆಗಳಿಗೂ ಇಸ್ರೋ ಸಂಸ್ಥೆ ಸ್ಪಷ್ಟ ಉತ್ತರ ಕೊಟ್ಟಿದೆ

ಆದಿತ್ಯ ಎಲ್‌-1

ಆದಿತ್ಯ-ಎಲ್1 ಸೂರ್ಯನ ಬಳಿ ಸಾಗುತ್ತದೆಯೇ, ಸೂರ್ಯನ ಬಿಸಿಯನ್ನು ಈ ಬಾಹ್ಯಾಕಾಶ ನೌಕೆ ಹೇಗೆ ತಡೆದುಕೊಳ್ಳಬಹುದು ಎಂಬಿತ್ಯಾದಿ ಪ್ರಶ್ನೆಗಳು ಜನರಲ್ಲಿವೆ. ಇದಕ್ಕೆ ಉತ್ತರವಾಗಿ ಇಸ್ರೋ ಟ್ವಿಟರ್ ನಲ್ಲಿ ಉತ್ತರ ನೀಡಿದ್ದು, ಹಲವಾರು ಮಾಧ್ಯಮಗಳಿಂದ ತಿಳಿದಿರುವಂತೆ, ಆದಿತ್ಯ-L1 ಸೂರ್ಯನ ಕಡೆಗೆ ಹೋಗುವುದಿಲ್ಲ ಎಂದು ಹೇಳಿದೆ. ಹಾಗಾದರೆ ಆದಿತ್ಯಾ ಎಲ್ 1 ತನ್ನ ಕಾರ್ಯಾಚರಣೆ ಯಾವೆಲ್ಲಾ ಕೆಲಸ ಮಾಡಲಿದೆ ಇಲ್ಲಿದೆ ಉತ್ತರ.

ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಆದಿತ್ಯ ಎಲ್‌-1 (Aditya L1) ಉಡಾವಣೆ ಯಶಸ್ವಿಯಾಗಿದ್ದು, ಇದು ಎಲ್ 1 ಪಾಯಿಂಟ್‌ಗೆ ಇಸ್ರೋದ ಮೊದಲ ಮಿಷನ್ ಆಗಿದೆ. ಎಂದು ಕರೆಯಲಾಗುತ್ತದೆ-L1) ಎಂಬ ಪ್ರದೇಶಕ್ಕೆ ಹೋಗುತ್ತಿದೆ. ಇದು ಭೂಮಿಯಿಂದ ಸೂರ್ಯನಿಗೆ ಇರುವ ಒಟ್ಟು ದೂರದ ಕೇವಲ ಶೇ 1 ರಷ್ಟು ದೂರವಷ್ಟೆ. ಆಗಲೂ, ಅದು ಭೂಮಿಯಿಂದ ಸರಿಸುಮಾರು 15 ಲಕ್ಷ ಕಿಮೀ ದೂರದಲ್ಲಿರಲಿದೆ. ಅಂದರೆ, ಭೂಮಿಯಿಂದ ಚಂದ್ರನ ದೂರದ ಸುಮಾರು 4 ಪಟ್ಟು! ಎಂದು ಇಸ್ರೋ ಹೇಳಿದೆ.

L1 ಪಾಯಿಂಟ್‌ ಏಕೆ?
ಆದಿತ್ಯ ಎಲ್1 ನೌಕೆಯನ್ನು ಎಲ್ 1 ಪಾಯಿಂಟ್ ನಲ್ಲೇ ಸ್ಥಿರಗೊಳಿಸಲು ಹಲವು ಕಾರಣಗಳಿದ್ದು, ಆ ಪ್ರದೇಶದಲ್ಲಿ ಅಥವಾ ದೂರದಲ್ಲಿ, ಭೂಮಿಯ ಮತ್ತು ಸೂರ್ಯನ ಗುರುತ್ವಾಕರ್ಷಣೆಯು ಪರಸ್ಪರ ಶೂನ್ಯವಾಗಿರುತ್ತವೆ. ಇದರರ್ಥ, ಬಾಹ್ಯಾಕಾಶ ನೌಕೆಯು ಭೂಮಿಯನ್ನು ಸುತ್ತುವ ಅಗತ್ಯವಿಲ್ಲ ಮತ್ತು L1 ಬಿಂದುವಿನ ಸುತ್ತ ‘ಹಾಲೋ ಕಕ್ಷೆ’ ಯಲ್ಲಿ ಕುಳಿತುಕೊಳ್ಳಬಹುದು ಎಂದಾಗಿದೆ. ಇದರಿಂದ, ಬಾಹ್ಯಾಕಾಶ ನೌಕೆಯು ಸೂರ್ಯನನ್ನು ನಿರಂತರವಾಗಿ ವೀಕ್ಷಿಸಲು ಅನುವಾಗಲಿದೆ. 

ಎಲ್​1 ಪಾಯಿಂಟ್ ಎಂದರೇನು?
ಭೂಮಿ ಮತ್ತು ಸೂರ್ಯರ ನಡುವೆ 15 ಕೋಟಿ ಕಿಲೋಮೀಟರ್ ಅಂತರವಿದೆ ಎನ್ನಲಾಗಿದೆ. ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿ ಎಲ್1 ಲ್ಯಾಗ್ರೇಂಜ್ ಬಿಂದುವಿದ್ದು, ಲ್ಯಾಗ್ರೇಂಜ್ ಬಿಂದು ಎಂದರೆ ಎರಡು ಗ್ರಹಗಳ ನಡುವಣ ಗುರುತ್ವ ಶಕ್ತಿ ಶೂನ್ಯವಾಗಿರುವ ಪ್ರದೇಶ ಅಥವಾ ಶೂನ್ಯ ಬಿಂದು ಆಗಿದೆ. ಭೂಮಿಯ ಮತ್ತು ಸೂರ್ಯನ ಗುರುತ್ವಾಕರ್ಷಣೆಯು ಪರಸ್ಪರ ಶೂನ್ಯವಾಗಿರುವ ಬಿಂದುವನ್ನು ಲ್ಯಾಗ್ರೇಂಜ್ ಬಿಂದು 1 ಅಥವಾ ಎಲ್​​1 ಎಂದು ಕರೆಯಲಾಗುತ್ತದೆ.

ಇದನ್ನು ಓದಿ:4 ವರ್ಷಗಳ ಬಳಿಕ ಕಾದಾಟಕ್ಕೆ ಸಜ್ಜಾದ ಪಾಕ್ ಮತ್ತು ಭಾರತ :ಪಂದ್ಯಕ್ಕೆ ಎದುರಾದ ಮಳೆ ಆತಂಕ, ಅಭಿಮಾನಿಗಳಿಗೆ ನಿರಾಸೆಯಾಗಲಿದ್ಯಾ..?

ಏನೆಲ್ಲ ಅಧ್ಯಯನ ಮಾಡಲಿದೆ?
ಸೂರ್ಯನ ಮೇಲ್ಮೈ, ಸೂರ್ಯನ ಕಿರಣ, ತಾಪಮಾನ, ಸೌರಜ್ವಾಲೆ, ಸೂರ್ಯನ ಸುತ್ತಲಿನ ವಾತಾವರಣದ ಬಗ್ಗೆ ಆದಿತ್ಯ ಎಲ್​-1 ಅಧ್ಯಯನ ನಡೆಸಲಿದೆ. ಈ ವಿಚಾರದಲ್ಲಿ ಇಸ್ರೋ ವಿಜ್ಞಾನಿಗಳ ಅಧ್ಯಯನಕ್ಕೆ ಪೂರಕ ಚಿತ್ರಗಳನ್ನು, ಮಾಹಿತಿಗಳನ್ನು ಒದಗಿಸಲಿದೆ.

ಹೇಗಿದ್ದಾನೆ ಸೂರ್ಯ?
ಸೂರ್ಯ ಭೂಮಿಯಿಂದ 15 ಕೋಟಿ ಕಿ.ಮೀ.ಗಳಷ್ಟು ದೂರನಿದ್ದಾನೆ. ಸೂರ್ಯನ ವಯಸ್ಸು 4.5 ಬಿಲಿಯನ್‌ ವರ್ಷಗಳು. ಹೈಡ್ರೋಜನ್‌ & ಹೀಲಿಯಂ ಗ್ಯಾಸ್‌ನ ಕೆಂಡದುಂಡೆ ಸೂರ್ಯ. ಮೇಲ್ಮೈನಲ್ಲಿ 5,500 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿದೆ. ಮಧ್ಯಭಾಗ ಕೋರ್‌ನಲ್ಲಿ ಊಹಿಸಲಾಗದಷ್ಟು ಶಾಖವಿದೆ. 1.5ಕೋಟಿ ಡಿಗ್ರಿ ಸೆಲ್ಸಿಯಸ್‌ನ ಗರಿಷ್ಠ ತಾಪಮಾನವಿದೆ.

Tags: Aditya-L1IndiaIndian Space Research OrganisationISROsun
Previous Post

ಮಂಗಳೂರು | ಕೊರಗಜ್ಜನಿಗೆ ನಟಿ ರಕ್ಷಿತಾ ಪ್ರೇಮ್‌ ಪ್ರಾರ್ಥನೆ

Next Post

ಟಿಪ್ಪು ಜಯಂತಿ ಮೂಲಕ ಸಿಎಂ ಸಿದ್ದರಾಮಯ್ಯ ರಾಜ್ಯದ ಸೌಹಾರ್ದತೆ ಕೆಡಿಸಿದರು: ಪ್ರತಾಪ್‌ ಸಿಂಹ

Related Posts

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?
Top Story

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?

by ಪ್ರತಿಧ್ವನಿ
May 25, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆಗೆ ಇದೀಗ ಮತ್ತೆ ಕತ್ತರಿ ಬೀಳುವ ಭೀತಿ ಎದುರಾಗಿದೆ. ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಲಕ್ಷಾಂತರ...

Read moreDetails
AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

May 25, 2026
BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

May 25, 2026
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

May 25, 2026
Next Post
ಪ್ರತಾಪ್‌ ಸಿಂಹ

ಟಿಪ್ಪು ಜಯಂತಿ ಮೂಲಕ ಸಿಎಂ ಸಿದ್ದರಾಮಯ್ಯ ರಾಜ್ಯದ ಸೌಹಾರ್ದತೆ ಕೆಡಿಸಿದರು: ಪ್ರತಾಪ್‌ ಸಿಂಹ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada